Breaking News

ಶಾಲೆಯ ಆವರಣದಲ್ಲಿ ಪಾಳುಬಿದ್ದ ಹಳೆಯ ಕಟ್ಟಡ -ಅನೈತಿಕ ಚಟುವಟಿಕೆಗೆ ದಾರಿ !!!!

ಯಲ್ಲಾಪುರ ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಉರ್ದುಶಾಲಾ ಕಟ್ಟಡ

ಶ್ಯಾಮಲಾ ನಾಗೇಶ್……

ಪ್ರತಿಧ್ವನಿ,ಯಲ್ಲಾಪುರ –ಯಲ್ಲಾಪುರ ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ಹಲವು ವರ್ಷಗಳಿಂದ ಎರಡು ಪಾಳುಬಿದ್ದ ಕೊಠಡಿಗಳಿದ್ದು ಗಿಡಗಂಟಿಗಳು ಬೆಳೆದದ್ದಲ್ಲದೆ ಹಾವು ಚೇಳುಗಳ ವಾಸಸ್ಥಾನದಂತಾಗಿದೆ. ಇತ್ತೀಚೆಗೆ ಪಾಳುಬಿದ್ದ ಕೊಠಡಿಯೊಳಗೆ ಅನೈತಿಕ ಚಟುವಟಿಕೆಗಳು ನಡೆಯುವ ಬಗ್ಗೆ ಕೇಳಿ ಬರುತ್ತಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.

ಮಚ್ಚಿಗಲ್ಲಿ ಉರ್ದುಶಾಲಾ ಆವರಣದಲ್ಲಿ ಪಾಳು ಬಿದ್ದಿರುವ ಎರಡು ಕೊಠಡಿಗಳು


ಕಳೆದ 20 ವರ್ಷಗಳ ಹಿಂದೆ ಉರ್ದು ಅಂಗನವಾಡಿಯಾಗಿ ಬಳಕೆಯಾಗುತ್ತಲಿದ್ದ ಕೊಠಡಿಗಳು ನಂತರದ ದಿನಗಳಲ್ಲಿ ಬಂದ್ ಮಾಡಲಾಗಿದ್ದು ಕೊಠಡಿಯ ಕೆಲವು ಹೆಂಚುಗಳು ಮಂಗಮಾಯವಾಗಿ ಮಳೆಗಾಲದಲ್ಲಿ ನೀರೆಲ್ಲಾ ಒಳ ಸುರಿದು ಗಬ್ಬೆದ್ದು ನಾರುತ್ತದೆ. ಕೊಠಡಿಯ ಒಳಗು ಹೊರಗು ಬೃಹದಾಕಾರದಲ್ಲಿ ಗಿಡಗಂಟಿಗಳು ಬೆಳೆದು ನೋಡಲು ಭಯಾನಕವಾಗಿ ಕಂಡುಬರುತ್ತದೆ.

ಕೊಠಡಿಯ ಹೆಂಚುಗಳು ಕಾಣೆಯಾಗಿರುವುದು

ಶಾಲೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ಓದುತ್ತಿದ್ದು ಆಟದ ವೇಳೆ ತಮಗರಿವಿಲ್ಲದೆ‌ ಈ ಸ್ಥಳಕ್ಕೆ ಬಂದಾಗ ವಿಷಕಾರಿ ಹಾವು ಚೇಳುಗಳಿಂದ ಅಪಾಯವಾದರೆ ಹೊಣೆ ಯಾರು ? ಎಂಬುದು ಹಲವರ ಪ್ರಶ್ನೆಯಾಗಿದೆ.

ಕೊಠಡಿಯ ಒಳ ಭಾಗದಲ್ಲಿ ಬಿದ್ದಿರುವ ಕಸ ಮತ್ತು ಸಿಗರೇಟ್ ಗುಟ್ಕಾ ಪ್ಯಾಕೆಟ್ ಗಳು


ಇರುವ ಅಲ್ಪಸ್ವಲ್ಪ ಸರ್ಕಾರಿ ಸ್ವತ್ತು ಈ ರೀತಿ ಪಾಳುಬಿದ್ದು ಪ್ರಯೋಜನಕ್ಕೆ ಬಾರದೆ ವ್ಯರ್ಥವಾದರೆ ಹೇಗೆ. ಇದರ ಸದ್ಬಳಕೆ ಮಾಡಿಕೊಂಡು ಪುಟ್ಟದಾದ ಮಕ್ಕಳ ಗ್ರಂಥಾಲಯ ಮಾಡಿದರೆ ಸದ್ಬಳಕೆಯಾಗಲಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ಪಾಳುಬಿದ್ದ ಎರಡು ಕೊಠಡಿಗಳು ಹಲವು ವರ್ಷಗಳಿಂದ ಇದೇರೀತಿ ಇದ್ದು ಮಕ್ಕಳು ಈ ಭಾಗಕ್ಕೆ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ. ಕೊಠಡಿಯ ಬಾಗಿಲು ಹಾಳಾಗಿರುವುದು ಹೆಂಚುಗಳು ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿರಬಹುದಾಗಿದೆ. ಈ ಕುರಿತು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಲೆಯ ಸಹ ಶಿಕ್ಷಕ ಗಂಗಾಧರ ಪಟಗಾರ್ ಹೇಳಿದರು.

ಜಾಹಿರಾತು ನೀಡಿ ಯಲ್ಲಾಪುರ ನೆಲದ ” ಪ್ರತಿಧ್ವನಿ” ಪ್ರೋತ್ಸಾಹಿಸಿ

ಜಗತ್ತಿಗೆ ಆಧ್ಯಾತ್ನ ಶಕ್ತಿ ತುಂಬಲು ಭಾರತದ ಹಿಂದುತ್ವ ಗಟ್ಟಿಗೊಳಿಸಬೇಕಿದೆ… ಬನ್ನಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕೊರಳ ತುಂಬಾ ಓಂಕಾರದ ನಿನಾದದಲ್ಲಿ….. ಜೈ ಶ್ರೀ ರಾಮ್

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *