

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವಿವಿಧ ಭಾಗಗಳಲ್ಲಿ ಚಂಪಾಶೆಟ್ಟಿ ವಿಶೇಷ ಪೂಜೆಗಳು ಜರುಗಿದವು. ಭಕ್ತಾದಿಗಳು ಮುಂಜಾನೆಯಿಂದಲೇ ನಾಗದೇವರ ಸ್ಥಳಗಳಲ್ಲಿ ಭಕ್ತಿಭಾವಗಳಿಂದ ವಿವಿಧ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರು.

ಪಟ್ಟಣದ ಉದ್ಯಮ ನಗರದಲ್ಲಿರುವ ಏಕೈಕ ನಾಗ ದೇವಾಲಯದಲ್ಲಿ ಭಕ್ತಸಾಗರವೇ ತುಂಬಿತ್ತು. ಹಾಲಿನ ಅಭಿಷೇಕ , ಪುಷ್ಪಾಲಂಕಾರ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ಭಕ್ತಾದಿಗಳು ಕಣ್ತುಂಬಿಕೊಂಡರು. ಮದ್ಯಾಹ್ನ ಅನ್ನಸಂತರ್ಪಣೆ ನೆರವೇರಿದ್ದು ನೂರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.


ಪಟ್ಟಣದ ತಾಲೂಕು ಪಂಚಾಯಿತಿ ವಸತಿ ಗೃಹಗಳ ಆವರಣದಲ್ಲಿರುವ ನಾಗರ ಕಟ್ಟೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಶೇಷ ಅಲಂಕಾರದೊಂದಿಗೆ ಪೂಜೆಗಳು ನಡೆದವು. ಭಕ್ತರು ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

ಪಟ್ಟಣದ ದೇವಿ ಮೈದಾನದ ನಾಗರ ಕಟ್ಟೆ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು.

ಕೋಟೆ ಕರಿಯಮ್ಮ ಆವರಣದಲ್ಲಿರುವ ನಾಗ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾಷಷ್ಠಿ ಪ್ರಯುಕ್ತ ಭಕ್ತಿಭಾವದ ಪೂಜೆಗಳು ಜರುಗಿತು.

ಸಂಜೆ ಆಶ್ಲೇಷ ಬಲಿ ಪೂಜೆ ನೆರವೇರಿತು. ನೂರಾರು ಭಕ್ತಾದಿಗಳು ನಾಗದೇವರಿಗೆ ಹಾಲೆರೆದು ಪೂಜೆ ಸಲ್ಲಿಸಿ ಕೃತಾರ್ಥರಾದರು.
Prathidvani Yellapura