
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಸೀಮೆಯ ಶಕ್ತಿ ಪೀಠಗಳಲ್ಲಿ ಒಂದಾಗಿರುವ ” ಯಲ್ಲಾಪುರ ಗ್ರಾಮದೇವಿ ” ಸಾನಿದ್ಯದಲ್ಲಿ ಅನ್ನ ಪ್ರಸಾದ ಸೇವೆ ಸಾಂಗವಾಗಿ ನೆರವೇರಿತು.


ಪ್ರತಿ ವರ್ಷದಂತೆ ಈ ವರ್ಷವು ಯಲ್ಲಾಪುರ ಪಟ್ಟಣದ ಭಗತ್ ಸಿಂಗ್ ಆಟೋ ಚಾಲಕ ಮಾಲಕರ ಸಂಘ, ಗ್ರಾಮದೇವಿ ಟ್ಯಾಕ್ಸಿ ಚಾಲಕ ಮಾಲಕರ ಸಂಘ, ಬಸವೇಶ್ವರ ಗೂಡ್ಸ್ ರಿಕ್ಷಾ ಚಾಲಕ ಮಾಲಕರ ಸಂಘ, ಕನ್ನಡ ಪರ ಸಂಘಟನೆಗಳು ಹಾಗು ಧಾನಿಗಳ ಸಹಕಾರದಿಂದ ಸಹಸ್ರಾರು ಸಂಖ್ಯೆ ಭಕ್ತರಿಗೆ ಮೂರು ದಿನಗಳ ಕಾಲ ಅನ್ನಪ್ರಸಾದ ಸೇವೆ ನೀಡಲಾಗುತ್ತಿದೆ.

ಮಂಗಳವಾರದ ಅನ್ನ ಪ್ರಸಾದ ಸೇವೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಭಕ್ತರ ದಂಡೇ ಹರಿದು ಬಂದಿತ್ತು. ಅನ್ನ ಪ್ರಸಾದ ಸ್ವೀಕರಿಸಿದ ಭಕ್ತ ಸಮೂಹ ಸಂತುಷ್ಟರಾಗಿ ಸಂಘಟಕರನ್ನು ಮನಃ ತುಂಬಿ ಶ್ಲಾಘಿಸಿದರು.



ಅನ್ನ ಪ್ರಸಾದ ಸೇವೆ ಸಂಘಟನೆಯ ಪ್ರಮುಖರಾದ ಸಂತೋಷ ನಾಯ್ಕ್, ಸೋಮೇಶ್ವರ ನಾಯ್ಕ್, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ರೇವಣಕರ್ ಹಾಗು ಸ್ನೇಹಿತರ ಬಳಗ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅನ್ನ ಪ್ರಸಾದ ಸೇವೆಯಲ್ಲಿ ಪಾಲ್ಗೊಂಡಿದ್ದರು.
Prathidvani Yellapura