
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಇಂದಿನ ದಿನಗಳಲ್ಲಿ ಪಠ್ಯಕ್ರಮ ಅಷ್ಟೇ ಅಲ್ಲದೇ ವಿವಿಧ ಕೌಶಲಗಳನ್ನು ಕಲಿತುಕೊಳ್ಳುವುದರಿಂದ ಸರ್ಕಾರಿ ಕೆಲಸಗಳ ಮೇಲೆ ಅವಲಂಬಿತರಾಗದೆ ಸ್ವಂತ ಉದ್ಯೋಗ ಮಾಡಬಹುದಾಗಿದೆ ಸ್ಪೋಕಲನ್ ಇಂಗ್ಲೀಷ್ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದು ವಿಶ್ರ್ರಾಂತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಕಾಲೇಜು ಹಾಗೂ ಪಟ್ಟಣದ ಎನ್.ಜಿ.ಒ ಸಂಸ್ಥೆ ಮಾತೃಭೂಮಿ ಸೇವಾ ಪ್ರತಿಷ್ಠಾನದ ಜೊತೆಗೆ ಬ್ಯೂಟಿಷಿಯನ್ ಕೋರ್ಸ್ ಹಾಗೂ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡಲು ಒಡಂಬಡಿಕೆ ಮಾಡಿಕೊಳ್ಳುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ಲೇಸ್ಮೆಂಟ್ ಸೆಲ್ ಸಂಚಾಲಕಿ ಸುರೇಖಾ ತಡವಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಆರ್.ಡಿ. ಜನಾರ್ಧನ್ ಸ್ಪೋಕನ್ ಇಂಗ್ಲೀಷ್ ತರಬೇತಿ ಕುರಿತಾಗಿ ಪಿಪಿಟಿ ಮುಖಾಂತರ ಪ್ರಸ್ತುತ ಪಡಿಸಿದರು. ನಂತರ ಮಾತೃಭೂಮಿ ಸೇವಾ ಪ್ರತಿಷ್ಠಾನ ಇದರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ನಿಶಾ ಬ್ಯೂಟಿ ಪಾರ್ಲರ್ನ ನಿಶಾ ನಾಯ್ಕ, ಸಂಚಾಲಕ ಡಿ.ಜಿ. ತಾಪಸ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಶರತ್ ಕುಮಾರ್, ಪತ್ರಾಂಕಿತ ವ್ಯವಸ್ಥಾಪಕÀ ಎನ್.ಬಿ. ಮೆಣಸುಮನೆ ,ಮಹಿಳಾ ವೇದಿಕೆ ಸಂಚಾಲಕಿ ಸವಿತಾ ನಾಯ್ಕ ಹಾಗೂ ಇತರ ಬೋಧಕ-ಬೋಧಕೇತರ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮ್ಯಾನೆಜ್ಮೆಂಟ್ ಅಕೌಂಟಿAಗ್ ವಿಷಯದಲ್ಲಿ 1೦೦/1೦೦ ಅಂಕಗಳನ್ನು ಗಳಿಸಿದ ತೃತೀಯ ಬಿ.ಕಾಂ. ನ 2೦ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಕು. ವೇದಾ ಭಟ್ಟ ಬಿ.ಕಾಂ ದ್ವಿತಿಯ ಸೆಮಿಸ್ಟರ್ ಪ್ರಾರ್ಥಿಸಿದಳು. ಕು. ವೀಣಾ ಭಟ್ಟ ಬಿ.ಎ 4 ನೇ ಸೆಮಿಸ್ಟರ್ ಎಲ್ಲರನ್ನೂ ಸ್ವಾಗತಿಸಿದಳು. ಕು. ಕೀರ್ತಿ ಮರಾಠಿ ಕಾರ್ಯಕ್ರಮ ನಿರೂಪಿಸಿದಳು.


Prathidvani Yellapura