Breaking News

ಯಲ್ಲಾಪುರ ತಾಲೂಕಿನ ಕೀರ್ತಿ ಶಿಖರಕ್ಕೆ ಮತ್ತೊಂದು ಗರಿ ಮೂಡಿಸಿದ ಹಿತ್ಲಳ್ಳಿ ತನಯ ಹೆಗಡೆ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಹಿತ್ಲಳ್ಳಿ ಮೂಲದ ತನಯ ಹೆಗಡೆ ಸಿ ಇ ಟಿ ಯಲ್ಲಿ ರಾಜ್ಯಕೆ 45 ನೇ ರ‍್ಯಾಂಕ್ ಹಾಗೂ ಜೆ ಇ ಇ ಅಡ್ವಾನ್ಸಡ್ ನಲ್ಲಿ ದೇಶಕ್ಕೆ 1790 ನೇ ರ‍್ಯಾಂಕ್ ಗಳಿಸಿ ಅದ್ಭುತ ಸಾಧನೆ ಮಾಡಿರುತ್ತಾನೆ.


ತನಯ ಹೆಗಡೆ ಹಿತ್ಲಳ್ಳಿ ಗ್ರಾಮದ ನಿವಾಸಿಗಳಾದ ವಿನಾಯಕ ಹೆಗಡೆ ಮತ್ತು ಶಾಂತಲಾ ಹೆಗಡೆ ದಂಪತಿಗಳ ಪುತ್ರನಾಗಿದ್ದು 1 ರಿಂದ 7 ನೇ ತರಗತಿ ವರೆಗೆ ಹಿತ್ಲಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 8 ರಿಂದ10 ರ ವರೆಗೆ ಭೈರುಂಬೆ ಪ್ರೌಢಶಾಲೆ ಯಲ್ಲಿ ವಿದ್ಯಾಬ್ಯಾಸ ಪಡೆದು ದೇಶದ ಪ್ರತಿಷ್ಠಿತ ಜೆ ಇ ಇ ಅಡ್ವಾನ್ಸಡ್ ನಲ್ಲಿ ಈ ಸಾಧನೆ ಮಾಡಿರುವುದು ಶ್ರೇಷ್ಠ ಸಾಧನೆಯಾಗಿರುತ್ತದೆ ಮತ್ತು ತಾಲೂಕಿನ ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾನೆ. ಈತನ ಶ್ರೇಷ್ಠ ಸಾಧನೆಗೆ ತಾಲೂಕಿನ ಗಣ್ಯರು,ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು, ಸಕಲ ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ಧಾರ್ಮಿಕ ಮುಖಂಡರು ವಿಶೇಷವಾಗಿ ಹುಟ್ಟೂರಿನ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಸಾಧನೆ ಎಂದಿಗು ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ ತನಯ ಹೆಗಡೆ ಶ್ರಮ ಸಾಧನೆಗೆ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಮತ್ತು ಯೂ-ಟ್ಯೂಬ್ ಚಾನಲ್ ವತಿಯಿಂದ ಅಭಿನಂದನೆಗಳು ಈ ಸೀಮೆಯ ಶಕ್ತಿ ಮಾತೆ ಯಲ್ಲಾಪುರದ ಗ್ರಾಮದೇವಿಯರ ಅನುಗ್ರಹ ಸದಾ ನಿನ್ನ ಬೆನ್ನಿಗಿರಲಿ ಹಾಗು ಇಂತಹ ಅಮೂಲ್ಯ ರತ್ನವನ್ನು ತಾಲೂಕಿನ ಹೆಮ್ಮೆ ಹೆಚ್ಚಿಸಲೆಂದೇ ನೀಡಿದ ಮಾತ ಪಿತೃಗಳಾದ ವಿನಾಯಕ ಹೆಗಡೆ ಮತ್ತು ಶಾಂತಲಾ ಹೆಗಡೆ ದಂಪತಿಗಳಿಗೆ ಸಮಸ್ತ ತಾಲೂಕಿನ ಜನತೆಯ ಪರವಾಗಿ ಕೃತಜ್ಞತೆಗಳು ತನಯನ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸುವ ಶ್ಯಾಮಲಾ ನಾಗೇಶ್, ಪ್ರಧಾನ ಸಂಪಾದಕಿ, ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *