

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ನೂತನವಾಗಿ ಉದಯಿಸಿದ ಜಯ ಭಾರತ ಸಂಘಟನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ನೂತನ ಸಂಘಟನೆಯನ್ನು ಉದ್ಘಾಟಿಸಿದರು.

ಕಿರವತ್ತಿ ಪ್ರಮುಖ ರಸ್ತೆಯಲ್ಲಿ ಶಾಸಕರಾದಿಯಾಗಿ ಸ್ಥಳೀಯ ಜನನಾಯಕ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ , ಗ್ರಾಮ ಪಂಚಾಯತ್ ಸದಸ್ಯ ಸ್ಥಳೀಯ ಮುಖಂಡ ರಹಮತ್ ಅಬ್ಬೀಗೆರೆ , ಸಂಜಯ್ ಮಿರಾಶಿ, ಇನ್ನಿತರೆ ಸ್ಥಳೀಯ ಮುಖಂಡರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಯಲ್ಲಿ ಪಟಾಕಿ ಸದ್ದು , ಡೊಳ್ಳುಕುಣಿ, ಕನ್ನಡದ ಜಯಕಾರ ಮಕ್ಕಳ ಬಗೆಬಗೆಯ ವೇಷಭೂಷಣ ಮೆರವಣಿಗೆಯ ರಂಗನ್ನು ಮತ್ತಷ್ಟು ಹೆಚ್ಚಿಸಿತ್ತು. ಮೆರವಣಿಗೆ ಸಭಾ ಕಾರ್ಯಕ್ರಮದ ಸ್ಥಳಕ್ಕೆ ತಲುಪಿ ಶಾಸಕ ಹೆಬ್ಬಾರ್ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ ಕನ್ನಡತನದ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ. ನಮ್ಮೆಲ್ಲರ ಉದ್ದೇಶವು ಒಂದೇ ನೆಲ,ಜಲ,ಭಾಷೆ ವಿಷಯಕ್ಕೆ ಸದಾ ನೆಲದ ಪರವಾಗಿ ನಿಲ್ಲುವ ಮನಸ್ಸಿರಬೇಕು. ಸಾರ್ಥಕ ಸಮಾಜಸೇವೆಯೊಂದಿಗೆ ನೂತನ ಸಂಘಟನೆ ಸಮಾಜಮುಖಿ ಕಾರ್ಯಗಳನ್ನು ಮಾಡಲೆಂದು ಹಾರೈಸುವೆ ಎಂದರು.

ಸಂಸ್ಥಾಪಕ ಅಧ್ಯಕ್ಷ ವಿಜಯ್ ಮಿರಾಶಿ ಅವರಿಗೆ ಶಾಸಕ ಶಿವರಾಮ ಹೆಬ್ಬಾರ್ ಆದೇಶಪತ್ರ ನೀಡಿ ಗೌರವಿಸಿ ಸನ್ಮಾನಿಸಿದರು ಅವರೊಂದಿಗೆ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು.

ಅಹಮದ್ ಕೋಳಿಕೇರಿ ಮತ್ತು ಸಂಗಡಿಗರ ನೇತೃತ್ವದಲ್ಲಿ ಜರುಗಿದ ರಾಜ್ಯೋತ್ಸವ ಆಚರಣೆ ಅತ್ಯಂತ ವಿಜ್ರಂಭಣೆಯಿಂದ ಜರುಗಿತು. ಭಾಗವಹಿಸಿದ ಎಲ್ಲಾ ಸಾರ್ವಜನಿಕರಿಗು ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಸ್ಥಳೀಯ ಇಗ್ನೇಷಿಯಸ್ ಫಾದರ್ ಇಟಲಿಯಲ್ಲಿ ನೆಲೆಸಿದ್ದರು ಕನ್ನಡ ಪ್ರೇಮ ಹಾಗೆ ಇದೆ ಕನ್ನಡ ಸೇವೆ ಮುಂದುವರೆಸಿದ್ದೇನೆ ಎಂದರು.
ಸುನಿತಾ ಸೋಮಾಪುರಕರ ಸಂಗಡಿಗರು ಪ್ರಾರ್ಥಿಸಿದರು ಶಿಕ್ಷಕ ಗಂಗಾಧರ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ವೇದಿಕೆಯಲ್ಲಿ ಪ್ರಮುಖರಾದ ಸಂಜಯ ಮಿರಾಶಿ, ರವಿಕೈಟ್ಕರ್, ರಹಮತ್ ಅಬ್ಬಿಗೆರಿ,ಮಾಕುಕೋಕ್ರೆ, ರಾಜೇಶ್ ತಿನೇಕರ, ಮಹೇಶ್ ಪೂಜಾರ, ಹಸನ್ ಶೇಖ್, ಶೇಖರ ಶೇಟ್, ಮಹೇಶ್ ಗೋಕರ್ಣ, ಹಸೀನಾ ಶೇಖ್, ರುದ್ರಪ್ಪ ವಾಲ್ಮೀಕಿ, ತೆರೆಜಾ, ಹನುಮವ್ವ ಭಜಂತ್ರಿ ಹಾಗು ವಿವಿಧ ಕ್ಷೇತ್ರದ ಗಣ್ಯರು, ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

Prathidvani Yellapura