
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ನೂತನ ಆಡಳಿತ ಸೌಧದ ಹಿಂಭಾಗ ಕಂದಾಯ ಇಲಾಖೆಯ ಅಧಿಕಾರಿಗಳ ವಸತಿಗೃಹಗಳಿದ್ದು ಮಂಗಳವಾರ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿದೆ.

ವಸತಿ ಗೃಹಗಳು ಜಲಾವೃತವಾಗಿರುವುದು ಗಟಾರವಿಲ್ಲದೇ ಕಾಂಕ್ರೀಟ್ ರಸ್ತೆಯೊಂದನ್ನು ನಿರ್ಮಿಸಿರುವುದೇ ಪ್ರಮುಖ ಕಾರಣವಾಗಿದ್ದು ಸಂಬAಧಿಸಿದ ಇಲಾಖೆ ತುರ್ತಾಗಿ ನೀರು ಹೊರ ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲವಾದಲ್ಲಿ ಮಳೆಯಿಂದಾದ ಹಾನಿಯ ವರದಿಗೆ ತೆರಳುವ ಕಂದಾಯ ಇಲಾಖೆಯ ಅಧಿಕಾರಿಗಳ ಮನೆಗಳೇ ಜಲಾವೃತವಾಗಿ ಸಮಸ್ಯೆಯಲ್ಲಿದ್ದರೆ ಹೇಗೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


Prathidvani Yellapura