


ಪ್ರತಿಧ್ವನಿ ವಿಶೇಷ ಅತಿಥಿ ಬರಹ – ಡಿ.ಜಿ.ದುಂಡಿ
ಪ್ರತಿಧ್ವನಿ,ಯಲ್ಲಾಪುರ : ಇಡೀ ದೇಶಕ್ಕೆ ದೇಶವೇ ನಮ್ಮನ್ನು ಆಳಲೆಂದು ನಾವೇ ಆರಿಸಿ ಕಳಿಸಿದ ಸದಸ್ಯರು ನಮಗಾಗಿ, ದೇಶಕ್ಕಾಗಿ ಚರ್ಚಿಸಿ ದೂರಾಲೋಚನೆಯ, ಪ್ರಗತಿಪರ ಯೋಜನೆಗಳನ್ನು ರೂಪಿಸುತ್ತಾರೆ. ದೇಶದ ಹಲವು ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಇವರೆಲ್ಲ ಅಸಾಧಾರಣ ಬುದ್ದಿವಂತ ಜವಾಬ್ದಾರಿಯುತ ಜನ. ಎಂದು ಕಿವಿ ಕಣ್ಣು ಚುರುಕಾಗಿಸಿಕೊಂಡು ಕಾಯುತ್ತಾ ಕುಳಿತರೆ…. ಕಳೆದ ಆರು ದಿನಗಳಿಂದಲೂ …ಕಲಾಪ ನಡೆಸಲು ಅಸಾಧ್ಯವಾಗುವಂತೆ ಸಭಾಧ್ಯಕ್ಶರು ಪದೇ ಪದೇ ಕಲಾಪ ಮುಂದೆ ಹಾಕುವಂತೆ ಮಾಡುತ್ತಿದ್ದಾರೆ. ಇದನ್ನು ದೇಶದ ಪ್ರಾಮಾಣಿಕ ತೆರಿಗೆದಾರನಾಗಿ ಖಂಡಿಸುತ್ತೇನೆ.

ಈಗಾಗಲೇ ಕಲಾಪದ ಅರ್ಧ ಭಾಗ ವ್ಯರ್ಥವಾಗಿ ಅಮೂಲ್ಯವಾದ ಸಮಯ ಗತಿಸಿಹೋಗಿದೆ. ದೇಶದ ಯಾವುದೇ ಸಮಸ್ಯೆಗಳ ಬಗ್ಗೆ ಪ್ರಗತಿಯ ಬಗ್ಗೆ ಒಂದು ಕ್ಷಣದ ಚರ್ಚೆ ಸಹಾ ನಡೆದಿಲ್ಲ.ಆಯ್ಕೆ ಆಗದವರಲ್ಲೂ ತಿಳುವಳಿಕೆ, ಜ್ನಾನ, ದೇಶದ ಬಗ್ಗೆ ಕಾಳಜಿ ಇರುವವರಿದ್ದಾರೆ.ದೇಶ ಪ್ರೇಮಿಗಳಿದ್ದಾರೆ. ಆದರೆ ಅಧಿಕಾರ ಇಲ್ಲ ಅಷ್ಟೆ. ನೌಕರರು ಮುಷ್ಕರ ಹೂಡಿದರೆ ಎಸ್ಮಾ ಜಾರಿಮಾಡಬಹುದು.ಆಗಲೂ ಬಗ್ಗದಿದ್ದರೆ ನೌಕರಿ ಯಿಂದ ತೆಗೆದುಹಾಕಬಹುದು. ಆದರೆ ಇವರಿಗೇನುಮಾಡುವುದು?
ಲೋಕಸಭಾ ಅಧಿವೇಶನ ನಡೆದಾಗ ಒಂದು ನಿಮಿಷಕ್ಕೆ 2. 50 ಲಕ್ಷ ರೂಪಾಯಿ ಖರ್ಚು ಬರುತ್ತದೆ ಅನ್ನುವುದನ್ನು ಓದಿ ತಿಳಿದಿದ್ದೆ. ಈಗ 3 ಲಕ್ಷ ರೂಪಾಯಿ ಒಂದು ನಿಮಿಷಕ್ಕೆ ಖರ್ಚಾಗುತ್ತದೆ. ಒಂದು ತಾಸಿಗೆ 1.80 ( ಅಂದರೆ 1ಕೋಟಿ 80 ಲಕ್ಷ) ದಿನಕ್ಕೆ 8 ತಾಸು ನಡೆದರೆ 14 ಕೋಟಿ 40 ಲಕ್ಷ ರೂ ಒಂದು ದಿನಕ್ಕೆ ನಾವು ಸಲ್ಲಿಸಿದ ಟ್ಯಾಕ್ಸ ಹಣದಿಂದ
ಇದನ್ನು ನಾವು ನೀಡಿರುವುದು ದೇಶದ ಪ್ರಗತಿಗೆ. ಆದರೆ ಇದೇನಾಗುತ್ತಿದೆ. ಇನ್ನಾದರೂ ಕಲಾಪ ಸುಗಮವಾಗಿ ನಡೆಯುವಂತೆ ಗೌರವಾನ್ವಿತ ಲೋಕಸಭಾ ಸದಸ್ಯರು ಪಕ್ಷ ಬೇಧ ಮರೆತು ಸಹಕರಿಸಿ ದೇಶದ ಪ್ರಗತಿಬಗ್ಗೆ ಚರ್ಚಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸಬೇಕಾಗಿ ಕಳಕಳಿಯಿಂದ ವಿನಂತಿಸುತ್ತಿದ್ದೇನೆ.
ಜಾಹಿರಾತು ನೀಡಿ ಯಲ್ಲಾಪುರ ನೆಲದ ಪ್ರತಿಧ್ವನಿ ಪ್ರೋತ್ಸಾಹಿಸಿ ದೂರವಾಣಿ ಸಂಖ್ಯೆ -9113096085







Prathidvani Yellapura