Breaking News

ಗ್ರಾಮದೇವಿ ನೆಲೆನಿಂತ ಸುಕ್ಷೇತ್ರ ಯಲ್ಲಾಪುರದಲ್ಲಿ ಪ್ರತಿಷ್ಟಾಪಿತ ಗಣಪತಿಗಳ ವೈಭವ

ಎಂಟನೆ ತರಗತಿ ಓದುತ್ತಿರುವ ಶಿರಸಿ ಪೋರ ”  ಶ್ರೀಧರ ಸಂಜೀವ ಕೆರೆಕರ “ ಕೈಚಳಕದಲ್ಲಿ ಮೂಡಿದ ಪರಿಸರ ಸ್ನೇಹಿ ಗಣಪ ಯಲ್ಲಾಪುರದ ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ಉಪವಿಭಾಗದಲ್ಲಿ ಪ್ರತಿಷ್ಟಾಪನೆಗೊಂಡಿದೆ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್, ಪಂಚಾಯತ್ ರಾಜ್ ಇಂಜಿನೀಯರಿಂಗ್ ಉಪ ವಿಭಾಗ ಯಲ್ಲಾಪುರ ಕಛೇರಿಯಲ್ಲಿ ಗಣೇಶ ಚತುರ್ಥಿ ಉತ್ಸವ ವಿಜ್ರಂಭಣೆಯಿಂದ ನೆರವೆರಿಸಲಾಗುತ್ತಿದೆ. ವಿಶೇಷವೆಂದರೆ ಕಳೆದ ವರ್ಷದಂತೆ ಈ ವರ್ಷವು ಕೂಡ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನರೇಬೈಲ್, ಶಿರಸಿ. ಶಾಲೆಯ  8ನೇ ತರಗತಿಯ ವಿಧ್ಯಾರ್ಥಿ ಶ್ರೀಧರ ಸಂಜೀವ ಕೆರೆಕರ- ಕೆ.ಎಚ್.ಬಿ. ಕಾಲೋನಿ, ಶಿರಸಿ  ಇತನು ಸುಂದರವಾದ ಮುತ್ತು ಹವಳಗಳಿಂದ ಅಲಂಕೃತಗೊಂಡ ಪರಿಸರ ಸ್ನೇಹಿ ಗಣೇಶಮೂರ್ತಿ ತಯಾರಿಸಿದ್ದಾನೆ.

ಇತನ ಕಲೆಗೆ ಪ್ರೋತ್ಸಾಹಿಸಲು ಕಛೇರಿಯ ಅಧಿಕಾರಿ   ಅಶೋಕ ಬಿ. ಬಂಟ್-ಸ.ಕಾ.ಇಂ ಹಾಗೂ ಪಂ.ರಾ.ಇಂ./ಗ್ರಾ.ಕು.ನೀ&ನೈ. ಉಪವಿಭಾಗ ಸಿಬ್ಬಂದಿಗಳು ಕಛೇರಿಯಲ್ಲಿ ಈ ಪೋರ ತಯಾರಿಸಿದ ಗಣೇಶನ ಮೂರ್ತಿಯನ್ನು ಪ್ರತಿಸ್ಥಾಪಿಸಲು ನಿರ್ಣಯಿಸಿ, ಶ್ರೀ ಗಣೇಶಮೂರ್ತಿಯನ್ನು ಪ್ರತಿಸ್ಥಾಪಿಸಿ ಸಾರ್ವಜನಿಕ ಗಣೇಶ ಚತುರ್ಥೀ ಉತ್ಸವವನ್ನು ಅಧಿಕಾರಿ/ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಸೇರಿ ಆಚರಿಸಲಾಗುತ್ತಿದೆ.        

ನಾಲ್ಕನೇ ದಿನ ಶುಕ್ರವಾರ ಮಹಾಪೂಜೆ, ಪ್ರಸಾದ ಭೋಜನೆ ವಿತರಣೆ  ವ್ಯವಸ್ಥೆ ಮಾಡಲಾಗಿದೆ.  ಐದನೇ ದಿನ ಶನಿವಾರದಂದು ಶ್ರೀ ಮಂಗಳಮೂರ್ತಿಯನ್ನು ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಗುವುದು.

ಸಕಲ ಇಷ್ಟಾರ್ಥಗಳನ್ನು ಪರಿಹರಿಸೊ ವಿಘ್ನ ವಿನಾಶಕನ ಕೃಪೆಯಿಂದ ಯಲ್ಲಾಪುರ ತಾಲೂಕಿನಾದ್ಯಂತ ನೂರಾರು ಕಡೆಗಳಲ್ಲಿ ಸಾರ್ವಜನಿಕ ಪ್ರತಿಷ್ಟಾಪಿತ ಗಣಪತಿ ಉತ್ಸವ ವಿಜ್ರಂಭಣೆಯಿಂದ ನಡೆದು ಬರುತ್ತಿದ್ದು ತಾಯಿ ಗ್ರಾಮದೇವಿ ಅನುಗ್ರಹ ಈ ಸೀಮೆಯ ಮೇಲೆ ಸದಾ ಇರಲಿದೆ.

ಯಲ್ಲಾಪುರದ ಮಂಜುನಾಥ ನಗರ ಸಾರ್ವಜನಿಕ ಗಣಪ
ಯಲ್ಲಾಪುರದ ಕೊಂಡೆಮನೆ ರಸ್ತೆ ಸಾರ್ವಜನಿಕ ಗಣಪ
ಯಲ್ಲಾಪುರದ ಬಸ್ಟಾಂಡ್ ರಸ್ತೆ ಸಾರ್ವಜನಿಕ ಗಣಪ
ಯಲ್ಲಾಪುರದ ಅರಣ್ಯ ಇಲಾಖೆ ಆವರಣದ ಗಣಪ
ಯಲ್ಲಾಪುರದ ರವೀಂದ್ರ ನಗರ ಸಾರ್ವಜನಿಕ ಗಣಪ
ಯಲ್ಲಾಪುರದ ಹೆಸ್ಕಾಂ ಇಲಾಖೆ ಗಣಪ
ಯಲ್ಲಾಪುರದ ವಿನಾಯಕ ನಗರದಲ್ಲಿ ಪ್ರತಿಷ್ಟಾಪಿತ ಗಣಪ
ಯಲ್ಲಾಪುರದ ನೂತನ ನಗರ ಸಾರ್ವಜನಿಕ ಗಣಪ
ಯಲ್ಲಾಪುರದ ಪೊಲೀಸ್ ವಸತಿ ಗೃಹದ ಗಣಪ
ಯಲ್ಲಾಪುರದ ತಟಗಾರ ಕ್ರಾಸ್ ಸಾರ್ವಜನಿಕ ಗಣಪ
ಯಲ್ಲಾಪುರದ ನಾಯ್ಕನ ಕೆರೆ ಸಾರ್ವಜನಿಕ ಗಣಪ
ಯಲ್ಲಾಪುರದ ಉದ್ಯಮ ನಗರ ಸಾರ್ವಜನಿಕ ಗಣಪ
ಯಲ್ಲಾಪುರದ ಕಾಳಮ್ಮ ನಗರದ ಸಾರ್ವಜನಿಕ ಗಣಪ
ಯಲ್ಲಾಪುರದ ದೇವಿ ಮೈದಾನದ ಸಾರ್ವಜನಿಕ ಗಣಪ
ಯಲ್ಲಾಪುರದ ತಿಲಕ್ ಚೌಕ್ ಸಾರ್ವಜನಿಕ ಗಣಪ
ಯಲ್ಲಾಪುರದ ಅಂಬೇಡ್ಕರ್ ನಗರದ ಸಾರ್ವಜನಿಕ ಗಣಪ
ಯಲ್ಲಾಪುರದ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿತ ಗಣಪ
ಯಲ್ಲಾಪುರದ ಜಿ.ಪಂ.ಇಂ.ಉ.ವಿಭಾಗದಲ್ಲಿ ಕುಳಿತ ಗಣಪ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *