
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹೋಲಿ ರೋಜರಿ ಚಚ್೯ ವತಿಯಿಂದ ಈ ವರ್ಷದಲ್ಲಿ ನಡೆಯಲಿರುವ ಕ್ರಿಸ್ ಮಸ್ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು ಏಸುವಿನ ಆಗಮನಕ್ಕೆ ಕಾತರದಿಂದ ಕಾಯುತ್ತಿದ್ದು ಈ ಸಂತಸವನ್ನು ಪಟ್ಟಣದಾದ್ಯಂತ ಪಸರಿಸಿ ಕ್ರಿಸ್ ಮಸ್ ಶುಭಾಗಮನವನ್ನು ಜನತೆಗೆ ತಲುಪಿಸುವ ಸ್ಥಬ್ದ ಚಿತ್ರ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾಂತಕ್ಲಾಸ್ಸ್ ಮಕ್ಕಳಿಗೆ ಸಿಹಿ ನೀಡುತ್ತ ಉಡುಗೊರೆ ನೀಡುತ್ತ ಕ್ರಿಸ್ ಮಸ್ ಸಂಭ್ರಮದ ಮೆರವಣಿಗೆಗೆ ಮತ್ತಷ್ಟು ಮೆರುಗು ತಂದರು.

ಸಮುದಾಯದ ಮಕ್ಕಳು ಮಹಿಳೆಯರು ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.
Prathidvani Yellapura