Breaking News

ಸಚಿವ ಹೆಬ್ಬಾರ್ ಐತಿಹಾಸಿಕ ಜನಸಾಗರದ ನಡುವೆ ಹೈ ವೋಲ್ಟೇಜ್ ನಾಮಪತ್ರ ಸಲ್ಲಿಕೆ

ಕ್ಷೇತ್ರದ ಜನತೆಯ ಆಶಿರ್ವಾದ ಬೇಡಿದ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ, ಯಲ್ಲಾಪುರ- ಇತಿಹಾಸದಲ್ಲಿ ಇಂದೆಂದು ಕಂಡರಿಯದ ಜನಸಾಗರ ಉತ್ತರ ಕನ್ನಡ ಜಿಲ್ಲೆಯಲ್ಲಿಯೆ ಈ ಪ್ರಮಾಣದ ಜನಸಾಗರದ ನಡುವೆ ಅಭ್ಯರ್ಥಿ ಒಬ್ಬರು ನಾಮಪತ್ರ ಸಲ್ಲಿಕೆ ಮಾಡಿದ ದಾಖಲೆಗಳಿಲ್ಲ. ಮಂಗಳವಾರ ಯಲ್ಲಾಪುರ ತುಂಬಾ ಜನಸಾಗರ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅರಬೈಲ್ ಶಿವರಾಮ ಹೆಬ್ಬಾರ್ 5 ನೇ ಬಾರಿಗೆ ನಾಮಪತ್ರ ಸಲ್ಲಿಸಿದರು.

ಇತಿಹಾಸ ನಿರ್ಮಿಸಿದ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಂಡ ಜನಸಾಗರ

ನಾಮಪತ್ರ ಸಲ್ಲಿಕೆಗೂ ಮೊದಲು ಯಲ್ಲಾಪುರದ ಶಕ್ತಿಮಾತೆ ಗ್ರಾಮದೇವಿ ದೇವಸ್ಥಾನದಲ್ಲಿ ಕುಟುಂಬ ಸದಸ್ಯರು, ಹಿತೈಷಿಗಳು, ಹಿರಿಯರು ಹಾಗೂ ಕಾರ್ಯಕರ್ತರೊಂದಿಗೆ ನಾಮಪತ್ರಕ್ಕೆ ಪೂಜೆ ಸಲ್ಲಿಸಿದರು.

ಚುನಾವಣೆಯಲ್ಲಿ ಗೆಲುವಿಗಾಗಿ ತಾಯಿ ಗ್ರಾಮದೇವಿಯರಿಗೆ ಹೆಬ್ಬಾರ್ ಕುಟುಂಬದ ಉಡಿಸೇವೆ
ಯಲ್ಲಾಪುರ ನೆಲದ ಶಕ್ತಿ ಮಾತೆ ಗ್ರಾಮದೇವಿ ಯರಲ್ಲಿ ಗೆಲುವಿಗಾಗಿ ಹೆಬ್ಬಾರ್ ಕುಟುಂಬದ ಪ್ರಾರ್ಥನೆ

ನಂತರ ದೇವಸ್ಥಾನದ ಆವರಣದಿಂದ ಡೊಳ್ಳು, ಝಾಂಜ್, ಸಿದ್ದಿ ಸಮುದಾಯದ ಸಾಂಪ್ರದಾಯಿಕ ನೃತ್ಯ ಮೆರವಣಿಗೆಯ ರಂಗು ಹೆಚ್ಚಿಸಿತ್ತು.

ಮೆರವಣಿಗೆಯಲ್ಲಿ ಝಾಂಜ್ ಸದ್ದು
ಸಿದ್ದಿ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ನೃತ್ಯದ ಮೆರುಗು

ಜನರೆ ನನ್ನ ಪಂಚಪ್ರಾಣ ಎನ್ನುವ ಹೆಬ್ಬಾರ್ ಮುಂಡಗೋಡು, ಬನವಾಸಿ ಹಾಗೂ ಯಲ್ಲಾಪುರದ ಜನಸ್ತೋಮದ ನಡುವೆ ವಿಶೇಷವಾಗಿ ಸಿದ್ಧಪಡಿಸಿದ ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ಸಾಗಿ ಡಿ.ಟಿ ರಸ್ತೆ ಮಾರ್ಗವಾಗಿ ಗಾಂಧಿ ಚೌಕ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಬೆಲ್ ರಸ್ತೆಯಲ್ಲಿ ಸಾಗಿ ನೂತನ ಆಡಳಿತ ಸೌಧದಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಜನಸಾಗರದ ನಡುವೆ ಹೆಬ್ಬಾರ್ ಮೆರವಣಿಗೆ


ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ ಶಿವರಾಮ ಹೆಬ್ಬಾರ್ ಜೊತೆಯಲ್ಲಿ ಪತ್ನಿ ವನಜಾಕ್ಷಿ ಹೆಬ್ಬಾರ್, ಪುತ್ರ ವಿವೇಕ್ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತಾರಾಮ್‌ ಸಿದ್ದಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮುಂಡಗೋಡು, ಬನವಾಸಿ, ಯಲ್ಲಾಪುರ ಭಾಗದ ಮುಖಂಡರು, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ ಸದಸ್ಯರು, ಪದಾಧಿಕಾರಿಗಳು, ಪ.ಪಂ ಸದಸ್ಯರು, ವಿವಿಧ ಮೋರ್ಚಾಗಳ ಪ್ರಮುಖರು ಜೊತೆಯಲ್ಲಿದ್ದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ 5 ನೆ ಬಾರಿಗೆ ಹೆಬ್ಬಾರ್ ನಾಮಪತ್ರ ಸಲ್ಲಿಕೆ

ಮೂರು ಪ್ರತಿಗಳಿಗೂ ಪ್ರತ್ಯೇಕವಾಗಿ ಜಿ.ಎನ್ ಗಾಂವ್ಕರ್, ದ್ಯಾಮಣ್ಣ ದೊಡ್ಡಮನಿ, ಶಿವಕುಮಾರ ಗೌಡ ಸೂಚಕರಾಗಿ ಸಹಿ ಹಾಕಿದರು.ಚುನಾವಣಾಧಿಕಾರಿಯಾಗಿ ಅಜ್ಜಪ್ಪ ಸೊಗಲದ ನಾಮಪತ್ರ ಸ್ವೀಕರಿಸಿದರು. ತಹಶಿಲ್ದಾರ ಗುರುರಾಜ್ ಸ್ಥಳದಲ್ಲಿ ಉಪಸ್ಥಿತರಿದ್ದರು.

ಪ್ರೀತಿ, ಆಪ್ಯಾಯತೆ,ಅಭಿಮಾನ ತೋರಿದ ಕ್ಷೇತ್ರದ ಜನರ ಆಶಿರ್ವಾದ ನೆನೆದು ಕೃತಜ್ಞತೆ ಸಲ್ಲಿಸಿದ ಹೆಬ್ಬಾರ್


ಚುನಾವಣೆಯನ್ನು ನೀತಿಯ ಆಧಾರದಲ್ಲಿ ಎದುರಿಸುತ್ತಿದ್ದೇನೆ. ಅಭಿವೃದ್ಧಿ ನಮ್ಮ ಮೂಲ ಮಂತ್ರ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಳೆದ ಬಾರಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಇದ್ದ ಅಧಿಕಾರವನ್ನೂ ತೊರೆದು ರಾಜೀನಾಮೆ ನೀಡಿ ಮತ್ತೊಮ್ಮೆ ಜನರ ಆಶೀರ್ವಾದಕ್ಕಾಗಿ ಉಪಚುನಾವಣೆ ಎದುರಿಸಿ 31 ಸಾವಿರಕ್ಕು ಅಧಿಕ ಮತಗಳ ಅಂತರದಿಂದ ಜಯಗಳಿಸಿ ಸಚಿವನಾಗಿ ಜನರ ಸೇವೆ ಸಲ್ಲಿಸಿದ್ದೇನೆ. ಅವರ ಅಶೀರ್ವಾದವೇ ನನಗೆ ಶ್ರೀರಕ್ಷೆಯಾಗಿದ್ದು ಈ ಬಾರಿ 55 ಸಾವಿರಕ್ಕು ಅಧಿಕ ಮತಗಳ ಅಂತರದಿಂದ ಜಯಗಳಿಸಲಿದ್ದೇನೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರಬೈಲ್ ಶಿವರಾಮ ಹೆಬ್ಬಾರ್ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಧರ್ಮಬೇದ ಮರೆತು ಜನರ ಸೇವೆಗೆ ಪಣತೊಟ್ಟ ಹೆಬ್ಬಾರ್ ಬೆಂಬಲಕ್ಕೆ ಧರ್ಮ ಭೇದ ಮರೆತು ಮೆರವಣಿಗೆಯುದ್ದಕ್ಕು ಹೆಜ್ಜೆ ಹಾಕಿದ ಅಮರ್ ,ಅಕ್ಬರ್ ,ಆಂಟನಿ ಗಳಾದ ಮಾರುತಿ, ಮೆಹಬೂಬ್, ಪೆಟ್ರಿಕ್
ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ, ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ತಾಲೂಕು ಅಧ್ಯಕ್ಷರಾದ ಗೋಪಾಲಕೃಷ್ಣ ಗಾಂವ್ಕರ್, ನಾಗಭೂಷಣ ಹಾವಣಗಿ, ಪ್ರಮುಖರಾದ ವಿಜಯ್ ಮಿರಾಶಿ, ಯಲ್ಲಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದದಾಸ್ ಉಪಾಧ್ಯಕ್ಷೆ ಶಾಮಿಲಿ ಪಾಟಣ್ಕರ್ ಇತರ ಪ್ರಮುಖರು ಮೆರವಣಿಗೆಯಲ್ಲಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *