

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಮಂಗನತಾವರೆಕೆರೆ ಗ್ರಾಮದ ನಿವಾಸಿ ಗೋದುಬಯಿ (23) ಎಂಬಾಕೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು ಕುಟುಂಬದ ಸದಸ್ಯರು 108 ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಆಂಬುಲೆನ್ಸ್ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯದಲ್ಲಿ ನೋವು ವಿಪರೀತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಎಂಟಿ ಯಾಗಿದ್ದ ನಸ್೯ ಕುಸುಮ ನಾಯ್ಕ್ ಸಮಯಪ್ರಜ್ಞೆಯಿಂದ ಆಂಬುಲೆನ್ಸ್ ನಲ್ಲೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದು ಹೆಣ್ಣುಮಗು ಜನಿಸಿದೆ.
ತಾಯಿ ಮಗು ಆರೋಗ್ಯದಿಂದ ಸುರಕ್ಷಿತವಾಗಿದ್ದು ನಸ್೯ ಕುಸುಮ ನಾಯ್ಕ್ ಮತ್ತು ಪೈಲಟ್ ವಿಧ್ಯಾಧರ ಅವರನ್ನು ಕುಟುಂಬಸ್ತರು ಶ್ಲಾಘಿಸಿರುತ್ತಾರೆ.

Prathidvani Yellapura