




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಗುರುವಾರ ರಾತ್ರಿ ಸುರಿದ ಮಳೆಗೆ ಕಿರವತ್ತಿ ಗ್ರಿಡ್ ನಿಂದ ಹೊರಟ 33kv ಸಾಮರ್ಥ್ಯದ ಮೈನ್ ಲೈನ್ ಮೇಲೆ ದೊಡ್ಡ ಗಾತ್ರದ ಮರ ಬಿದ್ದ ಪರಿಣಾಮ ಯಲ್ಲಾಪುರ ಸಂಪೂರ್ಣ ರಾತ್ರಿ ಕತ್ತಲಲ್ಲಿ ಕಾಲ ಕಳೆಯಬೇಕಾಯಿತು.

ಸುಮಾರು 9-55 ಕ್ಕೆ ಕರೆಂಟ್ ಹೋದ ಪರಿಣಾಮ ರಾತ್ರಿ ಕರೆಂಟ್ ಕೊಡಬಹುದು ಎಂದು ಕಾಯುತ್ತ ಕುಳಿತ ಯಲ್ಲಾಪುರ ಮಂದಿಗೆ ರಾತ್ರಿ ಸಂಪೂರ್ಣ ಕರೆಂಟ್ ಬರುವುದಿಲ್ಲ ಎಂದು ತಿಳಿಯುವಷ್ಟರಲ್ಲಿ ಮಲಗುವ ಸಮಯವಾಗಿತ್ತು.

ಅವರಿಗೇನು ಗೊತ್ತು ಮೈನ್ ಲೈನ್ ಫಾಲ್ಟಾಗಿದೆ ಕರೆಂಟ್ ಬರುವುದಿಲ್ಲ ಎಂದು.
ಆದರೆ ಅಂತಹ ದಟ್ಟಡವಿ ಮದ್ಯದಲ್ಲಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ರಾತ್ರೋರಾತ್ರಿ ಕಾರ್ಯಾಚರಣೆಗಿಳಿದ ಯಲ್ಲಾಪುರ ಹೆಸ್ಕಾಂ ಸಿಬ್ಬಂದಿಗಳ ತಂಡ ಶುಕ್ರವಾರ ಮುಂಜಾನೆ 6 ಗಂಟೆಗೆ ಕರೆಂಟ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಅದಕ್ಕೊಂದು ಸಲಾಂ ಹೇಳಲೇಬೇಕು.

ಸಾರ್ವಜನಿಕರ ಮೂಲಭೂತ ಸೌಕರ್ಯಗಳಲ್ಲಿ ವಿದ್ಯುತ್ ಸಹ ಪ್ರಮುಖ ಸ್ಥಾನ ಅಲಂಕರಿಸಿದ್ದು ವ್ಯತ್ಯಯವಾದರೆ ಜನರಿಗೆ ಕೆಲಸವೆ ಆಗುವುದಿಲ್ಲ ಎಂಬ ಪರಿಸ್ಥಿತಿಗೆ ಬಂದು ನಿಂತಂತಿದೆ. ಇಂತಹ ಒತ್ತಡದ ನಡುವೆ ಜನರ ಆಕ್ರೋಶದ ಮದ್ಯೆ ತಮ್ಮ ಕುಟುಂಬವನ್ನು ಲೆಕಿಸದೆ ಜೀವದ ಹಂಗುತೊರೆದು ನಿದ್ರೆ ಬಿಟ್ಟು ವಿದ್ಯುತ್ ನೀಡುವ ಏಕೈಕ ಉದ್ದೇಶದಿಂದ ಸಂಪೂರ್ಣ ರಾತ್ರಿ ಶ್ರಮ ವಹಿಸಿ ಕರೆಂಟ್ ನೀಡಿದ್ದು ಹೆಸ್ಕಾಂ ಮೇಲಿನ ಗೌರವ ಹೆಚ್ಚಿದಂತಾಗಿದೆ ಎನ್ನುತ್ತಾರೆ ಯಲ್ಲಾಪುರದ ಪ್ರಜ್ಞಾವಂತರು.

Prathidvani Yellapura