

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಶಿವರಾಮ ರ ಹೆಸರು ಬಾರಿ ಸದ್ದು ಮಾಡುತ್ತಿದೆ. ಹೆಬ್ಬಾರ್ ಕಾಂಗ್ರೆಸ್ ಸೇರಲಿದ್ದಾರೆಂಬ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಏನಿದರ ಮರ್ಮ ಹೀಗೊಂದು ನಡೆ ನಡೆಯಲಿದೆಯೆ ? ರಾಜ್ಯ ರಾಜಕಾರಣದಲ್ಲಿ ಎಂಬ ಯಕ್ಷ ಪ್ರಶ್ನೆ ಹಿಡಿದು ಕುಳಿತಿದ್ದಾನೆ ಕ್ಷೇತ್ರದ ಮತದಾರ ಪ್ರಭು.

ಸತ್ಯವೆಷ್ಟು ? ಸುಳ್ಳು ಎಷ್ಟು ? ಎಂಬ ತರ್ಕದ ಗೊಡವೆಗೆ ಹೋಗದೆ ಮಾದ್ಯಮಗಳು ಕಾಂಗ್ರೆಸ್ ಬಾಗಿಲು ತಟ್ಟಿದ ಹೆಬ್ಬಾರ್, ಒಂದು ಹೆಜ್ಜೆ ಬಿಜೆಪಿ ಯಿಂದ ಹೊರಕ್ಕೆ, ಕಮಲ ಬಿಟ್ಟು ಕೈ ಹಿಡಿಯಲಿರುವ ಹೆಬ್ಬಾರ್ ಎಂಬುದಾಗಿ ಬಿತ್ತರಿಸುತ್ತಲೆ ಇವೆ ಆದರೆ ಇದನ್ನೆಲ್ಲ ಶಾಸಕ ಹೆಬ್ಬಾರ್ ಸಾರಾ ಸಗಟಾಗಿ ತಳ್ಳಿಹಾಕಿದ್ದು ತಮ್ಮ ಅತ್ಯಂತ ಅಲ್ಪ ಮತದ ಗೆಲುವಿನ ಹಿಂದೆ ಸ್ವಪಕ್ಷದವರ ಕೈವಾಡವಿತ್ತು ಎಂಬ ನೋವನ್ನು ಅಲ್ಲಲ್ಲಿ ಹೇಳಿಕೊಂಡಿದ್ದಾರೆ ಹೊರತು ಹೆಬ್ಬಾರ್ ಇದುವರೆಗು ನನಗೆ ಬಿಜೆಪಿಯಲ್ಲಿ ಉಸಿರುಗಟ್ಟೊ ವಾತಾವರಣವಿದೆ ನಾನು ಪಕ್ಷ ಬಿಡುವ ಚಿಂತನೆಯಲಿದ್ದೇನೆ ಎಂದು ಎಲ್ಲಿಯೂ ಹೆಳಿಕೆ ನೀಡಿಲ್ಲ ಆದರು ಇಂತಹದ್ದೊಂದು ಸುದ್ದಿ ಮಿಂಚಿನಂತೆ ರಾಜಕಾರಣದಲ್ಲಿ ಹರಿದಾಡುತ್ತಿದ್ದು ರೆಕ್ಕೆ ಪುಕ್ಕ ಹೆಚ್ಚಾಗಿಯೆ ಬಂದಿದೆ.

ಹಾಗೆಂದು ಬಿಜೆಪಿ ಯಲ್ಲಿ ಎಲ್ಲವು ಸರಿ ಇದೆ ಎನ್ನಲಾಗದು ಹೆಬ್ಬಾರ್ ಚುನಾವಣೆ ನಂತರದಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಕಾರಣ ತಮಗೆ ಆದ ಅಸಮದಾನಕ್ಕೆ ಹೈ ಕಮಾಂಡ್ ಮದ್ದು ಅರೆದಿಲ್ಲ ಅಂದರೆ ಪಕ್ಷವಿರೋದಿಗಳ ವಿರುದ್ದ ಲಿಖಿತ ದೂರು ನೀಡಿದರು ಕ್ರಮ ಜರುಗಿಸದಿರುವುದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಸದ್ಯ ಹರಿದಾಡುತ್ತಿರುವ ಕಾಂಗ್ರೆಸ್ ಸೇರುವ ಸುದ್ದಿಗೆ ನೇರವಾಗಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಇದೆಲ್ಲ ಮಾಧ್ಯಮಗಳ ಅತಿ ರಂಜನೀಯ ಸುದ್ದಿ ವಿನಃ ಯಾವುದೆ ಪಕ್ಷದೊಂದಿಗಾಗಲಿ ಅಥವಾ ಯಾವುದೆ ನಾಯಕರ ಜೊತೆಯಲ್ಲಿ ಆದರು ಮಾತುಕತೆ ಮಾಡಿಲ್ಲ ಇರುವ ಪಕ್ಷದೊಳಗೆ ನೋವಾಗಿರುವುದಂತು ಖಂಡಿತ ಎಂದಿದ್ದಾರೆ.
ರವಿವಾರ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾಜಕೀಯ ವಿಶ್ಲೇಷಕರು,ಮಾಧ್ಯಮಗಳ ಚಿತ್ತ ಯಲ್ಲಾಪುರದಲ್ಲಿದ್ದ ಹೆಬ್ಬಾರ್ ಅವರ ಮೇಲೆಯೆ ಇತ್ತು ಅಲ್ಲದೆ ಅವರನ್ನು ಪ್ರತಿ ಬಾರಿಯಂತೆ ಹಲವಾರು ಕೆಲಸಗಳಿಗಾಗಿ ಭೇಟಿ ಮಾಡಲು ಬರುವ ಕ್ಷೇತ್ರದ ತಮ್ಮ ಹಿತೈಷಿಗಳು, ಬೆಂಬಲಿಗರು, ಅಭಿಮಾನಿಗಳು ಮತದಾರರ ಬರುವಿಕೆಗು ಹೊಸ ವ್ಯಾಖ್ಯಾನ ವ್ಯಕ್ತವಾಗಿ ಹೆಬ್ಬಾರ್ ಸಭೆಮೇಲೆ ಸಭೆ ನಡೆಸುತ್ತಿದ್ದಾರೆ ಇನ್ನೊಂದು ವಾರದೊಳಗೆ ಹೆಬ್ಬಾರ್ ಚಿತ್ರಣ ಹೊರಬೀಳಲಿದೆ ಎಂಬ ಮಾತುಗಳು ಗಲ್ಲಿ ಗಲ್ಲಿಯಲ್ಲು ಪ್ರಸ್ತಾಪವಾಗುತ್ತಿವುದಂತು ಸತ್ಯವಾಗಿದೆ.

ಒಂದು ಲೆಕ್ಕಾಚಾರದ ಪ್ರಕಾರ ಇಂತಹ ಸುದ್ದಿಯ ಹಿಂದೆ ಯಾರದ್ದೊ ಉದ್ದೇಶ ಪೂರ್ವಕ ಕೈವಾಡವಿದ್ದು ಯಾರದ್ದೊ ಬೇಳೆ ಬೇಯಿಸಲು ಇನ್ನಾರದ್ದೊ ನೀರನ್ನು ಬಳಸುತ್ತಿದ್ದಾರೆ. ಎಂಬುದು ಪ್ರಮುಖ ವಿಷಯ ಹೊರ ಬರುತ್ತಿದೆ. ಕ್ಷೇತ್ರದ ಮಾಜಿ ಒಬ್ಬರು ಬೆಂಗಳೂರಿನಲ್ಲಿ ಕುಳಿತು ಹೆಬ್ಬಾರ್ ಪಕ್ಷಬಿಡಲಿದ್ದಾರೆ ಎಂಬ ಸುದ್ದಿಗೆ ಬಣ್ಣ ಹಚ್ಚುತ್ತಾ ಇನ್ನಷ್ಟು ರಂಗಾಗಿಸುತ್ತಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ ಯಾರವರು….???






Prathidvani Yellapura