Breaking News

ಭರತನಳ್ಳಿ ” ಹಝರತ್ ಸೈಯ್ಯದ್ ಮರ್ದಾನ್ ಷಾ ಖಾದ್ರಿ ವಲಿಅಲ್ಲಾ ದರ್ಗಾ ” ದಲ್ಲಿ ನಡೆದ ಭಾವೈಕ್ಯತಾ ಉರುಸ್…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಭರತನಹಳ್ಳಿಯ ಹಝರತ್ ಸೈಯ್ಯದ್ ಮರ್ದಾನ್ ಷಾ ಖಾದ್ರಿ ವಲಿಅಲ್ಲಾ ದರ್ಗಾದಲ್ಲಿ ಪ್ರತಿವರ್ಷದಂತೆ 2 ದಿನಗಳ ಭಾವೈಕ್ಯತಾ ಉರುಸ್ (ಜಾತ್ರೆ) ನಡೆಯಿತು.
22 ನೆಯ ವರ್ಷದ ಈ ಕಾರ್ಯಕ್ರಮ ಮೇ.16 ರಂದು ರಾತ್ರಿ ಗೌಸಿಯಾ ಧ್ವಜಾರೋಹಣದೊಂದಿಗೆ ಆರಂಭವಾಯಿತು. ಮೇ.17 ರಂದು ರಾತ್ರಿ ಬೆಂಗಳೂರಿನ ಉಲ್ಮಾ ಎ ಕರಾಮ್ ಮೌಲಾನಾ ಶಾರಿಬ್ ಝಿಯಾ ಮಿಸ್ವಾಹಿ ಮತ್ತು ಮಂಗಳೂರಿನ ಮೌಲಾನಾ ಅಬ್ಧುಲ್ ರಷೀದ್ ಸಖಾಫಿ ಜೈನಿ ಇವರಿಂದ ಉಪನ್ಯಾಸ; ಬೆಂಗಳೂರಿನ ಮುಯೀನ್ ಖಾದ್ರಿ ಮತ್ತು ನಬೀಲಾ ಬರ್ಕಾತಿ ಇವರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಂಜೆ ಪ್ರತಿಭಾವಂತ ಮಕ್ಕಳಿಂದ ಮಧುರ ನಾತಖ್ವಾನಿ ಕಾರ್ಯಕ್ರಮಗಳು ಜರುಗಿದವು. ಮೇ.17 ರಂದು ರಾತ್ರಿ ನಡೆದ ಅನ್ನಸಂತರ್ಪಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಪ್ರದೇಶದ ಮುಸ್ಲಿಂ ಬಾಂಧವರೊಂದಿಗೆ, ಸುತ್ತಮುತ್ತಲಿನ ಅಪಾರ ಸಂಖ್ಯೆಯ ಹಿಂದೂ ಜನಾಂಗದ ಜನರೂ ಪಾಲ್ಗೊಂಡು ಭಾವೈಕ್ಯತೆಗೆ ಸಾಕ್ಷಿಯಾದರು.
ದರ್ಗಾ ಸಮಿತಿಯ ಅಧ್ಯಕ್ಷ ಅಖಿಲ ಅಹ್ಮದ್ ಎಂ. ಭರತನಹಳ್ಳಿ, ಕಾರ್ಯದರ್ಶಿ ಅಬ್ದುಲ್ ಅಜೀಂ ಬಿ. ಸೈಯ್ಯದ್, ನಿರ್ದೇಶಕರಾದ ಹೇರಂಭ ಹೆಗಡೆ ಭರತನಹಳ್ಳಿ, ನಾಗೇಶ ದೇವಡಿಗ, ಕೃಷ್ಣಮೂರ್ತಿ ನಾಯ್ಕ, ಅಬ್ದುಲ್ ಗಫೂರ್ ನೂರಿ ಮತ್ತಿತರ ಪ್ರಮುಖರು 2 ದಿನಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನೆರವೇರಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *