Breaking News

ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಸುರಿದ ಮಣ್ಣಿನಿಂದ ಸಾರ್ವಜನಿಕರಿಗೆ ಉಸಿರಾಟದ ತೊಂದರೆ – ಪ್ರತಿಭಟನೆ ಎಚ್ಚರಿಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ



ಪ್ರತಿಧ್ವನಿ ಯಲ್ಲಾಪುರ : ಸಾರ್ವಜನಿಕರ ಸ್ವಾಸ್ಥ್ಯ ಕಾಪಾಡಬೇಕಾದ ಸರ್ಕಾರವೆ ತೆರಿಗೆ ಕಟ್ಟುವ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯಲ್ಲಿ ಮಹಾ ಎಡವಟ್ಟು ಮಾಡಿದ್ದು ದೂಳಿನ ಸಾಮ್ರಾಜ್ಯವೆ ತಲೆ ಎತ್ತಿದೆ ಸಾರ್ವಜನಿಕರ ಉಸಿರಾಟಕ್ಕು ಸಂಚಕಾರ ತಂದಿದೆ ಈ ಅಕ್ರಮದ ಪೂರ್ಣ ಪ್ರಮಾಣದ ತನಿಖೆಗೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.


ಯಲ್ಲಾಪುರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸದಾ ಸಮಸ್ಯೆಗಳ ಆಗರವಾಗಿದ್ದು ಇತ್ತೀಚೆಗೆ ಹೆದ್ದಾರಿ ಪಕ್ಕದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಿ ವಾಹನ ಸವಾರರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಮುಂದಾಗಿದ್ದರು ಆದರೆ ಅದ್ಯಾವ ರೀತಿಯ ಕಾಮಗಾರಿ ನಡೆಯಿತೆಂದರೆ ನೆಟ್ಟಗಿದ್ದ ಸ್ಥಳವೆಲ್ಲಾ ಪುಡಿ ಮಣ್ಣಿನ ದೂಳಿನಿಂದ ಹಸಿರು ಮರಗಿಡಗಳು ಅಕ್ಕಪಕ್ಕದ ಹೊಟೆಲ್ ಅಂಗಡಿಗಳು ಕೊನೆಗೆ ಅಲ್ಲಿ ತಯಾರಿಸಿದ ತಿಂಡಿ ಪದಾರ್ಥಗಳು ಕೆಂಪು ದೂಳಿನಿಂದ ತುಂಬಿಹೋಗಿದೆ.

ಸಾಲದೆಂಬಂತೆ ಆರೋಗ್ಯದ ಮೇಲು ಗಂಭೀರ ಪರಿಣಾಮ ಬೀರಿದ್ದು ಹಾರುತ್ತಿರುವ ದೂಳಿನಿಂದ ಮಕ್ಕಳು ಮಹಿಳೆಯರು ಮತ್ತು ವಯೋ ವೃದ್ದರ ಉಸಿರಾಟದಲ್ಲಿ ತೊಂದರೆ ಎದುರಾಗಿದ್ದು ಆತಂಕ ತಂದಿದೆ.


ಕಳೆದೊಂದು ತಿಂಗಳ ಹಿಂದೆ ಇಂತಹ ಗಂಭೀರ ಸಮಸ್ಯೆ ಎದುರಾಗಲಿದೆ ಸಂಬಂಧಿಸಿದ ಇಲಾಖೆ,ಗುತ್ತಿಗೆದಾರ ಗಮನ ಹರಿಸಿ ಸರಿಪಡಿಸಬೇಕಿದೆ ಎಂದು ಕರಾವಳಿ ಮುಂಜಾವು ಡಿಜಿಟಲ್ ಮತ್ತು ಪತ್ರಿಕೆ ಎಚ್ಚರಿಕೆ ನೀಡಿತ್ತು ಆದರೆ ಇದನ್ನು ಗಂಭೀರವಾಗಿ ಪರಿಗಣಿಸದೆ ಉದ್ದಟತನ ತೋರಿತ್ತು. ಅಲ್ಲದೆ ಅಲಲ್ಲಿ ಜೆಲ್ಲಿ ಪುಡಿ ಕಲ್ಲುಗಳನ್ನು ಹಾಕಿ ತ್ಯಾಪೆಹಾಕುವ ಕಾರ್ಯವು ನಡೆದು ಹೋಯ್ತು. ಇದೀಗ ಸಮಸ್ಯೆ ವಿಕೋಪಕ್ಕೆ ಹೋಗಿದ್ದು ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ.


ಈ ಕಾಮಗಾರಿಗೆ ಟೆಂಡರ್ ಕರೆದಿದ್ದು ಯಾವಾಗ ಮತ್ತು ಟೆಂಡರ್ ಓಕೆ ಆದಮೇಲೆ ಗುತ್ತಿಗೆದಾರನಿಗೆ ವಿಧಿಸಲಾದ ನಿಯಮಗಳು ಏನು. ಹೆದ್ದಾರಿ ಎರಡು ಬದಿಗೆ ಹಾಕ ಬೇಕಾದ ಮಣ್ಣಿನ ಗುಣಮಟ್ಟ ಎಂತಹದ್ದು, ಎಷ್ಟು ದಿನಗಳೊಳಗೆ ಕೆಲಸ ಪೂರ್ಣವಾಗಬೇಕು, ಇದನ್ನು ಓಕೆ ಮಾಡಿದ ಇಂಜನಿಯರ್ ಯಾರು. ತೆರಿಗೆ ಭರಣಮಾಡಿ ಅಧಿಕಾರಿಗಳಿಗೆಲ್ಲ ಸಂಬಳ ಕೊಡುತ್ತಿರುವ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾದರು ಯಾವುದೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಗಂಭೀರತೆ ಅರ್ಥ ಮಾಡಿಕೊಳ್ಳದಿರುವುದು ದುರಂತವಾಗಿದೆ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಿದೆ
ಹೆದ್ದಾರಿ ಪಕ್ಕದ ಅಂಗಡಿ,ಹೋಟೆಲ್ ಮತ್ತು ಗ್ರಾಮಸ್ಥರು ಕಲ್ಲಗದ್ದೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *