Breaking News

Yearly Archives: 2023

ಸುಡು ಬಿಸಿಲ ಬೇಗೆ ತೀರಿಸುವುದಿನ್ನು ಬಲು ದೂರ ಗಗನಕ್ಕೇರಿದ ನಿಂಬೆಹಣ್ಣಿನ ದರ

ಪ್ರತಿಧ್ವನಿ,ಯಲ್ಲಾಪುರ : ಬೇಸಿಗೆಯ ಜಳ ಹೆಚ್ಚಾದಂತೆಲ್ಲಾ ಎಳನೀರು, ಕಲ್ಲಂಗಡಿ, ಕಬ್ಬಿನಹಾಲು, ಮಜ್ಜಿಗೆ, ಎಳ್ಳುನೀರು, ಶರಬತ್ತು ಹಾಗೂ ಇನ್ನಿತರೆ ದಾಹ ನೀಗುವ ಪಾನೀಯಗಳ ಬೇಡಿಕೆ ಹೆಚ್ಚಿದ್ದು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ವಿಶೇಷವಾಗಿ ಈ ಸಂದರ್ಭದಲ್ಲಿ ನಿಂಬೆ ಹಣ್ಣಿನ ದರ ದಿಡೀರನೆ ಹೆಚ್ಚಾಗಿದ್ದು ಒಂದು ನಿಂಬೆಹಣ್ಣಿಗೆ ೧೦ರೂ ವರೆಗೂ ಏರಿಕೆ ಕಂಡಿದೆ. ಬೇಸಿಗೆಯ ಸಮಯದಲ್ಲಿ ಪೆಪ್ಸಿ, ಕೋಕೋಕೋಲಾದಂತಹ ಪಾನೀಯಗಳಿಗೆ ಮೊರೆ ಹೋಗುವ ಮಂದಿ ಕಡಿಮೆಯಾಗುತ್ತಿದ್ದು ದೇಸೀ ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. …

Read More »

ಭಗವದ್ಗೀತಾ ಪರೀಕ್ಷೆಯಲ್ಲಿ ಬಂಗಾರದ ಸಾಧನೆ ಮಾಡಿದ ಯಲ್ಲಾಪುರ ತಾಲೂಕಿನ ಆನಗೋಡು ಅಗ್ಗಾಸಿಮನೆ ನೇತ್ರಾವತಿ ಕೃಷ್ಣ ಭಟ್

ಪ್ರತಿಧ್ವನಿ,ಯಲ್ಲಾಪುರ: ಬೆಂಗಳೂರಿನ ಗೀತಾ ಪರಿವಾರವು ನಾಲ್ಕು ವಿಭಾಗಗಳಲ್ಲಿ ನೆಡೆಸುವ ಭಗವದ್ಗೀತಾ ಆನ್ ಲೈನ ಪರೀಕ್ಷೆಯಲ್ಲಿ ತಾಲೂಕಿನ ಆನಗೋಡು ಅಗ್ಗಾಸಿಮನೆಯ ನೇತ್ರಾವತಿ ಕ್ರಷ್ಣ ಭಟ್ಟ ಗೀತಾ ಇವರು ೬೦೦ ಅಂಕಕ್ಕೆ ೫೯೮ ಅಂಕ ಪಡೆದು ಬಂಗಾರದ ಪದಕ ಪಡೆದಿದ್ದಾರೆ. ಇವರ ಸಾಧನೆಗೆ ಶ್ರೀಮಾತಾ ವಿವಿಧೋದ್ದೇಶಗಳ ಸೌಹರ್ದ ಸಹಕಾರಿ ಸಂಘದ ಅದ್ಯಕ್ಷ ಜಿ ಎನ್ ಹೆಗಡೆ ಹಿರೆಸರ, ಉಪಾಧ್ಯಕ್ಷ ಎಸ್ ಎಸ್ ಭಟ್ಟ ಅಖಿಲಬ್ರಾಹ್ಮಣ ಮಹಾ ಸಭಾ ಉಪಾಧ್ಯಕ್ಷ ಶಶೀಭೂಷಣ ಹೆಗಡೆ ನಿರ್ಧೇಶಕ …

Read More »

ಅಪ್ಪನ ಅಭಿವೃದ್ಧಿ ರಥಕ್ಕೆ ಸಾರಥಿಯಾದ ಮಗ ವಿವೇಕ್ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ‌ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಹುತೇಕ ಟಿಕೆಟ್ ಘೋಷಿಸಿ ಚುನಾವಣಾ ಕಣದಲ್ಲಿ ಮುನ್ನುಗ್ಗುತ್ತಿವೆ. ಈ ಹಂತದಲ್ಲಿ ಆಡಳಿತಾರೂಡ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದಿದ್ದರೂ ಬಹುತೇಕ ಖಚಿತವಾದ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಈಗಾಗಲೇ ಆರಂಭಿಸಿದ್ದಾರೆ. ಅದರಲ್ಲಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪಕ್ಕಾ ಎನಿಸಿಕೊಂಡಿರುವ ಶಿವರಾಮ …

Read More »

ಚುನಾವಣಾ ಸಮಯದಲ್ಲಿ ಚೆಕ್ ಪೋಸ್ಟ್ ತಪಾಸಣೆ ; ವ್ಯಾಪಾರಕ್ಕಾಗಿ ಅಥವಾ ಆಸ್ಪತ್ರೆ ಓಡಾಟಕ್ಕೆ ನಗದು ಕೊಂಡೊಯ್ಯಲು ಸಮಸ್ಯೆ…

ಧ್ವನಿ.. ಪ್ರತಿಧ್ವನಿ ವಿಶೇಷ. ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ   ರಾಜ್ಯದಲ್ಲಿ ಚುನಾವಣೆ ಬಂತೆಂದರೆ ಸಾಕು ಏನೆಲ್ಲಾ ಹೊಸ ವ್ಯವಸ್ಥೆ ಜಾರಿಯಾಗಿಬಿಡುತ್ತದೆಂದರೆ. ಕೆಲವು ಕೆಲಸ ಕಾರ್ಯಗಳಿಗೆ ಕಡಿವಾಣ ಬೀಳುತ್ತದೆ. ಅದು ಅನಿವಾರ್ಯವು ಆಗಿರುತ್ತದೆ. ಚುನಾವಣೆಯಲ್ಲಿ ಅಕ್ರಮ ನಡೆಸಲು ಹಣ, ಹೆಂಡ, ಉಡುಗೆ, ಕೊಡುಗೆಗಳು ಸರಬರಾಜಾಗದಂತೆ ತಡೆಯಲು ಪ್ರತಿ ಊರಿನ ಪ್ರಮುಖ ಪ್ರವೇಶ ಸ್ಥಳಗಳಲ್ಲಿ ತಪಾಸಣಾ ಕೇಂದ್ರ ನಿರ್ಮಿಸಿ ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ದಾಖಲೆ ಇಲ್ಲದೆ ಸಾಗಿಸುವ ನಗದು ಹಿಡಿಯುತ್ತಿರುವುದರಿಂದ …

Read More »

ಸಾಲದ ಹಣದ ವಿಚಾರದಲ್ಲಿ ಗಂಡ ಹೆಂಡತಿ ಜಗಳ ಆತ್ಮಹತ್ಯೆಗೆ ಶರಣಾದ ಪತಿರಾಯ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸಾಲ ತುಂಬುವ ವಿಚಾರದಲ್ಲಿ ಗಂಡ ಹೆಂಡತಿಯ ಮಧ್ಯೆ ಕಲಹವಾಗಿ ಅದನ್ನೆ ಮನಸ್ಸಿಗೆ ಹಚ್ಚಿಕೊಂಡ ಪತಿ ನೇಣುಬಿಗಿದುಕೊಂಡ ಘಟನೆ ಪಟ್ಟಣದ ನೂತನನಗರ ಜಡ್ಡಿಯಲ್ಲಿ ನಡೆದಿದೆ. ವಿನಾಯಕ ಗುರುಸಿದ್ದಪ್ಪ ಅಮಾಸಿ(೩೭) ಎಂಬಾತನೇ ಮೃತ ವ್ಯಕ್ತಿಯಾಗಿದ್ದು ಸಾಲ ತುಂಬುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ವಿನಾಯಕ ಗುರುಸಿದ್ದಪ್ಪ ಅಮಾಸಿ ಅಡುಗೆಮನೆ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.ಈ …

Read More »

ಯಲ್ಲಾಪುರ ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ ಸ್ಕೂಟಿಯಲ್ಲಿ ಸಾಗಿಸುತ್ತಿದ್ದ ಎಣ್ಣೆ ಸೀಝ್..!!

ಪ್ರತಿಧ್ವನಿ, ಯಲ್ಲಾಪುರ- ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಎಣ್ಣೆ ಕೇಸುಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ.        ಮುಂಡಗೋಡ್ ಪಟ್ಟಣದ ಅಕ್ಷಯ ಹೋಟೆಲ್ ಎದುರು ಪ್ರವೀಣ್ ಕುಮಾರ್ ಶೆಟ್ಟಿ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನ ತಪಾಸಣೆ ನಡೆಸಿ 10.260 ಲೀಟರ್ ಮಧ್ಯ ಮತ್ತು 20.650 ಲೀಟರ್ ಬಿಯರ್ ಪತ್ತೆ ಆಗಿದ್ದು ಅಂದಾಜು ಮೌಲ್ಯ 94,865 ರು ಆಗಿರುತ್ತದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ  ಒಪ್ಪಿಸಲಾಗಿದೆ.    ಅಬಕಾರಿ ಜಂಟಿ ಆಯುಕ್ತ ಮಂಗಳೂರು ವಿಭಾಗ …

Read More »

ಪತ್ರಕರ್ತ ನಾಗರಾಜ್ ಮದ್ಗುಣಿ ಪುತ್ರ ತೇಜಸ್ವಿ ಮದ್ಗುಣಿಗೆ ಸಂದ ಹವ್ಯಕ ಪಲ್ಲವ ಪುರಸ್ಕಾರ.

ತೇಜಸ್ವಿ ಮದ್ಗುಣಿಗೆ ಹವ್ಯಕ ಪಲ್ಲವ ಪುರಾಸ್ಕಾರ ಪ್ರಧಾನ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ                                 ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ………… ಪ್ರತಿಧ್ವನಿ,ಯಲ್ಲಾಪುರ: ಹವ್ಯಕ ಭವನದಲ್ಲಿ ಭಾನುವಾರ ನಡೆದ ಅಖಿಲ ಹವ್ಯಕ ಮಹಾಸಭಾದ ‘ಸಂಸ್ಥಾಪನೋತ್ಸವ’ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಯ ಜೊತೆಗೆ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡುವ ‘ಹವ್ಯಕ ಪಲ್ಲವ’ ಪುರಸ್ಕಾರವನ್ನು ಯಲ್ಲಾಪುರದ ತೇಜಸ್ವಿ ಮದ್ಗುಣಿ ಗೆ ನೀಡಿಗೌರವಿಸಲಾಯಿತು. ಪುರಸ್ಕಾರದೊಂದಿಗೆ ತೇಜಸ್ವಿ ಮದ್ಗುಣಿ    ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಈಶ್ವರ ದೈತೋಟ, ಎಂ.ಕೆ.ಭಾಸ್ಕರ್ …

Read More »

ಟ್ರಾಕ್ಟರ್ ಪಲ್ಟಿ ಹೆದ್ದಾರಿ ತುಂಬಾ ಮರದತುಂಡುಗಳು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ………….. ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಹಿಟ್ಟಿನಬೈಲ್ ಸಮೀಪ ಬಳ್ಳಾರಿ-ಕಾರವಾರ ರಾಷ್ಟಿçÃಯ ಹೆದ್ದಾರಿಯ ಮೇಲೆ ಮರದ ತುಂಡುಗಳನ್ನು ಹೊತ್ತು ಸಾಗುತ್ತಿದ್ದ ಟ್ರಾö್ಯಕ್ಟರ್ ಆಯ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ತಾಲೂಕಿನ ಲಾಲಗುಳಿಯಿಂದ ಕಿರವತ್ತಿ ಅರಣ್ಯ ಇಲಾಖೆಯ ಡಿಪೋಗೆ ಮರದ ತುಂಡುಗಳನ್ನು ಟ್ರಾಕ್ಟರ್ ನಲ್ಲಿ ಸಾಗಿಸುವಾಗ ಟ್ರಾಲಿ ಆಯ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಮಗುಚಿದೆ. ಟ್ರಾಕ್ಟರ್ ನಲ್ಲಿದ್ದ ಮರದ ತುಂಡುಗಳೆಲ್ಲಾ ಹೆದ್ದಾರಿ …

Read More »

ಗರಿಗೆದರಿದ ಕಾಂಗ್ರೆಸ್ ಪಕ್ಷದ ಚುನಾವಣಪೂರ್ವ ಬೂತ್ ಮಟ್ಟದ ಸಂಘಟನಾ ಚಟುವಟಿಕೆ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಎರಡು ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆ ನಡೆಯಿತು.ಪಕ್ಷದ ನಾಯಕರಾದ ವಿ.ಎಸ್ ಪಾಟೀಲ್, ಶ್ರೀನಿವಾಸ್ ಭಟ್ ಧಾತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಡಿ.ಎನ್ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಜನರು ನೆಮ್ಮದಿಯ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ಅನಿವಾರ್ಯವಾಗಿದೆ ಎಂಬುದು ನಾಯಕರ ಅಭಿಪ್ರಾಯವಾಗಿತ್ತು. ಮಾಜಿ ಅಧ್ಯಕ್ಷ ವಿ.ಸ್ ಭಟ್ ಪ್ರಮುಖರಾದ ಎನ್.ಕೆ ಭಟ್, ಉಲ್ಲಾಸ ಶಾನಭಾಗ , ಎಂಡಿ ಮುಲ್ಲಾ, …

Read More »

ಸಾವು ಕಂಡರೂ ಎಚ್ಚೆತ್ತುಕೊಳ್ಳದ ಮಂದಿಗೆ ಏನನ್ನಬೇಕು????? ‌‌‌‌ ಅದನ್ನು ಕೊಲೆ ಎನ್ನಬೇಕೆ!!?

ಕಳೆದ ತಿಂಗಳು ಒಣಗಿದ ತೆಂಗಿನ ಮರ ಬಿದ್ದು ಪೌರ ಕಾರ್ಮಿಕನ ಸಾವು. ಪಟ್ಟಣದಲ್ಲಿ ಇಂದಿಗು ಅಪಾಯಕಾರಿ ಸ್ಥಿತಿಯಲ್ಲಿ ಒಣಗಿ ನಿಂತಿರುವ ತೆಂಗಿನ ಮರಗಳು . ‌ ‌‌‌ಇನ್ನಾರ ಬಲಿಗಾಗಿ ಕಾಯುತ್ತಿವೆಯೊ?? ಅದು ನಮ್ಮಲ್ಲಿ ಒಬ್ಬರಾಗಿದ್ದರೆ!! ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……… ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಅಕ್ಬರ್‌ಗಲ್ಲಿ ಮತ್ತು ಇಸ್ಲಾಂಗಲ್ಲಿ ಸಂಪರ್ಕಿಸುವ ರಸ್ತೆಯಲ್ಲಿ ಒಣಗಿದ ತೆಂಗಿನಮರ ಬಿದ್ದು ತಂದೆ ಸ್ಥಳದಲ್ಲೇ ಪ್ರಾಣ ಬಿಟ್ಟ ಒಂದನೆ ತರಗತಿ ಓದುವ ಮಗಳು …

Read More »