



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕು ಬ್ಲಾಕ್ ಕಾಂಗ್ರೆಸ್ ನಲ್ಲಿ ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗುತ್ತಾ ಸಾಗುತ್ತಿದೆ.ಒಂದು ತಂಡ ಸಿಡಿಯುತ್ತಲೆ ಮತ್ತೊಂದು ತಂಡ ಆರ್ಭಟಿಸುತ್ತದೆ ಒಬ್ಬರ ಮೇಲೊಬ್ಬರ ಸವಾರಿ ಸಾಗುತ್ತಲೆ ಇದೆ.
ಕಳೆದೆರಡು ದಿನಗಳ ಹಿಂದೆ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ನ ಒಂದು ಬಣ ಮಾಜಿ ಶಾಸಕ ವಿ.ಎಸ್.ಪಾಟೀಲ ಸೇರಿದಂತೆ ಕೆಲವು ನಾಯಕರು ಹಾಗು ಬ್ಲಾಕ್ ಅಧ್ಯಕ್ಷ ಎನ್.ಕೆ.ಭಟ್ ಮೇಲಿನ ಮುನಿಸನ್ನ ಮಾದ್ಯಮಗಳೆದುರು ಹೊರ ಹಾಕಿದ್ದರು ಅದನ್ನು ಖಂಡಿಸಿ ಸೋಮವಾರ ಮತ್ತೊಂದು ಬಣ ಕಲ್ಮಠದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ ದಲ್ಲಿ ಸುದ್ದಿ ಗೋಷ್ಠಿ ನಡೆಸಿ ಬ್ಲಾಕ್ ಮಾಜಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಸೇರಿದಂತೆ ಅವರ ಗುಂಪಿನಲ್ಲಿರುವ ಇತರೆ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ಕೆ ಭಟ್ ಮೆಣಸುಪಾಲ
ವಿ.ಎಸ್ .ಪಾಟೀಲರು ಒರ್ವ ಮುತ್ಸದ್ದಿ ರಾಜಕಾರಣಿಗಳಾಗಿದ್ದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದವರಾಗಿದ್ದಾರೆ. ಅವರ ಮೇಲಿನ ಆಪಾದನೆ ಸತ್ಯಕ್ಕೆ ದೂರವಾದುದು. ಪಕ್ಷ ಏನೆ ನಿರ್ಧಾರ ಕೈಗೊಂಡರು ಅದನ್ನು ಪಾಲಿಸಿಕೊಂಡು ಹೋಗುವ ಶಿಸ್ತಿನ ಸಿಪಾಯಿಗಳು ನಾವು. ಪಕ್ಷದೊಂದಿಗೆ ಏನೆ ಬೇಸರ ಇದ್ದರು ನಾಲ್ಕು ಗೋಡೆಗಳ ಮದ್ಯೆ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಬಗೆಹರಿಸಿಕೊಳ್ಳಬೇಕಿದೆ. ಕೆಲ ದಿನಗಳಿಂದ ಪಕ್ಷದ ವಿಚಾರಗಳನ್ನು ಹಾದಿಬೀದಿ ರಂಪ ಮಾಡುತ್ತಿರುವ ಕೆಲವರು ಈ ನಡೆ ಸುಧಾರಿಸದಿದ್ದರೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ಎಸ್.ಭಟ್ಟ
ಕೆಲ ದಿನಗಳಿಂದ ಮಾದ್ಯಮಕ್ಕೆ ಇಲ್ಲ ಸಲ್ಲದ ಸುಳ್ಳು ಹೇಳುತ್ತ ಪಕ್ಷಕ್ಕೆ ಮತ್ತು ನಾಯಕರಿಗೆ ಮುಜುಗರ ತರುವ ಕೆಲಸ ಮಾಡುತ್ತಿರುವ ಇಡಗುಂದಿ ಅನಿಲ್ ನಾಯ್ಕ್ ಮತ್ತು ಇತರೆ ಕೆಲ ಕಾರ್ಯಕರ್ತರ ಬೆನ್ನಿಗೆ ಇದ್ದು ಇಂತಹ ನಡೆ ನಡೆಸುತ್ತಿರುವ ಬ್ಲಾಕ್ ಮಾಜಿ ಅಧ್ಯಕ್ಷ ಡಿ.ಎನ್.ಗಾಂವ್ಕರ್ ನಡೆ ಯಾರು ಒಪ್ಪುವಂತಹದ್ದಲ್ಲ ಮಾಜಿ ಶಾಸಕ ವಿ.ಎಸ್.ಪಾಟೀಲರ ಮೇಲೆ ಆರೋಪ ಹೊರಿಸಿದ ಇವರ ಪಾತ್ರವೇನು ಎಂದು ಎಲ್ಲಿಯು ಹೇಳುತ್ತಿಲ್ಲ. ಪಕ್ಷಕ್ಕೆ ಇವರ ಕೊಡುಗೆ ಏನು ಶ್ರಮವೇನು ಎನ್ನುವುದನ್ನು ಮೊದಲು ಹೇಳಲಿ. ವೈಯುಕ್ತಿಕವಾಗಿ ಶಾಸಕ ಹೆಬ್ಬಾರ್ ಕುಟುಂಬದೊಂದಿಗೆ ಉತ್ತಮ ಒಡನಾಟವಿದ್ದು ಪಕ್ಷ ಮತ್ತು ಸಿದ್ದಾಂತದ ದೃಷ್ಟಿಯಿಂದ ವಿರೋದಿಗಳಾಗಿದ್ದೇವೆ ಹೊರತು ಉತ್ತಮ ಬಾಂಧವ್ಯ ಹೊಂದಿದ್ದೇನೆ.2008 ರಿಂದ 18 ರವರೆಗೆ ಶ್ರೀ ರಾಮನಿಗೆ ಹನುಮಂತನಾಗಿ ಸೇವೆ ಸಲ್ಲಿಸಿದ್ದೇನೆ.

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಘುಭಟ್ಟ
ದಿನ ಬೆಳಗಾದರೆ ಮಾದ್ಯಮದೆದುರು ಸುಳ್ಳು ಪೋಣಿಸುತ್ತ ವಿ.ಎಸ್.ಪಾಟೀಲ ರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಅನಿಲ್ ನಾಯ್ಕ್ ಯಾವ ಜನಪ್ರತಿನಿಧಿ ಸ್ಥಾನ ನಿಭಾಯಿಸಿದ್ದಾರೆಂಬುದು ಯಕ್ಷಪ್ರಶ್ನೆಯಾಗಿದೆ. ಬಿಜೆಪಿ ಯವರಿಗೆ ಕಾಮಗಾರಿಯನ್ನು ನೀಡುತ್ತಾರೆಂಬ ಆಪಾದನೆ ಶುದ್ದ ಸುಳ್ಳು ಕಾಮಗಾರಿ ಟೆಂಡರ್ ಮೂಲಕ ಪಡೆಯುವುದಾಗಿದ್ದು ಅಧಿಕಾರಿಗಳು ಉತ್ತಮ ಕೆಲಸಗಳನ್ನು ನಿರೀಕ್ಷಿಸಿ ಕಾಮಗಾರಿಗಳನ್ನು ನೀಡಿರುತ್ತಾರೆ. ಅವರ ಈ ಎಲ್ಲಾ ನಡೆಗಳು ಪಕ್ಷಕ್ಕೆ ಡ್ಯಾಮೇಜ್ ಉಂಟುಮಾಡುತ್ತಿದ್ದು ವರಿಷ್ಟರು ಎಲ್ಲವನ್ನೂ ಗಮನಿಸಿ ಸೂಕ್ತ ಕ್ರಮ ಜರುಗಿಸಲಿದೆ.

ಬ್ಲಾಕ್ ಮಾಜಿ ಅಧ್ಯಕ್ಷ ಟಿ.ಸಿ.ಗಾಂವ್ಕರ್
ಪಕ್ಷದೊಳಗಿದ್ದುಕೊಂಡು ಪ್ರತಿ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆ ಕೊಟ್ಟು ತಮ್ಮ ನಡೆ ಸಮರ್ಥಿಸಿಕೊಳ್ಳುವ ಡಿ.ಎನ್.ಗಾಂವ್ಕರ್ ರಾಜಿನಾಮೆ ನೀಡುವುದುಸೂಕ್ತ. ಯಾವ ಅಭ್ಯರ್ಥಿ ಬಂದರು ಅವರಿಗೆ ಅಸಹಕಾರ ತೋರಿ ಒಳಗೊಳಗೆ ಪಿತೂರಿ ಮಾಡುವುದೆ ಇವರ ಕಾರ್ಯವಾಗಿದೆ. ಪಕ್ಷದ ಸವಲತ್ತು ಪಡೆದು ಪಕ್ಷಕ್ಕೆ ಅಶಿಸ್ತಿನಿಂದ ವರ್ತಿಸುವುದು ಒಳ್ಳೆಯ ನಡೆಯಲ್ಲ ರಾಜಿನಾಮೆ ನೀಡಲಿ.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ್ ಶಾನಬಾಗ್, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಡಿ.ಮುಲ್ಲಾ, ಸೇವಾದಳ ಜಿಲ್ಲಾ ಕಾರ್ಯದರ್ಶಿ ಮಹೇಶ್ ನಾಯ್ಕ ,ಮಲವಳ್ಳಿ ಅನಂತ ಗೌಡ, ಹಿತ್ಲಳ್ಳಿ ಶೇಖರ್ ಸಿದ್ದಿ, ಯಲ್ಲಾಪುರ ತಾಲೂಕು ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಫೈರೋಝ್ ಶೇಖ್, ಅನಿಲ್ ಮರಾಠೆ, ಬೀಮ್ಸಿ ವಾಲ್ಮಿಕಿ, ಮಲವಳ್ಳಿ ರಾಘವೇಂದ್ರ,ಹೀರು ಶಿಂದೇ, ನಾಗರಾಜ್ ಹಿತ್ಲಳ್ಳಿ, ಸುನಿಲ್ ಕಾಂಬ್ಳೆ, ಬಾಬು ಶಿಂದೆ, ಆರ್.ಪಿ.ಹೆಗಡೆ, ನೂರ್ ಅಹ್ನದ್ ಮುಜಾವರ್ ಇತರ ಪ್ರಮುಖರು ಉಪಸ್ಥಿತರಿದ್ದರು.
Prathidvani Yellapura