
ಪ್ರತಿಧ್ವನಿ,ಯಲ್ಲಾಪುರ : ಚುನಾವಣೆಯಲ್ಲಿ ಸ್ಪರ್ಧಿಸಿ ಘಟಾನುಘಟಿ ರಾಜಕೀಯ ಪಕ್ಷಗಳ ಎದುರು ಗೆದ್ದಬಿಡುವೆನೆಂಬ ಹಮ್ಮು ಬಿಮ್ಮು ನನ್ನಲಿಲ್ಲ. ಆದರೆ ನಿಧಾನವಾಗಿಯಾದರು ಮತದಾರರಲ್ಲಿ ಅರಿವು ಮೂಡಿಸಿ ಎಂದಿಗಾದರು ಒಮ್ಮೆ ಎಚ್ಚೆತ್ತುಕೊಳ್ಳುವ ಮತದಾರ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯತ್ತ ಗಮನ ಹರಿಸಲಿದ್ದಾನೆ. ಆ ಛಲದಿಂದಲೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಮತ್ತು ವಿಶ್ವಾಸವಿರುವ ಎಲ್ಲಾ ಗೌರವಾನ್ವಿತ ಮತದಾರರಲ್ಲಿ ಏಕಾಂಗಿಯಾಗಿ ಮತ ಯಾಚಿಸುತ್ತಿದ್ದೇನೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆನಂದ್ ಜಿ ಭಟ್ ಹೇಳಿದರು.

ಅವರು ಪಟ್ಟಣದಾದ್ಯಂತ ಆಟೋರಿಕ್ಷಾದಲ್ಲಿ ಏಕಾಂಗಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿ ಮತದಾರರಲ್ಲಿ ಮತಯಾಚಿಸಿದರು.
ಅಬ್ಬರದ ಪ್ರಚಾರವಾಗಲಿ, ದೊಡ್ಡ ಕಟೌಟ್ ಗಳಾಗಲಿ, ಹಣದ ಆಮಿಷವಾಗಲಿ, ಜಾತಿ ಧರ್ಮದ ಅಸ್ತ್ರವಾಗಲಿ, ದೊಡ್ಡ ಪ್ರಮಾಣದ ಸಮಾವೇಶವಾಗಲಿ ಮಾಡದೆ ಜನರ ಸಂಕಷ್ಟಗಳನ್ನು ಸರಳವಾಗಿಯೆ ಪ್ರಚಾರ ಮಾಡುತ್ತ ತಿಳಿಯಬಹುದಾಗಿದೆ. ಈ ದಿಸೆಯಲ್ಲಿ ನನ್ನ ಏಕಾಂಗಿ ಪ್ರಚಾರ ಕಾರ್ಯ ನಿರ್ವಿಘ್ನವಾಗಿ ಸಾಗಿದೆ ವ್ಯವಸ್ಥೆ ಬದಲಾಗಬೇಕಿದೆ ಅದಕ್ಕಾಗಿ ಮತದಾರ ಸಿದ್ದನಾಗಬೇಕಿದೆ ಎಂದು ವಿವರಿಸಿದರು.
Prathidvani Yellapura