
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಪಟ್ಟಣ ಪಂಚಾಯತ ಅಧೀನದ ಮೀನು ಮತ್ತು ಮಾಂಸ ಮಾರುಕಟ್ಟೆ ಸಮೀಪ ಇತ್ತೀಚೆಗೆ ಪ್ರತಿ ನಿತ್ಯ ಒಂದಾದರು ಹಂದಿ ಸಾವನಪ್ಪುತ್ತಿದ್ದು ಸಾವಿಗೆ ಕಾರಣ ತಿಳಿಯದೆ ವ್ಯಾಪಾರಸ್ಥರು ಆಂತಂಕಕ್ಕೀಡಾಗುತ್ತಿದ್ದಾರೆ.

ಪ್ರಾರಂಭದಲ್ಲಿ ಹಂದಿ ಸಾವಾದಾಗ ಸಹಜ ಸಾವಿರಬಹುದೆಂದು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ ಆದರೆ ಅದೇ ಸಾವು ಪ್ರತಿ ನಿತ್ಯ ಸಂಭವಿಸುತ್ತಿರುವುದು ಆಶ್ಚರ್ಯ ಮತ್ತು ಆತಂಕ ತಂದೊಡ್ಡಿದೆ. ಪ್ರಾಣಿಗಳಲ್ಲಿ ವಿಶೇಷವಾಗಿ ಯಾವುದಾದರು ಹರಡುವ ರೋಗ ಪ್ರಾರಂಭವಾಗಿದೆ ಏನೋ ಎಂಬ ಭಯ ಕಾಡುತ್ತಿದ್ದು ತಜ್ಞರು ಪರಿಶೀಲಿಸಿ ಕಾರಣ ತಿಳಿಯಬೇಕಿದೆ ಹಾಗು ಮಾರುಕಟ್ಟೆ ಸುತ್ತಮುತ್ತಲಿನ ತ್ಯಾಜ್ಯ ತೆಗೆಸಿ ವಾತಾವರಣ ಶುಭ್ರಗೊಳಿಸಬೇಕಿದೆ. ಆರೋಗ್ಯಕರ ಪರಿಸರ ನಮ್ಮದಾಗಬೇಕಿದೆ ಇಲ್ಲವಾದಲ್ಲಿ ನಾನಾ ವಿಧದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವಿದೆ.





Prathidvani Yellapura