



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಪಟ್ಟಣವು ರಾತ್ರಿ ವೇಳೆಯಲ್ಲಿ ನಿತ್ಯ ಜಗಮಗಿಸಲು ಪ್ರಾರಂಭಿಸಿದೆ ಅದಕ್ಕೆ ಮೂಲ ಕಾರಣ ಪಟ್ಟಣದಾದ್ಯಂತ ಇದ್ದ ಹಳೆಯ ಟ್ಯೂಬ್ ಲೈಟ್, ಮರ್ಕ್ಯುರಿ ಇನ್ನಿತರ ಬಲ್ಬು ಗಳನ್ನು ಬದಲಿಸಿ ನವೀನ ತಂತ್ರಜ್ಞಾನದ ಹೆಚ್ಚಿನ ಬೆಳಕು ನೀಡುವ ಬಲ್ಬುಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ ಹಾಗಾಗಿ ಯಲ್ಲಾಪುರ ಬೆಳಕಿನಾಗರವಾಗಿದೆ.


ಎಲ್ಇಡಿ ಬಲ್ಬುಗಳು ಹೆಚ್ಚಿನ ಬೆಳಕು ನೀಡುತ್ತಿದೆ. ಒಟ್ಟು 19 ವಾಡ್೯ ಗಳಲ್ಲಿ ಮೊದಲ ಹಂತದಲ್ಲಿ 2571 ಹಳೆಯ ಬಲ್ಬುಗಳನ್ನು ಬದಲಿಸಲಾಗುತ್ತಿದೆ. ಇದಕ್ಕಾಗಿ ಮುಂಬಯಿ ಮೂಲದ ಕಂಪನಿ ಟೆಂಡರ್ ಪಡೆದಿದ್ದು ನಿರ್ವಹಣೆ ವೆಚ್ಚ ತಗ್ಗಿಸಲು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಅಳವಡಿಸುತ್ತಿರುವ ಹೊಸ ತಂತ್ರಜ್ಞಾನದ ಎಲ್ಇಡಿ ಬಲ್ಬುಗಳು ಒಂದು ವೇಳೆ ರಾತ್ರಿ ವೇಳೆಯಲ್ಲಿ ಕಾರ್ಯನಿರ್ವಹಿಸದಿದ್ದಲ್ಲಿ ಟೆಂಡರ್ ದಾರರು ತಮ್ಮ ಕಚೇರಿಯಲ್ಲಿ ಕುಳಿತು ಸಮಸ್ಯೆ ತಿಳಿಯಬಹುದಾಗಿದೆ ಇದು ಎಂಟು ವರ್ಷದ ವರೆಗೆ ನಿರ್ವಹಣೆ ಇರುತ್ತದೆ.

ಹೈಟ್ ಲ್ಯಾಡರ್ ಹೊಂದಿರುವ ನಾಲ್ಕು ಪಿಕ್ ಅಪ್ ವಾಹನಗಳು ಪಟ್ಟಣದಾದ್ಯಂತ ಬಲ್ಬು ಬದಲಿಸುವ ಕಾರ್ಯ ಭರದಿಂದ ಸಾಗಿದೆ.

ಎಲ್ಇಡಿ ವ್ಯವಸ್ಥೆ ಪಟ್ಟಣದಲ್ಲಿ ಅಳವಡಿಸುತ್ತಿರುವುದು ಬೆಳಕಿನ ಸಮರ್ಪಕತೆ, ಸರಳ ನಿರ್ವಹಣೆ, ಆರ್ಥಿಕವಾಗಿ ಪಟ್ಟಣ ಪಂಚಾಯತ್ ಗೆ ಉಳಿತಾಯ, ಮತ್ತು ಹೆಚ್ಚಿನ ವೋಲ್ಟೇಜ್ ಇರುವ ವ್ಯವಸ್ಥೆ ಇದಾಗಿದೆ ಇದೊಂದು ಉತ್ತಮ ಯೋಜನೆಯಾಗಿದೆ. ಹೇಮ ಚಂದ್ರ ನಾಯ್ಕ ಪ.ಪಂ ಅಭಿಯಂತರ

