Breaking News

Monthly Archives: June 2023

ಕೋಳಿಕೇರಿಯಲ್ಲಿ “ಕಾಳು ಘಾಡಿ-ಬಾಳು ಘಾಡಿ” ಸತ್ಪುರುಷರ ಜಾತ್ರೆ ಜುಲೈ 2 ಕ್ಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪೂರ್ವಜರ ಕಾಲದಿಂದಲೂ ತಾಲೂಕಿನ ಕೋಳಿಕೇರಿ ಗ್ರಾಮದಲ್ಲಿ ವೀರಯೋಧರಾಗಿ ಮರಣವನ್ನಪ್ಪಿದ ಕಾಳು ಘಾಡಿ ಮತ್ತು ಬಾಳು ಘಾಡಿ ಸತ್ಪುರುಷರ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಜು.2 ರಂದು ಜಾತ್ರೆ ನಡೆಯಲಿದೆ.ಮಿರಾಶಿ ಕುಟುಂಬದ ಪೂರ್ವಜರು ಆಚರಿಸಿಕೊಂಡು ಬರುತ್ತಿದ್ದರು ಎನ್ನಲಾದ ಜಾತ್ರಾ ಮಹೋತ್ಸವವು ಹಲವು ವಿಶೇಷತೆಗಳನ್ನು ಹೊಂದಿದೆ. ಸತ್ಪುರುಷರ ಸಮಾಧಿ ಕೋಳಿಕೇರಿಯಲ್ಲಿದ್ದು ಬೇಡಿ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳು, ರೋಗ-ರುಜಿನಗಳನ್ನು …

Read More »

ಕರುಳು ಹಿಂಡುವ ಘಟನೆ ತಾಲೂಕಿನ ಬಳಗಾರದ ಹಂಸನಗದ್ದೆಯಲ್ಲಿ ಬಾಲಕನೋರ್ವನ ಸಾವು..

ಪ್ರತಿಧ್ವನಿ,ಯಲ್ಲಾಪುರ : ಮನೆಯಲ್ಲಿ ವಿದ್ಯುತ್ ಹೋದಾಗ ಚಿಮಣಿ ದೀಪ ಹಚ್ಚಲು ಹೋದ 4 ವರ್ಷ 6ತಿಂಗಳು ಪ್ರಾಯದ ಬಾಲಕನೋರ್ವ ದೇಹಕ್ಕೆ ಬೆಂಕಿ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಬಳಗಾರ ಗ್ರಾಮದ ಹಂಸನಗದ್ದೆಯಲ್ಲಿ ನಡೆದಿದೆ. ರವಿ ಗಣಪತಿ ಗೌಡ ಎಂಬುವರ ಮಗನಾದ ಯತೀನ ರವಿ ಗೌಡ ಎಂಬಾತನೇ ಮೃತ ಬಾಲಕನಾಗಿದ್ದು ಜೂ.26 ರಂದು ಸಂಜೆ 7 ಗಂಟೆಯ ಸುಮಾರಿಗೆ ತನ್ನ ಮನೆಯ ಕರೆಂಟ್ ಹೋದಾಗ ಚಿಮಣಿ ದೀಪ ಹಚ್ಚಲೆಂದು ಹೋದವನಿಗೆ ಆಕಸ್ಮಿಕವಾಗಿ …

Read More »

ಬ್ರಾಹ್ಮಣಹಾಸಭಾ ತಾಲೂಕಾ ಸಂಚಾಲಕರಾಗಿ ಶಂಕರಭಟ್ಟ ತಾರಿಮಕ್ಕಿ ಸಹ ಸಂಚಾಲಕರಾಗಿ ಕುಮಾರ ಭಟ ಹಂಡ್ರಮನೆ ಆಯ್ಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ನ್ಯಾಯವಾದಿ ಅಶೋಕ ಹಾರ್ನಳ್ಳಿ ರಾಜ್ಯಾದ್ಯಂತ ಮಹಾಸಭೆಯ ಸಂಘಟನೆಯನ್ನು ಬಲಗೊಳಿಸುವ ಉದ್ದೇಶದಿಂದ ಈಗಾಗಲೇ ಕ್ರಿಯಾಶೀಲರಾಗಿದ್ದಾರೆ. ಅವರ ನಿರ್ದೇಶನದಂತೆ ಮಹಾಸಭೆಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಯಲ್ಲಾಪುರದಲ್ಲಿ ಬ್ರಾಹ್ಮಣ ಸಭೆಯನ್ನು ಕರೆದು, ಸಂಘಟನೆ ಮತ್ತು ಸದಸ್ಯತ್ವದ ಕುರಿತು ಸಲಹೆ-ಸೂಚನೆ ಪಡೆದು ರಾಜ್ಯಾಧ್ಯಕ್ಷರಿಗೆ ವರದಿ ಒಪ್ಪಿಸಿದ್ದಾರೆ.ವರದಿಯಲ್ಲಿ ಶಿಫಾರಸು ಮಾಡಿದಂತೆ ಯಲ್ಲಾಪುರ ತಾಲೂಕಿನ ನೂತನ ಸಂಚಾಲಕರಾಗಿ ಶಂಕರ ಭಟ್ಟ …

Read More »

ವಜ್ರಳ್ಳಿಯ ಸಂಜೀವಿನಿ ಒಕ್ಕೂಟಕ್ಕೆ
ಅಧ್ಯಯನ ಪ್ರವಾಸಿ ತಂಡದ ಭೇಟಿ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ಮಟ್ಟದಲ್ಲಿ ” ಉತ್ತಮ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ” ಎಂಬ ಪ್ರಶಸ್ತಿಗೆ ಭಾಜನವಾದ ವಜ್ರಳ್ಳಿಯ ಭಾಗ್ಯಶ್ರೀ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಮತ್ತು ಹುಣಸೇನಹಳ್ಳಿ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಎರಡು ದಿನಗಳ ಕಾಲ ಅಧ್ಯಯನ ಕಲಿಕಾ ಪ್ರವಾಸವನ್ನು ಕೈಗೊಂಡರು. ಭಾಗ್ಯಶ್ರೀ …

Read More »

ಕನ್ಯೆ ಸಿಗದೆ ಮನನೊಂದ ಯುವಕ ನೇಣಿಗೆ ಶರಣು…!!!

ಯಲ್ಲಾಪುರ : ಮದುವೆಯಾಗಲು ಹೆಣ್ಣು ದೊರೆಯುತ್ತಿಲ್ಲ ಎಂಬ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ೩೫ವರ್ಷದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತೆಲಂಗಾರದ ಕಿರಗಾರಿಮನೆ ಎಂಬಲ್ಲಿ ನಡೆದಿದೆ. ಕಿರಗಾರಿಮನೆಯ ನಾಗರಾಜ ಗಣಪತಿ ಗಾಂವ್ಕರ (೩೫) ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ತನಗೆ ಮದುವೆಯಾಗಲು ಇನ್ನೂ ಹೆಣ್ಣು ಸಿಗುತ್ತಿಲ್ಲ ಹಾಗೂ ಮನಸ್ಸಿಗೆ ಇನ್ನಾವುದೋ ವಿಷಯವನ್ನು ಹಚ್ಚಿಕೊಂಡು ಮನನೊಂದು ತಾಲೂಕಿನ ಕಿರಗಾರಕೇರಿ ಬಿದ್ರೇಪಾಲ ಗುಡ್ಡದ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ …

Read More »

ಆರ್ಥಿಕ ಸಬಲೀಕರಣದತ್ತ ಯಲ್ಲಾಪುರದಲ್ಲಿ ಮತ್ತೊಂದು ಹೆಜ್ಜೆ- ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ಅಸ್ತಿತ್ವಕ್ಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ,ಯಲ್ಲಾಪುರ – ಸಂಘಗಳನ್ನು ಸ್ಥಾಪಿಸುವುದು ಕಷ್ಟವಲ್ಲ ಠೇವಣಿ ಸಂಗ್ರಹ ಕೂಡ ಕಷ್ಟವಾಗದು ಆದರೆ ಒಳ್ಳೆಯ ಸಾಲಗಾರರನ್ನು ಹುಡುಕುವುದೆ ಕಷ್ಟವಾಗಿದೆ. ಸಂಘದ ಸ್ಥಾಪನೆ‌ ನಂತರ ಬದ್ದತೆಯಿಂದ ನಡೆಸಿಕೊಂಡು ಹೋಗುವುದು ಸಹ ಒಂದು ಅಗ್ನಿಪರೀಕ್ಷೆಯಂತೆ. ನಿಮ್ಮ ಸಾರ್ಥಕ ಪ್ರಯತ್ನ ಯಶಸ್ವಿಯಾಗಲಿ. ಹಾಗು ನನ್ನ ಸಂಪೂರ್ಣ ಬೆಂಬಲವು ನಿಮಗಿದ್ದು ಜಿಲ್ಲಾ ಮದ್ಯವರ್ತಿ ಬ್ಯಾಂಕ್ ನ ಸಹಕಾರವು ನಿಮಗಿರಲಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ …

Read More »

ಚಿರತೆಯೋ..ಹುಲಿಯೋ..ತಿಳಿಯದು ದಾಳಿಗೆ ಮಾಗೋಡು ಗ್ರಾಮದಲ್ಲಿ ಆಕಳ ಕರುವೊಂದು ಬಲಿಯಾಗಿದೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ : ಅರಣ್ಯ ಇಲಾಖೆಯ ಯಲ್ಲಾಪುರ ವಿಭಾಗದ ಇಡುಗುಂದಿ ವಲಯದ ಮಾಗೋಡು ಗ್ರಾಮದಲ್ಲಿ ಹಲವಾರು ತಿಂಗಳುಗಳಿಂದ ಚಿರತೆಯೊಂದು ದನ ಮತ್ತು ನಾಯಿಗಳನ್ನು ಹಿಡಿದು ತಿನ್ನುತ್ತಿದ್ದ ಬಗ್ಗೆ ಪ್ರಕರಣಗಳು ಬಲವಾಗಿ ಕೇಳಿ ಬಂದಿತ್ತು. ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಲವಾರು ಬಾರಿ ಕೋಂಬಿಂಗ್ ಕಾರ್ಯಚರಣೆ ಮಾಡಿದ್ದರು ಆದರೆ ಚಿರತೆ ಸಿಗಲು ಇಲ್ಲ ಮತ್ತೆ ದಾಳಿ …

Read More »

ಕಾಡಿನ ಕೌತುಕ ಕಾಪಾಡೋಣ- ಆರ್.ಎಫ್.ಒ ಶಿಲ್ಪಾ ನಾಯ್ಕ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿಯ ಜೊತೆ ಬದುಕಲು ನಾವು ಕಲಿತರೆ ಉತ್ತಮ ಫಲ ಸಿಗಬಲ್ಲದು.ಪರಿಸರದ ಮೇಲಿನ ಕಾಳಜಿ ನಮ್ಮ ಕಾಳಜಿಯೂ ಹೌದು. ನಮ್ಮ ಸುತ್ತ ಮುತ್ತಲಿನ ಕಾಡಿನ ಜೀವ ವೈವಿಧ್ಯತೆ ಯನ್ನು ಅರಿಯುವ ಮೂಲಕ ಈ ನೆಲದ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿವಂತೆ ಕಾಡಿನ ಕೌತುಕವನು ಕಾಪಿಡೋಣ. ಎಂದು ತಾಲ್ಲೂಕಿನ ಇಡಗುಂದಿ ವಲಯ ಅರಣ್ಯಾಧಿಕಾರಿ ಶಿಲ್ಪಾ ನಾಯ್ಕ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ವಜ್ರಳ್ಳಿಯ …

Read More »

ಮುಂಗಾರು ತಡವಾಗಿದೆ ಕೃಷಿ ಚಟುವಟಿಕೆಗೆ ತೊಡಕಾಗಿದೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಪ್ರವೇಶ ತಡವಾಗಿದೆ ಇದರಿಂದ ರೈತರ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆಯದೆ ತೊಡಕಾಗಿದೆ. ಈ ವೇಳೆಗೆ ಹೊಲ ಗದ್ದೆಗಳೆಲ್ಲ ಹಸಿರು ಸಿಂಗಾರದೊಂದಿಗೆ ಮದುವಣಗಿತ್ತಿಯಂತೆ ನಳನಳಿಸುತ್ತಿರಬೇಕಿತ್ತು. ಆದರೆ ತಾಲೂಕಿನ ಹೊಲಗದ್ದೆಗಳು ಮಳೆರಾಯನ ಆಗಮನಕ್ಕಾಗಿ ಮೊರೆ ಇಟ್ಟಂತಿದೆ.ಸದ್ಯ ಬೀಳುತ್ತಿರುವ ಮಳೆಗೆ ಭೂಮಿ ಕೊಂಚ ತಂಪಾಗಿದೆ ಇಲ್ಲದಿದ್ದರೆ ಮಳೆ ಬೀಳುವುದಕ್ಕು ಮೊದಲು ಉಷ್ಣತೆಯಿಂದ ತೋಟಗಳೆಲ್ಲ ಒಣಗಿದಂತಾಗಿ ಸಿಂಗಾರದ ಅಡಿಕೆ ಮಿಳ್ಳೆಗಳೆಲ್ಲ …

Read More »

ಯಲ್ಲಾಪುರ ಅರಣ್ಯ ಇಲಾಖೆಯ ಹಸಿರು ಕರ್ನಾಟಕ ಅಡಿಯಲ್ಲಿ “ಸಸ್ಯಕ್ಷೇತ್ರ ದರ್ಶನ”

ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ವಿಭಾಗದ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಮಾದ್ಯಮಗಳಿಗಾಗಿ ” ಸಸ್ಯ ಕ್ಷೇತ್ರ ದರ್ಶನ ” ಎಂಬ ತಮ್ಮ ವಿಭಾಗದ ವ್ಯಾಪ್ತಿಯಲ್ಲಿ ಬೆಳೆದ ಸಸಿಗಳ ಸಂಪೂರ್ಣ ಮಾಹಿತಿ ನೀಡುವ ವಿನೂತನ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ‌ಹೆಗಡೆ ಮಾತನಾಡಿ ರಾಜ್ಯಾದ್ಯಂತ ಅರಣ್ಯ ಇಲಾಖೆ ಅಡಿಯಲ್ಲಿ 2023-24 ನೆ ಸಾಲಿನಲ್ಲಿ 5 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿದ್ದು ಯಲ್ಲಾಪುರ ವಿಭಾಗದಿಂದ 9.95 ಲಕ್ಷ …

Read More »