Breaking News

ಅರಣ್ಯದೊಳಗೆ ಜೂಜಾಟ; ಐದು ಮಂದಿ ವಶಕ್ಕೆ; ಆರು ಮಂದಿ ಜಂಪ್..!


ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ತೋಟದ ಕಲ್ಲಳ್ಳಿ ಗ್ರಾಮದ ಅರಣ್ಯದೊಳಗೆ ರಾತ್ರಿ ವೇಳೆಯಲ್ಲಿ ಮೇಣದ ಬತ್ತಿ ಬೆಳಕಿನಲ್ಲಿ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ ಗುಂಪೊAದರ ಮೇಲೆ  ಯಲ್ಲಾಪುರ ಪೊಲೀಸರು ಧಾಳಿ ನಡೆಸಿ 13,150 ನಗದು ಹಾಗೂ ಆಟಕ್ಕೆ ಬಳಸಿದ ಸಲಕರಣೆಗಳನ್ನು ವಶಪಡಿಸಿಕೊಂಡು ಐವರನ್ನು ಹಿಡಿದಿದ್ದು ಆರುಮಂದಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ


  ತಾಲೂಕಿನ ಉಮ್ಮಚಗಿಯ ಕೋಟೇಮನೆ ನಿವಾಸಿ ಗಜಾನನ ನಾರಾಯಣ ನಾಯ್ಕ, ಉಮ್ಮಚಗಿಯ ಮೋಹನ ಪುಟ್ಟಯ್ಯಾ ಪೂಜಾರಿ, ಮಂಚೀಕೇರಿ ಸೋಮನಳ್ಳಿಯ ವಿಶ್ವನಾಥ ರಾಮಾ ಕುಣಬಿ, ಆನೆಗುಂಡಿ ಶಿರನಾಳಾದ ಲೋಕೇಶ ಗಣಪತಿ ನಾಯ್ಕ, ಕೆರೆ ಹೊಸಳ್ಳಿಯ ನಾಗೇಶ ಕೃಷ್ಣಾ ಕುಣಬಿ ಸಿಕ್ಕವರಾಗಿದ್ದು ಉಮ್ಮಚಗಿಯ ರಾಮ ಮರ್ಲಾ ಪೂಜಾರಿ, ಲಕ್ಷö್ಮಣ ಮರ್ಲಾ ಪೂಜಾರಿ, ತ್ಯಾಗರಾಜ ಕೃಷ್ಣಾ ಪೂಜಾರಿ, ಕುಂದರಗಿ ಮಾರಿಮಕ್ಕಿಯ ಮಹದೇವ ಗಣಪ ಹೆಗಡೆ, ಮಾವಿನಕಟ್ಟಾದ ಲಂಬೋದರ ದೇವಪ್ಪ ನಾಯ್ಕ, ಉಮ್ಮಚಗಿಯ ಭರತ ಶ್ರೀಕಾಂತ ನಾಯ್ಕ ಪರಾರಿಯಾಗಿದ್ದಾರೆ.
ಈ ಸಂಬAಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *