

ಪ್ರತಿಧ್ವನಿ ಯಲ್ಲಾಪುರ : ಹಿಂದು ಧರ್ಮದ ನೂತನ ವರ್ಷಾರಂಭ ಯುಗಾದಿ ಯಿಂದ ಪ್ರಾರಂಭ ಅದಕ್ಕೆ ಯಲ್ಲಾಪುರದಲ್ಲಿ ವಿಜ್ರಂಭಣೆಯ ಆಚರಣೆ ನಡೆಯುತ್ತಾ ಬಂದಿದೆ. ಅದರಂತೆ ಮಾ,19,ಗುರುವಾರ ಯುಗಾದಿ ಉತ್ಸವ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು.












ಊರಿನ ತುಂಬಾ ಕೇಸರಿ ಕಲರವ,ಮಾವಿನ ತೋರಣ ವಿದ್ಯುತ್ ದೀಪಾಲಂಕಾರದ ವೈಭವ, ಚಂಡೆಯ ನಿನಾದ,ಡಿ.ಜೆ ಸದ್ದು,ಝಾಂಜ್,ಪತಾಕೆಗಳ ಆರ್ಭಟ ವಿವಿಧ ಚದ್ಮ ವೇಷಗಳ ಆಕರ್ಷಣೆ, ಭಜನೆಯಮೇಳ,ಬೃಹತ್ ಗೊಂಬೆಗಳ ಕುಣಿತ ಮುಗಿಲು ಮುಟ್ಟುವಷ್ಟರ ಮಟ್ಟಿಗೆ ಹಿಂದು ಧರ್ಮದ ಜಯಘೋಷ, ಭಾರತಾಂಬೆಗೆ ಜೈಕಾರ, ಮಹಿಳೆಯರು, ಮಕ್ಕಳು, ಯುವಕರು ಎಲ್ಲರಲ್ಲು ಹಿಂದುತ್ವದ ಕಿಚ್ಚು ಯಾತ್ರೆಗೊಂದು ರಂಗುತಂದಿತ್ತು.

ಸಂಜೆ ಕೋಟೆ ಕರಿಯಮ್ಮ ದೇವಾಲಯದಿಂದ ಆಭಗೊಂಡ ಶೋಭಾಯಾತ್ರೆ ಊರಿನ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಕೊನೆಗೆ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಸಮಾಪ್ತಿ ಕಂಡಿತು. ಮಜ್ಜಿಗೆ,ಪಾನಕ,ಪ್ರಸಾದ ವಿತರಿಸಲಾಯಿತು, ಉತ್ಸವದ ಪ್ರಮುಖ ಘಟ್ಟ ಪಂಚಾಂಗ ಪಠಣ ಕಾರ್ಯಕ್ರಮ ಶ್ರದ್ದಾ ಭಕ್ತಿಯಿಂದ ಜರುಗಿತು.

ಶೋಭಾಯಾತ್ರೆ ಸಾಗುವ ದಾರಿ ಮದ್ಯೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್ ಮೆರವಣಿಗೆಯಲ್ಲಿ ಪಾಲ್ಗೊಂಡರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಸೇರಿದಂತೆ ಇನ್ನಿತರ ಪ್ರಮುಖರು ಜೊತೆಯಲಿದ್ದರು. ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಛದ್ಮ ವೇಷಧಾರಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

ನಂತರ ಮೆರವಣಿಗೆ ಮದ್ಯದಲ್ಲಿ ಹೆಬ್ಬಾರ್ ಜನಸಾಮಾನ್ಯರೊಡನೆ ತಾಳಕ್ಕೆ ಹೆಜ್ಜೆ ಹಾಕಿ ಮೆರವಣಿಗೆಯಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಪುತ್ರ ವಿವೇಕ್ ಹೆಬ್ಬಾರ್ ಸಹ ತಂದೆಯೊಡನೆ ಹೆಜ್ಜೆ ಹಾಕಿದರು.

ತಾಲೂಕಿನ ಹಿರಿಯರು ವೇದ ಪಂಡಿತರು ಗೋಪಾಲಕೃಷ್ಣ ಭಟ್ ಹಂಡ್ರಮನೆ ಪಂಚಾಂಗ ಪಠಿಸಿದರು. ವರ್ಷದ ಆರಂಭದಲ್ಲಿ ಪಂಚಾಂಗ ಶ್ರವಣ ಅತ್ಯಂತ ಶ್ರೇಷ್ಠ ವಾದುದು ಎಂಬುದನ್ನು ಸಭಿಕರಿಗೆ ವಿವರಿಸಿದರು.


















Prathidvani Yellapura