Breaking News

ಜಯಕರ್ನಾಟಕ ಕಿರವತ್ತಿ ಸಂಘಟನೆಯ ಕನ್ನಡಮ್ಮನ ಆರಾಧನೆ ರಾಜ್ಯೋತ್ಸವ ಆಚರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದು ಕನ್ನಡದ ಶ್ರೇಷ್ಟತೆ ಎಷ್ಟೆಂಬುದು ತಿಳಿಯುತ್ತದೆ ಅಂತಹ ಉತ್ಕ್ರಷ್ಟ ಭಾಷೆ ನಮ್ಮದಾಗಿರುವುದಕ್ಕೆ ಸಂತಸವಾಗುತ್ತದೆ. ಅದನ್ನು ಬಳಸಬೇಕೆ ಹೊರತು ಅಳಿಸಬಾರದು. ಕನ್ನಡ  ನಮ್ಮೆಲ್ಲರ ಅನ್ನ ಭಾಷೆಯಾಗಿದ್ದು ನೆಲದ ಭಾಷೆಯಾಗಿದೆ. ಅನ್ಯ ಭಾಷೆಯ ವ್ಯಾಮೋಹಕ್ಕಿಂತ ಕನ್ನಡತಾಯಿ ‌ ಆರಾಧನೆ ಅಗತ್ಯವಾಗಿದೆ‌. ಕನ್ನಡದ‌ಮೇಲಿನ ಪ್ರೀತಿ ಮತ್ತು ಬದ್ದತೆಯೊಂದಿಗೆ ಜಯಕರ್ನಾಟಕ ಸಂಘಟನೆ ಕಳೆದ ಹದಿನೈದು ವರ್ಷಗಳಿಂದ ನಾಡಿನ ಸೇವೆ ಮಾಡುತ್ತ ಬಡವ ಬಲ್ಲಿದರ ಶೋಷಿತರ ಪರ ನಿಂತು  ಧ್ವನಿಯಾಗುತ್ತಿರುವ ಜಯಕರ್ನಾಟಕ ಸಂಘಟನೆಯ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಹೇಳಿದರು.


      ಅವರು ಕಿರವತ್ತಿಯಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.


       ಕನ್ನಡ ಕಟ್ಟುವ ಕಾರ್ಯ ಅತ್ಯಂತ ಜವಾಬ್ದಾರಿಯುತ ಮತ್ತು ನೆಲಕೊಪ್ಪುವ ಕಾರ್ಯವಾಗಿದೆ ಇಂತಹ ಶ್ರೇಷ್ಠ ಕಾರ್ಯದಲ್ಲಿ ತೊಡಗಿದ ಸಂಘಟನೆಯ ಬದ್ದತೆಯ ನಡೆ ಮೆಚ್ಚುವಂತಹದ್ದು ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಘು ಭಟ್ ಹೇಳಿದರು.


      ಸದಾ ಜನಪರ ಧ್ವನಿಯಾಗಿ ಸಂಕಷ್ಟದಲ್ಲಿರುವವರ ಬೆನ್ನೆಲುಬಾಗಿ ನಿಂತ ಸಂಘಟನೆಯು ಕ್ರಿಯಾಶೀಲವಾಗಿ ಮುಂದುವರೆದು ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿ  ಸಗುತ್ತಿರುವ ಪ್ರಯತ್ನದ ಹಿಂದೆ ವಿಲ್ಸನ್ ಫರ್ನಾಂಡೀಸ್ ಅವರ ಅವಿರತ ಪ್ರಯತ್ನ ಕಾರಣವಾಗಿದೆ ಎಂದು ಮಹಿಳಾ ಪ್ರಮುಖರಾದ ಸೀಮಾ ಫರ್ನಾಂಡೀಸ್, ಸುಮಂಗಲ ಹೇಳಿದರು.


      ವೇದಿಕೆಯಲ್ಲಿ ಹುಬ್ಬಳ್ಳಿ ತಾಲೂಕಿನ ಸುಳ್ಯ ಗ್ರಾಮದಿಂದ ಬಂದ ಡೊಳ್ಳು ಕುಣಿತದ ಎರಡು ಮಹಿಳಾ ತಂಡಗಳು ಅದ್ಬುತ ಪ್ರದರ್ಶನ ನೀಡಿ ಜನಮನ ರಂಜಿಸಿದವು.
      ಪ್ರಮುಖರಾದ ಬಾಬು ಸಿದ್ದಿ, ಬೀಮ್ಸಿ ವಾಲ್ಮೀಕಿ, ಉದಯ ಖಾನಾಪುರ, ವಿ.ಎಸ್.ಭಟ್, ಅರುನ್ ಶೇಖ್, ಬಾಬಾ ಜಾನ್ ಶೇಖ್, ಮುನೀರ್ ಪಟೇಲ್, ಗುಳ್ಳಾಪುರ ಮತ್ತು ಯಲ್ಲಾಪುರ ಘಟಕಗಳ ಪ್ರಮುಖರು, ಜೂಜೆ ಸಿದ್ದಿ, ರುಕ್ಮಿಣಿ ನಾಯಕ್, ಕೃಷ್ಣ ಹಿರೇಹಳ್ಳಿ, ಹೆಚ್.ಎಂ.ನಾಯ್ಕ್, ನರಸಿಂಹ ನಾಯ್ಕ್, ಶಾಹಿದ್ ಮುಜಾವರ್, ಶಂಶಾದ್ ಅತ್ತಾರ್, ಫಾತೀಮ ದರ್ವೇಶ್, ಮುಷ್ತಾಕ್ ಶೇಖ್, ಅರ್ಜುನ್ ಬೆಂಗೇರಿ, ಹೀರುವಾಯು ಶಿಂದೇ, ರಾಖಿ ನಾಲ್ಗಟಿ, ಸುಭಾಷ್ ಶೇಷಗಿರಿ, ಜಾವು ಪಟಕಾರೆ, ಸುನಿಲ್ ಬಜ್ಜು ಮುಂತಾದವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಬಹುಕಾಲದಿಂದ ಮಹಿಳೆ ಎಂಬ ಅಳುಕು ಇಲ್ಲದೆ ಪತ್ರಿಕಾ ವಿತರಕಳಾಗಿ ಮನೆಮನೆಗೆ ಪತ್ರಿಕೆ ತಲುಪಿಸುವ ಕಯಕದಲ್ಲಿರುವ ಮರಿಯಾಂಬಿ ಅವರನ್ನು ಸಂಘಟನೆಯಿಂದ ಗೌರವಿಸಲಾಯಿತು.

ಜಯ ಕರ್ನಾಟಕ ಸಂಘಟನೆ ಪ್ರಮುಖ ವಿಲ್ಸನ್ ಫರ್ನಾಂಡೀಸ್ ಣ್ವಾಗತಿಸಿದರು. ಶಾಹಿನ್ ಬಾನು ತಂಡದವರು ಪ್ರಾರ್ಥಿಸಿದರು. ಶಿಕ್ಷಕ ಗಂಗಾಧರ ನಿರೂಪಿಸಿ ವಂದಿಸಿದರು.


      ನಂತರ ಸೇರಿದ ಎಲ್ಲಾ ನಾಗರಿಕರಿಗು ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಶಿರಸಿಯ ಮನೋಜ್ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *