Breaking News

ಸೂರಿಲ್ಲದ ಬಡವರಿಗೆ ಸೂರೊದಗಿಸಿದ ಆಶ್ರಯದಾತ ನಮ್ಮ ಮನೆ ಮಗ ಸಚಿವ ಶಿವರಾಮ್ ಹೆಬ್ಬಾರ್..

ಸಾದಾರಣ ವ್ಯಕ್ತಿತ್ವದ ಅಸಾಧಾರಣ ವ್ಯಕ್ತಿ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್
ಹೆಬ್ಬಾರ್ ನಗರಕ್ಕೆಂದು ಮಂಜೂರಿ ಮಾಡಿಸಿದ ಸ್ಥಳವನ್ನು 2020 ರಲ್ಲಿ ಹೆಬ್ಬಾರ್ ಮತ್ತು ಅನುಯಾಯಿಗಳು ವೀಕ್ಷಿಸಿದ ಸಂದರ್ಭ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ…. ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……


ಪ್ರತಿಧ್ವನಿ, ಯಲ್ಲಾಪುರ : ಪ್ರತಿ ಮನುಷ್ಯನ ಅತ್ಯಾವಶ್ಯಕ ವ್ಯವಸ್ಥೆ ಯಲ್ಲಿ ವಾಸಿಸುವ ಮನೆಯು ಪ್ರಮುಖವಾದುದು. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಭೂಮಿಯ ಲಭ್ಯತೆ ಅತಿ ಕಡಿಮೆ. ಅದರಲ್ಲು ಯಲ್ಲಾಪುರ ತಾಲೂಕಿನಂತಹ ಅರಣ್ಯಪ್ರದೇಶವೆ ಹೆಚ್ಚಾಗಿರುವಾಗ ಸ್ವಂತ ಸೂರಿನ ಕನಸು ಬಲು ದೂರ ಇಂತಹ ಸಂದಿಗ್ದತೆಯ ನಡುವೆಯು ಸರ್ಕಾರ ಮಟ್ಟದಲ್ಲಿ ಸತತವಾಗಿ ಪ್ರಯತ್ನಿಸಿ ಬಡ ಮದ್ಯಮ ವರ್ಗದ ಸ್ವತಃ ಸೂರಿನ ಕನಸು ನನಸಾಗಿಸಿದ ಶ್ರೇಯಸ್ಸು ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಸಲ್ಲುತ್ತದೆ.

ಶ್ರಮಪಟ್ಟು ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಿ ಪಡೆದ ಸ್ಥಳದಲ್ಲಿ ಭವಿಷ್ಯದ ಯೋಜನೆಗಳನ್ನು ಅನುಷ್ಡಾನಗೊಳಿಸುವತ್ತ ಚಿಂತನೆ ಮತ್ತು ಪರಿಶೀಲನೆ ನಡೆಸಿದ ಸಚಿವ ಹೆಬ್ಬಾರ್ ಮತ್ತು ಆಪ್ತ ವರ್ಗ ಹಾಗು ಅಧಿಕಾರಿಗಳು


      ಯಲ್ಲಾಪುರ ಪಟ್ಟಣದ ಮಂಜುನಾಥನಗರ ವಾಡ್೯ನ ವ್ಯಾಪ್ತಿಯಲ್ಲಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಹಿಂಭಾಗ 10 ಎಕರೆ ಭೂಮಿಯನ್ನು ಸಚಿವರಾದ ಹೆಬ್ಬಾರ್ ಸಂಭಂದ ಪಟ್ಟ ಅಧಿಕಾರಿಗಳೊಡನೆ ಇಲಾಖೆಯ ಸಚಿವರೊಡನೆ ಕೊನೆಗೆ ಮುಖ್ಯಮಂತ್ರಿಗಳೊಡನೆ ಚರ್ಚಿಸಿ ಪ್ರಯತ್ನಪಟ್ಟು ಪಟ್ಟಣ ಪಂಚಾಯತ ಸುಪರ್ಧಿಗೆ ನೀಡುವಲ್ಲಿ ಯಶಸ್ವಿಯಾದರು.

ಬಡವರಿಗೆ ಸೂರು ನೀಡುವ ಉದ್ದೇಶದಿಂದ ಪ್ರಾರಂಭಿಸಿದ ಕಟ್ಟಡ ನಿರ್ಮಾಣ ಕಾಮಗಾರಿ ಸಮರೋಪಾದಿಯಲ್ಲಿ ಪ್ರಾರಂಭವಾಗಿದ್ದು
ಕಾಮಗಾರಿ ಅಡೆತಡೆ ಇಲ್ಲದೆ ನಿರ್ವಿಘ್ನವಾಗಿ ಸಾಗಿದ್ದು.

ನಂತರ ಆ ಭೂಮಿಯನ್ನು ಕೊಳಚೆ ನಿರ್ಮೂಲನ ಅಭಿವೃದ್ಧಿ ಮಂಡಳಿ ಅಧಿನಕ್ಕೆ ಹಸ್ತಾಂತರಿಸಿ  G+2 ಮಾದರಿಯ ಗೃಹ ನಿರ್ಮಾಣದ ಯೋಜನೆಯನ್ನು ಅನುಷ್ಟಾನಗೊಳಿಸಿ ಕೊನೆಗು ಈ ಪ್ರದೇಶದಲ್ಲಿ ಸುಮಾರು 570 ಕ್ಕು ಅಧಿಕ ಮನೆಗಳ ನಿರ್ಮಾಣಕ್ಕೆ ಸಾಹಸ ಮಾಡಿದರು.

ಪಟ್ಟಣ ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಹಾಗು ಸ್ಥಳೀಯ ವಾಡ್೯ ಸದಸ್ಯರು ಹಾಗು ಮುಖ್ಯಾಧಿಕಾರಿ ಗಳು ಕಾಮಗಾರಿ ಪ್ರಗತಿ ಪರಿಶೀಲಿಸಿದ ಸಂದರ್ಭ

ಇದೀಗ ಭಾರತೀಯ ಸನಾತನ ಪರಂಪರೆ ಆಧಾರಿತ  ನೂತನ ನಾಮ ಸಂವತ್ಸರದ ಯುಗಾದಿಯ ಶುಭ ಸಂದರ್ಭದಲ್ಲಿ ಲೋಕಾರ್ಪಣೆ ಮಾಡುತ್ತಿರುವುದು ಜನಮೆಚ್ಚುವ ದೈವ ಕಾರ್ಯದಷ್ಟೆ ಶ್ರೇಷ್ಟವಾಗಿದೆ.


         ಕೇವಲ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಜನತೆಗೆ ನೀಡಬಹುದಾದ ಮೂಲಭೂತ ಸೌಕರ್ಯಗಳನ್ನು ನೀಡುವುದು ರಾಜಕೀಯ ನಾಯಕನ ಲಕ್ಷಣ. ಆ ವ್ಯಾಪ್ತಿಯನ್ನು ಮೀರಿ ಬಡವರ ಕಣ್ಣೊರೆಸಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಕೈಲಾದ ಸೇವೆ ಸಲ್ಲಿಸಿ ಕ್ಷೇತ್ರದ ಜನರ ಹೃದಯದಲ್ಲಿ ಸ್ಥಾನ ಪಡೆಯುವರೆ ಜನ ಸಾಮಾನ್ಯರ ಮಹಾನ್ ನಾಯಕರಾಗಬಲ್ಲರು ಅದಕ್ಕೆ ರಾಜ್ಯದಲ್ಲಿಯೆ ತಾಜಾ ಉದಾಹರಣೆ ಎಂದರೆ ನಮ್ಮ ನಿಮ್ಮ ಮನೆಯ ಮಗ ಅರಬೈಲ್ ಶಿವರಾಮ್ ಹೆಬ್ಬಾರ್.

ತಲೆ ಎತ್ತಿ ನಿಂತಿರುವ ಬಡವರ ಪಾಲಿನ ಸ್ವಂತ ಸೂರಿನ G +2 ಮಾದರಿ ಸಮುಚ್ಚಯ


        ಲಾರಿ ಕ್ಲೀನರ್ ಆಗಿ ಡ್ರೈವರ್ ಆಗಿ ಬೆವರು ಹರಿಸಿ ದುಡಿದ ಶ್ರಮಿಕ, ಹೋಟೆಲ್ ಮೆ ಖಾನ ಚತ್ತರ್ ಮೆ ಸೋನಾ ಎಂಬಂತೆ ರಾಜ್ಯ ಹೊರ ರಾಜ್ಯ ಎಂದು ಸುತ್ತುತ್ತ ಸಿಕ್ಕ ಸಮಯದಲ್ಲಿ ಒಂದಷ್ಟು ಊಟ ಮಾಡಿ ನಿದ್ದೆ ಬಂದಾಗ ಮರದ ನೆರಳು, ಲಾರಿಯ ಒಳಗೆ, ಒಮ್ಮೊಮ್ಮೆ ಸಣ್ಣ ಬಸ್ ನಿಲ್ದಾಣದಲ್ಲು ದಿನಕಳೆದದ್ದು ಇಂದು ಇತಿಹಾಸ ಆದರೆ ಅದಾವುದನ್ನು ಮರೆಯದೆ ಮನಸ್ಸಿನಲ್ಲಿಟ್ಟುಕೊಂಡು ಬಡವರ ಬದುಕು ಹೇಗೆ ಅವರ ಕನಸುಗಳೇನು ಎಂದು ಅರಿತು ತನಗೆ ಅಧಿಕಾರ ಬಂದಾಗಿನಿಂದ ಪ್ರತಿ ನಿತ್ಯ ಬಡಮಧ್ಯಮವರ್ಗದ ಮತ್ತು ಹೆಚ್ಚಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ ದುಡಿಯುತ್ತ ಇಂದು ರಾಜ್ಯಕ್ಕೆ ಮನೆಮಾತಾಗಿರುವ ಕಾರ್ಮಿಕರ ಮನೆ ಬೆಳಗಿದ ನಾಯಕರೆಂದು ಕರೆಸಿಕೊಳ್ಳುವ ಶಿವರಾಮ್ ಹೆಬ್ಬಾರ್ ನಿಜಕ್ಕು ಕ್ಷೇತ್ರದ ಮನೆಮಗನೆ.

ನುಡಿದಂತೆ ನಡೆದವರು ಹಗಲಿರುಳು ಬಡವರಿಗಾಗಿ ದುಡಿದವರು ಕಾಯಕಯೋಗಿ ಸಚಿವ ಹೆಬ್ಬಾರ್ ಜನ ಸೇವೆಯ ಜಲಕ್


      ಹಲವು ದಶಕಗಳಿಂದ ಯಲ್ಲಾಪುರದಲ್ಲಿ ಒಂದಿಂಚು ಭೂಮಿಯನ್ನು ಸರ್ಕಾರದಿಂದ ನೀಡಲಾಗಿರಲಿಲ್ಲ ಸಚಿವ ಹೆಬ್ಬಾರ್ ಪ್ರಯತ್ನದಿಂದ ಹೊಸ ಇತಿಹಾಸ ಸೃಷ್ಟಿಯಾಗಿ ಇದೀಗ 570 ಮನೆಗಳ ಕಾಮಗಾರಿ ಬರದಿಂದ ಸಾಗಿದೆ ಮಾಚ್೯ 23 ರಂದು ಯುಗಾದಿ ಶುಭ ಸಂದರ್ಭದಲ್ಲಿ ಉದ್ಘಾಟಿಸುತ್ತಿರುವುದು ಅತ್ಯಂತ ಅಭಿನಂದನೀಯ ಕಾರ್ಯವಾಗಿದೆ.

      ಕ್ಷೇತ್ರದಾದ್ಯಂತ ಅಭಿವೃದ್ಧಿ ಮಹಾಪೂರವೆ ಹರಿಯಲು ಸಚಿವರಾದ ಹೆಬ್ಬಾರ್ ಅವರ ಶ್ರಮದ ಪ್ರತಿಫಲವೆ ಕಾರಣವಾಗಿದೆ. ಹೆಬ್ಬಾರ್ ಅವರ ಕುರಿತಾಗಿ ಜನರು ಮಾತನಾಡುವುದಕ್ಕಿಂತ ಅವರ ಕಾರ್ಯಗಳೆ ಮಾತನಾಡುತ್ತವೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೆ ಮಾದರಿ ಕ್ಷೇತ್ರವಾಗಿಸುವ ಅವರ ಮಹಾ ಕನಸಿಗೆ ನಮ್ಮೆಲ್ಲರ ಕ್ಷೇತ್ರದ ಸಮಸ್ತ ಜನರ ಆಶಿರ್ವಾದವಿದೆ. ಮಂಜುನಾಥ ನಗರ ವಾಡ್೯ ವ್ಯಾಪ್ತಿಯಲ್ಲಿ ಹೊಸ ನಗರವನ್ನೆ ಸೃಷ್ಟಿ ಮಾಡಿ ಬಡ ಮದ್ಯಮ ವರ್ಗದವರ ಸ್ವಂತ ಸೂರಿನ ಕನಸು ನನಸು ಮಾಡಿದ್ದಕ್ಕೆ ವಾಡ್೯ ಸದಸ್ಯನಾಗಿ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ಸತೀಶ್ ಶಿವಾನಂದ ನಾಯ್ಕ್
ಪಟ್ಟಣ ಪಂಚಾಯತ ಸದಸ್ಯ
ಮಂಜುನಾಥ ನಗರ
    

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *