
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು ತಾಲೂಕಿನ ಕಿರವತ್ತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಜಯ ಕರ್ನಾಟಕ ಸಂಘಟನೆಯ ತಾಲೂಕಾ ಘಟಕದಿಂದ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಎಕ್ಸಾಂ ಕ್ಲಿಪ್ ಪ್ಯಾಡ್‌ಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು.

ಜಯ ಕರ್ನಾಟಕ ಸಂಗಟನೆಯ ತಾಲೂಕಾ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಮಾತನಾಡಿ ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಅಂಜದೇ, ಯಾವುದೇ ಗೊಂದಲಕ್ಕೆ ಒಳಗಾಗದೇ ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಬೇಕೆಂದೂ ಒಂದರಿಂದ ಐದನೇ ರ‍್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಸಂಘಟನೆಯ ವತಿಯಿಂದ ಬಹುಮಾನ ನೀಡುವುದಾಗಿ ಘೋಷಿಸಿ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಎಸ್.ಸಿ / ಎಸ್.ಟಿ ಘಟಕದ ತಾಲೂಕಾಧ್ಯಕ್ಷ ಹಾಗೂ ಎಸ್.ಡಿ.ಎಂ.ಸಿ ಸದಸ್ಯ ಚೆನ್ನಪ್ಪ ಡಿ ಹೆಚ್, ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಹನುಮ ರೆಡ್ಡಿ, ಕಾರ್ಯಾಧ್ಯಕ್ಷೆ ಶಾಹೀನಾ ಮುಜಾವರ, ಉಪಾಧ್ಯಕ್ಷೆ ಫಾತಿಮಾ ಶೇಖ, ಕಿರವತ್ತಿ ಘಟಕಾಧ್ಯಕ್ಷೆ ಫಾತಿಮಾ ದರ್ವೇಶ್ , ಸುಭಾಷ್ ಡುಇ.ಹೆಚ್, ಬಾಬಾಜಾನ್ ಶೇಖ್, ಮುನೀರ್ ಪಟೇಲ್, ರಜಬಲಿ ಒಂಟಿ, ಸಾದಿಕ್ ಖಾಜಿ, ಬಸವರಾಜ್ ಮಂಗಳಿ ಹಾಗು ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜಯ್ ನಾಯ್ಕ , ಸತೀಶ ಯಲ್ಲಾಪುರ , ಶಾಲೆಯ ಶಿಕ್ಷಕರು ಹಾಗೂ ಇನ್ನಿತರ ಪ್ರಮುಖರು, ಊರ ನಾಗರೀಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



Prathidvani Yellapura