


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.
ಪ್ರತಿಧ್ವನಿ,ಯಲ್ಲಾಪುರ : ಕೋಟ್ಯಾಂತರ ಮೌಲ್ಯ ಸಾರ್ವಜನಿಕ ತೆರಿಗೆ ಹಣದಲ್ಲಿ ಅನುಷ್ಟಾನಗೊಂಡು ಕಾರಣಾಂತರಗಳಿಂದ ಯೋಜನೆ ಸ್ಥಗಿತಗೊಂಡ ನಂತರ ಅಲ್ಲಿದ್ದ ಬೆಲೆಬಾಳುವ ವಸ್ತುಗಳು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಬಿದ್ದು ಹಾಳಾಗುತ್ತಿರುವುದು. ನಿಧಾನವಾಗಿ ಕಣ್ಮರೆಯಾಗುವುದರೊಂದಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

. ಈ ಹಿನ್ನೆಲೆಯಲ್ಲಿ ಗುರುವಾರ ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ್ ಸುಭಾಷ್ ಗಾವಡೆ ಬೇಡ್ತಿ ನದಿ ತಟದಲ್ಲಿರುವ ಕುಡಿಯುವ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಲೆ ಪಾಳುಬಿದ್ದ ಜಾಕ್ ವೆಲ್ ಕೊಠಡಿ ವಿದ್ಯುತ್ ಪರಿವರ್ತಕಗಳು, ಇನ್ನಿತರ ಹಾಳಾಗಿ ಬಿದ್ದಿರುವ ಸಾಮಗ್ರಿಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಭಿಯಂತರ ಹೇಮಚಂದ್ರ ನಾಯ್ಕ್ ಸಿಬ್ಬಂದಿಗಳಾದ ಸಂತೋಷ್ ಶೇಟ್ ತುಳಸೀಕರ ಮತ್ತು ಗುರು ಗಡಗಿ ಉಪಸ್ಥಿತರಿದ್ದರು.
Prathidvani Yellapura