Breaking News

ಆಧುನಿಕ ಭಗೀರಥ ಶಾಸಕ ಹೆಬ್ಬಾರ್ ಬೊಮ್ಮನಳ್ಳಿ ನೀರು ತರುವ ಪ್ರಯತ್ನ – ನಿರಂತರ ಪೈಪ್ ಲೈನ್ ಕಾಮಗಾರಿ..

ಕೇಬಲ್‌ ನಾಗೇಶ್..🖋


ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಆಧುನಿಕ ಭಗೀರಥ ಎಂದೇ ಕರೆಯಬೇಕಿದೆ. ಕಾರಣ ಹಿಡಿದ ಪಟ್ಟು ಸಡಿಲಿಸದೆ ಸರ್ಕಾರ ಮಟ್ಟದಲ್ಲಿ ನಿರಂತರ ಪ್ರಯತ್ನಸಿ ಕೋಟ್ಯಾಂತರ ಹಣ ತಂದು ಕೆರೆಗಳಿಗೆ ನೀರು ತುಂಬುವ ಯೋಜನೆ ಅನುಷ್ಟಾನಗೊಳಿಸಿ ಬಯಲು ಸೀಮೆ ಪ್ರದೇಶವೆಲ್ಲಾ ಹಸಿರಾಗಿ ಕಂಗೊಳಿಸುವಂತೆ ಮಾಡಿದ್ದಾಗಿದೆ.

  ಇದೀಗ ಯಲ್ಲಾಪುರ ಪಟ್ಟಣದ ಭವಿಷ್ಯದ ಚಿಂತನೆಯಲ್ಲಿ ದೂರದ ಬೊಮ್ಮನಹಳ್ಳಿ ವಾಟರ್ ಪ್ರಾಜೆಕ್ಟ್ ಅನುಷ್ಠಾನ ಗೊಳಿಸುತ್ತಿದ್ದು ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಗೆ ಶತಪ್ರಯತ್ನ ಮಾಡುತ್ತಿದ್ದಾರೆ. ಆನಿಟ್ಟಿನಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು ಕುಡಿಯುವ ನೀರಿನ ಜುಳುಜುಳು ನಾದ ಶೀಘ್ರವಾಗಿ ಯಲ್ಲಾಪುರದಲ್ಲಿ ಕೇಳಿಬರಲಿದೆ.


ರಾಜ್ಯದಲ್ಲಿ ಕೊಳವೆ ಬಾವಿಯನ್ನೇ ಆಧರಿಸಿ ಕುಡಿಯುವ ನೀರಿನ ಅವಶ್ಯಕತೆ ಪೂರೈಸುತ್ತಿರುವ ಕೆಲವೇ ಪಟ್ಟಣ ಪಂಚಾಯತಗಳಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತಿಯೂ ಒಂದು. ಅದಕ್ಕೀಗ ಮುಕ್ತಿ ಬೇಕಿದ್ದು ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಲೇ ಬೇಕಿದೆ
ದಿನಕಳೆದಂತೆ ಪಟ್ಟಣ ಪ್ರದೇಶ ಬೆಳೆಯುತ್ತಿದ್ದು ವಸತಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ 19 ವಾರ್ಡುಗಳಿದ್ದು ಕಳೆದ ಕೆಲ ವರ್ಷಗಳಿಂದ ಕೊಳವೆಬಾವಿಗಳ ಮೂಲಕ ಊರ ನಾಗರೀಕರ ನೀರಿನ ಅವಶ್ಯಕತೆಯನ್ನು ಪೂರೈಸುತ್ತಾ ಬರಲಾಗುತ್ತಿದೆ.


ಸುತ್ತಲೂ ಅರಣ್ಯಪ್ರದೇಶವಿದ್ದು ಕಾಲಕಾಲಕ್ಕೆ ಮಳೆಯೂ ಸಾಕಷ್ಟು ಪ್ರಮಾಣದಲ್ಲಿ ಬೀಳುತ್ತಿರುವುದರಿಂದ ಪಟ್ಟಣದಲ್ಲಿನ ಜಲ ಜೀವನಾಡಿಯಂತಿರುವ ಕೆರೆಗಳು ಇರುವುದರಿಂದ ಸದ್ಯದ ಮಟ್ಟಿಗೆ ಅಂತರ್ಜಲಕ್ಕೇನೂ ಕೊರತೆಯಾಗಿಲ್ಲವಾದರೂ ಪ್ರಕೃತಿ ಮುನಿದು ಮಳೆಯ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಮಟ್ಟ ಬಾರೀ ಪ್ರಮಾಣದಲ್ಲಿ ಕುಸಿದರೆ ಯಲ್ಲಾಪುರ ಪಟ್ಟಣದಲ್ಲಿ ನೀರಿಗೆ ಹಾಹಾಕಾರ ಮುಗಿಲು ಮುಟ್ಟಲಿದೆ.


ಕೊಳವೆ ಬಾವಿ ಹೊರತುಪಡಿಸಿ ಪಟ್ಟಣಕ್ಕೆ ಇನ್ನಾವುದೇ ಮೂಲದಿಂದಲೂ ಸದ್ಯದ ಮಟ್ಟಿಗೆ ನೀರಿನ ಪೂರೈಕೆ ಇಲ್ಲ.
ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಅರಿವಿದ್ದ ಸಚಿವ
ಹೆಬ್ಬಾರ್ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ, ಮುಖ್ಯಮಂತ್ರಿಗಳೊಡನೆ ಚರ್ಚಿಸಿ ಯಲ್ಲಾಪುರ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 100 ಕೋಟಿ ಬೃಹತ್ ವೆಚ್ಛದಲ್ಲಿ ಬೊಮ್ಮನಹಳ್ಳಿ ಅಣೆಕಟ್ಟಿನಿಂದ ಯಲ್ಲಾಪುರಕ್ಕೆ ನೀರು ಸರಬರಾಜು ಯೋಜನೆ ರೂಪಿಸಿದ್ದು ನೀರು ತರುವ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ.


ಬೊಮ್ಮನಹಳ್ಳಿ ಅಣೆಕಟ್ಟು ಪ್ರದೇಶವು ದಾಂಡೇಲಿ ತಾಲೂಕಿನ ಅಂಬಿಕಾನಗರ ಗ್ರಾ.ಪಂ ವ್ಯಾಪ್ತಿಯಲ್ಲಿದ್ದು ರಸ್ತೆ ಮಾರ್ಗವಾಗಿ ಸಾಗಿದರೆ ಯಲ್ಲಾಪುರದಿಂದ 35 ಕಿ.ಮೀ ಅಂತರದಲ್ಲಿದೆ. ಈ ಮೊದಲು ತಟ್ಟಿಹಳ್ಳ ಡ್ಯಾಂನಿಂದ ಪಟ್ಟಣಕ್ಕೆ ನೀರು ತರುವ ಯೋಜನೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಕೈಬಿಟ್ಟಿದ್ದು ಬೊಮ್ಮನಹಳ್ಳಿ-ಯಲ್ಲಾಪುರ ಯೋಜನೆ ಉತ್ತಮವೆನಿಸಿ ಕಾಮಗಾರಿಯು ವೇಗವಾಗಿ‌ಸಾಗುತ್ತಿದೆ.
ದೊಡ್ಡಗಾತ್ರದ ಪೈಪುಗಳ ಮೂಲಕ ನೀರು ಹರಿಸಲಿದ್ದು ಬೃಹತ್ ಗಾತ್ರದ ಜಾಕ್ವೆಲ್ ಹಾಗೂ ಉತ್ಕೃಷ್ಟ ದರ್ಜೆಯ ತಂತ್ರಜ್ಞಾನವನ್ನು ನೀರು ಸರಬರಾಜು ಪ್ರಕ್ರಿಯೆಗೆ ಬಳಸಲಿದ್ದಾರೆ.
ನಿತ್ಯ ನಿರಂತರ ಪೈಪ್ ಅಳವಡಿಕೆ ಕಾರ್ಯ ಸಾಗಿದ್ದು ಹುಬ್ಬಳ್ಳಿ ಕಡೆಗೆ ಸಾಗುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಕಣ್ಣಿಗೆರೆ ತಿರುವಿನ ಸಮೀಪಕ್ಕೆ ಪೈಪ್ ಲೈನ್ ಕಾಮಗಾರಿ ತಲುಪಿದೆ ಅತ್ತ ಕಡೆ ತಾಟವಾಳದ ಸ್ಥಳದಲ್ಲಿ ಕಾಮಗಾರಿ ಜರುಗುತ್ತಿದೆ ಇದಾಗುತ್ತಲೆ ರಾಷ್ಟ್ರೀಯ ಹೆದ್ದಾರಿ ಪಕ್ಕದಿಂದ ಪೈಪ್ ಅಳವಡಿಸುವ ಕಾರ್ಯ ಜರುಗಲಿದೆ.

ಪಕ್ಷ ಯಾವುದಾದರೇನು ಸತ್ಯ ಒಪ್ಪಿಕೊಳ್ಳಲೇಬೇಕಿದೆ. ಯಲ್ಲಾಪುರ ವಿಧಾನ ಸಭಾ ಕ್ಷೇತ್ರವೆಂದು ಅಂಕೋಲಾ ಕ್ಷೇತ್ರದಿಂದ ವಿಭಜನೆಯಾಗಿ ಪ್ರತ್ಯೇಕ ವಾದ ನಂತರ ಮತ್ತು ಪೂರ್ವದಲ್ಲಿ ಆದ ಅಭಿವೃದ್ಧಿ ಕಾರ್ಯಗಳಿಗೆ ಹೊಲಿಸಿದರೆ ಅಜಗಜಾಂತರ ವ್ಯತ್ಯಾಸ ಕಾಣುತ್ತದೆ. ಶಾಸಕ ಹೆಬ್ಬಾರ್ ಶಾಸಕರಾದ ನಂತರ ಕ್ಷೇತ್ರದ ಚಿತ್ರಣವನ್ನೆ ಬದಲಿಸಿದ್ದಾರೆ. ಸರ್ಕಾರಿ ಕಚೇರಿಗಳು ಸ್ವಂತ ಕಟ್ಟಡ ಹೊಂದಿ ಹೈಟೆಕ್ ನಲ್ಲಿ ಕಂಗೊಳಿಸುತ್ತಿವೆ. ಬಯಲು ಸೀಮೆ ಪ್ರಾಂತ್ಯಗಳು ನೀರಿನ ಯೋಜನೆಗಳ ಮೂಲಕ ಹಸಿರಾಗಿವೆ ಮತ್ತಷ್ಟು ಅಭಿವೃದ್ಧಿ ಆಗುತ್ತಿವೆ,ಸಿಸಿ ರಸ್ತೆಗಳ ಆಂದೋಲನವನ್ನೆ ಹೆಬ್ಬಾರ್ ಮಾಡಿದ್ದಾರೆ. ವಿಶೇಷವಾಗಿ ಯಲ್ಲಾಪುರ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು ಭವಿಷ್ಯದ ಪೀಳಿಗೆ‌ ನೂರಾರುಕಾಲ ನೆನಪಾಗಿಟ್ಟುಕೊಳ್ಳುತಹ ” ಬೊಮ್ಮನಹಳ್ಳಿ ಕುಡಿಯುವ ನೀರಿನ ಯೋಜನೆ ಅನುಷ್ಟಾನ ಗೊಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
ಪರಮೇಶ್ವರ ನಂದು ಗಾಂವ್ಕರ್
ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದಲ್ಲೊಂದು ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೆ ಸಾವು- ಹಿಂಬದಿ ಸವಾರನಿಗೆ ಗಂಭೀರ ಗಾಯ.

ಪ್ರತಿಧ್ವನಿ ಯಲ್ಲಾಪುರ : ಪಟದಟಣದ ಹೊರವಲಯ ಮಗೋಡು ಕ್ರಾಸ್ ಸಮೀಪ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ …

Leave a Reply

Your email address will not be published. Required fields are marked *