Breaking News

ಯಲ್ಲಾಪುರದಲ್ಲೊಂದು ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೆ ಸಾವು- ಹಿಂಬದಿ ಸವಾರನಿಗೆ ಗಂಭೀರ ಗಾಯ.


ಪ್ರತಿಧ್ವನಿ ಯಲ್ಲಾಪುರ : ಪಟದಟಣದ ಹೊರವಲಯ ಮಗೋಡು ಕ್ರಾಸ್ ಸಮೀಪ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದು ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು. ಲಾರಿ ನಿಲ್ಲಿಸದೆ ಸ್ಥಳದಿಂದ ಕಾಲ್ಕಿತ್ತ ಲಾರಿ ಚಾಲಕನ ಮೇಲೆ ದೂರು ದಾಖಲಾಗಿದೆ.


ಅಂಕೊಲಾ ತಾಲೂಕಿನ ಹಳವಳ್ಳಿ ನಿವಾಸಿ ದೇವೇಂದ್ರ ಸೀತಾರಾಮ ಗೌಡ ( 21) ಎಂಬಾತನೆ‌ ಮೃತ ಬೈಕ್ ಸವಾರನಾಗಿದ್ದು ಕಳಚೆ ನಿವಾಸಿ ವಿಜೇತ ಪ್ರೇಮಾನಂದ ಗೌಡ‌ನೆ ಗಾಯಗೊಂಡ ಹಿಂಬದಿ ಸವಾರನಾಗಿದ್ದಾನೆ.
ಗುರುವಾರ ರಾತ್ರಿ ಯಲ್ಲಾಪುರದ ಕಡೆಯಿಂದ ಬಳ್ಳಾರಿ – ಕಾರವಾರ ರಾಷ್ಟ್ರೀಯ ಹೆದ್ದಾರಿ ಮಾಗೋಡು ತಿರುವಿನ ಬಳಿ ಎಡಬದಿಯಿಂದ ಬೈಕ್ ಚಲಾಯಿಸಿ ತೆರಳುತ್ತಿರುವ ವೇಳೆಯಲ್ಲಿ ಎದುರಿನಿಂದ ಅಜಾಗರೂಕತೆಯಿಂದ ಅತಿವೇಗವಾಗಿ ಲಾರಿ ಚಲಾಯಿಸಿಕೊಂಡು ಬಂದ ಚಾಲಕ ಏಕಾಏಕಿ ಬೈಕ್ ಗೆ ಮುಖಾಮುಖಿ ಗುದ್ದಿದ್ದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ,ಹಿಂಬದಿ ಕುಳಿತವನಿಗೆ ಗಂಭೀರ ಗಾಯಗಳಾಗಿವೆ ಇಂತಹ ಸಂದರ್ಭದಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವುದಕ್ಕಾದರು ಲಾರಿ ಚಾಲಕ ಸಹಕರಿಸಬೇಕಿತ್ತು ಅದನ್ನು ಬಿಟ್ಡು ಆತ ಪರಾರಿಯಾಗಿದ್ದಾನೆ. ಆತನ ಮೇಲೆ‌ ಕ್ರಮ ಜರುಗಿಸುವಂತೆ ಮೃತನ ಕಡೆಯವರು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಪರಮಪೂಜ್ಯ “ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ದತ್ತ ಮಂದಿರದಲ್ಲಿ ಆಶಿರ್ವಚನ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ದತ್ತ ಮಂದಿರ ಪರಿಸರದಲ್ಲಿ ನೂರಾರು ದೇವತೆಗಳು ಆವಾಸರಾಗಿರುತ್ತಾರೆ. ದತ್ತಗುರುವಿನ ಸೇವೆ ಜನ್ಮ ಪಾವನ ಮತ್ತು …

Leave a Reply

Your email address will not be published. Required fields are marked *