
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಜೀವನದ ಆನಂದ ಸತ್ಯದರ್ಶನ ಎಲ್ಲವು ಒಳ್ಳೆಯದು ಎನ್ನುವ ಭಗವಂತನನ್ನು ಅರ್ಥೈಸಿಕೊಳ್ಳುವಂತಹದ್ದಾಗಿದೆ. ಇಂತಹ ಸತ್ಕಾರ್ಯಗಳಿಂದಲೆ ಧರ್ಮ,ಅರ್ಥ,ಕಾಮ,ಮೋಕ್ಷ ಎಲ್ಲವು ಬದುಕಿನ ಸಾರ್ಥಕತೆಯ ಪಯಣದಲ್ಲಿನ ಸಾತ್ವಿಕ ವಿಚಾರಗಳಾಗಿದೆ. ಇಂತಹ ವಿಚಾರಗಳನ್ನು ಮಕ್ಕಳಿಗೆ ಹೆಳಿಕೊಟ್ಟಾಗ ಅವರಿಗೆ ಆತ್ಮಶಕ್ತಿ ವೃದ್ದಿಸುತ್ತದೆ ಅಲ್ಲದೆ ನೆಲದ ನಡುವಿನ ಭಾಂಧವ್ಯ ಗಟ್ಟಿಗೊಳ್ಳುತ್ತದೆ. ಭಾರತೀಯ ಪರಂಪರೆ, ಆಚಾರ,ವಿಚಾರ ಗಳ ಬಗೆಗಿನ ಕುರಿತು ಭವಿಷ್ಯದ ಪೀಳಿಗೆಗೆ ಅರಿವಿರಬೇಕು ಅದಕ್ಕೆ ಇಂತಹ ಶಿಭಿರಗಳು ಸಹಕಾರಿಯಾಗಿದೆ ಎಂದು ಆರೋಗ್ಯ ತಜ್ಞರು ಲೇಖಕಿ ಡಾ,ವೀಣಾ ಸುಳ್ಯ ಹೇಳಿದರು.

ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವರಣದಲ್ಲಿ ವಿಶ್ವದರ್ಶನ ಸೇವಾ ಸಂಸ್ಥೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಗೋವರ್ಧನ ಗೋಶಾಲೆ ಕರೆಒಳ್ಳಿ ಸಂಯುಕ್ತಾಶ್ರಯದಲ್ಲಿ ನಡೆಸಿದ ಎಂಟು ದಿನಗಳ ಕಾಲ ನಡೆದ ಭಾರತೀಯ ಜೀವನ ಶಿಕ್ಷಣ ಶಿಭಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಉದ್ಯಮಿ ದೀಪಕ್ ಭಟ್ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು, ಶಿಭಿರದ ಸಂಚಾಲಕ ಪತ್ರಕರ್ತ ಟಿ ಶಂಕರಭಟ್ ಉಪಸ್ಥಿತರಿದ್ದು ಶುಭಕೋರಿದರು.ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಪ್ರಾಸ್ತಾವಿಕ ನುಡಿದು ಶಿಭಿರಕ್ಕೆ ಸಹಕರಿಸಿದ ಸರ್ವರನ್ನು ಸ್ಮರಿಸಿದರು.
ವೇದಾ ಭಟ್ ಕಿರುಕುಂಬತ್ತಿ ಪ್ರಾರ್ಥಸಿದರು. ಶಿಭಿರದ ಪ್ರಮುಖರು ನಾರಾಯಣ ಭಟ್ ಮೊಟ್ಟೆ ಪಾಲ್ ಸ್ವಾಗತಿಸಿದರು.ಆಶಾ ಭಗನಗದ್ದೆ ಸಂಕಲ್ಪ ವಚನ ಭೋಧಿಸಿದರು. ರಾಮಕೃಷ್ಣ ಕವಡಿಕೆರೆ ನಿರೂಪಿಸಿದರು. ಶಿಭಿದರ ವಿದ್ಯಾರ್ಥಿಗಳು ಮತ್ತು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಮುಖರಾದ ಗೋಪಾಲಕೃಷ್ಣ ಎನ್ ಗಾಂವ್ಕರ್ ವಂದಿಸಿದರು.




Prathidvani Yellapura