Breaking News

ಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿದ ಯಲ್ಲಾಪುರ ಕಾಳಮ್ಮ ನಗರ ಕೆಲವು  ನಿವಾಸಿಗಳಿಗೆ ವಿದ್ಯುತ್ ನೀಡದ ಸಮಸ್ಯೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಮುರಾರ್ಜಿ ವಸತಿ ಶಾಲೆ ಹಿಂಬಾಗದ  ನಿವಾಸಿಗಳ ಮನೆಗಳಿಗೆ ವಿದ್ಯುತ್ ಪೂರೈಕೆಗೆ .ಎಂ.ಎಲ್.ಸಿ ಶಾಂತಾರಾಮ್ ಸಿದ್ದಿ ವಿಧಾನ ಪರಿಷತ್ ನಲ್ಲಿ ಆಗ್ರಹಿಸಿದ್ದು, ವಿದ್ಯುತ್ ನೀಡುವುದಾಗಿ ಇಂಧನ ಸಚಿವರು ಭರವಸೆ ನೀಡಿದ್ದಾರೆ.


ಬಹು ವರ್ಷಗಳಿಂದ ಈ ಪ್ರದೇಶದಲ್ಲಿ ಜನವಸತಿ ಇದ್ದು ಹೆಚ್ಚಿನವರು ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದವರೇ ವಾಸಿಸುತ್ತಿದ್ದಾರೆ ಅವರ ಬಳಿ ಆದಾರ್ ಕಾಡ್೯,ಒಟರ್ ಐ.ಡಿ, ರೇಶನ್ ಕಾಡ್೯ ಹಾಗು ಪಟ್ಟಣ ಪಂಚಾಯತ ನೀರಿನ ವ್ಯವಸ್ಥೆಯು ಇದೆ ಇಷ್ಟೆಲ್ಲಾ ನೀಡಿರುವುದು ಸರ್ಕಾರವೆ ಆದಮೇಲೆ ವಿದ್ಯುತ್ ನೀಡಲು ಪುರಾವೆ ಏಕೆ ಬೇಕು ಎಂದು ಶಾಂತಾರಾಮ್ ಸಿದ್ದಿಯವರು ವಿಧಾನಪರಿಷತ್ ಕಲಾಪದಲ್ಲಿ ಇಂಧನ ಸಚಿವರಿಗೆ ಪ್ರಶ್ಞಿಸಿದರು.

ಇದಕ್ಕೆ ಉತ್ತರಿಸಿದ ಇಂಧನ ಸಚಿವ ಕೆ.ಜೆ.ಜಾಜ್೯ ಈ ಸ್ಥಳದ ವಾರಸುದಾರರು ಎಂದು ಹೇಳಿಕೊಳ್ಳುವವರು ವಿದ್ಯುತ್ ನೀಡಬೇಡಿ ಎಂದು ಅರ್ಜಿ ನೀಡಿರುವುದರಿಂದ ವಿದ್ಯುತ್ ನೀಡಿಲ್ಲ ಮತ್ತು ಈ ಪ್ರಕರಣ ನನ್ನ ಗಮನಕ್ಕು ಬಂದಿರಲಿಲ್ಲ ಎಂದರು, ಅದಕ್ಕೆ ಪ್ರತಿಕ್ರಿಯಿಸಿದ ಶಾಂತಾರಾಮ್ ಸಿದ್ದಿ ಯವರು ವಾರಸುದಾರಿಕೆ ವಿಷಯ ನ್ಯಾಯಾಲಯದಲ್ಲಿದ್ದು ಅದಕ್ಕು ವಾಸಿಸುತ್ತಿರುವ ಕುಟುಂಬಗಳಿಗೆ ವಿದ್ಯುತ್ ನೀಡುವುದಕ್ಕು ಸಂಬಂಧವಿಲ್ಲ ಅಲ್ಲದೆ ಇಂತಹ ಪರಿಸ್ಥಿತಿ ಇಂದಿಗು ಇರುವುದು ನಾಚಿಕೆಗೇಡಿನ ಸಂಗತಿ ಎಂದರು.ಇದಕ್ಕೆ ಉತ್ತರಿಸಿದ ಸಚಿವರು ಇದೀಗ ಮಾಹಿತಿ ದೊರೆತಿದ್ದು ಹೆಸ್ಕಾಂ ಎಂ‌ಡಿ.ಅವರಿಗೆ ಸೂಚನೆ ನೀಡಿ ವಿದ್ಯುತ್ ನೀಡಲು ಸೂಚಿಸುತ್ತೇನೆ ಎಂದಿದ್ದಾರೆ.
ಈ ಮೂಲಕ ದಶಕಗಳ ಕಗ್ಗತ್ತಲು ಕಳೆದು ಬೆಳಕು ಮೂಡಿದಂತಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ತೊಗಲು ಹರಳಯ್ಯ ಟ್ರಸ್ಟ (ರಿ) ವತಿಯಿಂದ ಕುಲಕಸುಬು ಜಾಗದ ಸ್ವಚ್ಚತೆ – ಕಚೇರಿ ಉದ್ಘಾಟನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ: ಕುಟುಂಬದ ಹಿರಿಯರು ತಲ ತಲಾಂತರದಿಂದ ಕುಲಕಸಬಾದ ತೊಗಲು …

Leave a Reply

Your email address will not be published. Required fields are marked *