Breaking News

ಹೇಗಿದೆ ಮುಂಗಾರಿಗೆ ಕೃಷಿ ಇಲಾಖೆ ಸಿದ್ದತೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ದೇಶದ ಸ್ವಾಸ್ಥ್ಯ ಸದೃಡವಾಗಿರಬೇಕೆಂದರೆ ದೇಶಕ್ಕೆ ಅನ್ನ ನೀಡುವ ಅನ್ನದಾತನ ರೈತನ ಭೂಮಿಯೊಂದಿಗಿನ ಕನಸು ನನಸಾಗಬೇಕಿದೆ. ಆ ಕನಸು ನನಸಾಗಲು ಪ್ರಕೃತಿ ಎಲ್ಲಾ ರೀತಿಯ ಕೃಪೆ ತೋರಬೇಕಿದೆ. ಅದು ಮಾತ್ರವಲ್ಲದೆ ಕೃಷಿ ಇಲಾಖೆಯು ರೈತನ ನೆರವಿಗೆ ಧಾವಿಸಿ ಬೆನ್ನಿಗೆ ನಿಲ್ಲಬೇಕಿದೆ. ಆ ನಿಟ್ಟಿನಲ್ಲಿ ಇನ್ನೇನು ಮುಂಗಾರು ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿದ್ದು ಕೃಷಿ ಇಲಾಖೆಯ ಸಿದ್ದತೆ ಹೇಗಿದೆ ತಿಳಿಯಬೇಕಿದೆ.

2023-24 ನೇ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು, ಯಲ್ಲಾಪುರದ ಕೃಷಿ ಇಲಾಖೆ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಒದಗಿಸಲು ಸಜ್ಜಾಗುತ್ತಿದೆ.

ಪ್ರಸಕ್ತ ವರ್ಷ 2424 ಹೆ. ಭತ್ತ, 380 ಹೆ. ಕಬ್ಬು, 43 ಹೆ. ಹತ್ತಿ ಹಾಗೂ 83 ಹೆ. ಮುಸಕಿನ ಜೋಳ ಒಟ್ಟೂ 2930 ಹೆ. ಬಿತ್ತ ನೆ ಗುರಿ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ಕಿರವತ್ತಿ ಮದನೂರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 372 ಹೆ. ಕ್ಷೇತ್ರದಲ್ಲಿ ಕೂರಿಗೆ ಭತ್ತದ ಬಿತ್ತನೆ ಗುರಿ ಇದ್ದು, ಈಗಾಗಲೇ ರೈತರು ಸ್ಥಳಿಯ ಭತ್ತದ ತಳಿಗಳಾದ ಸಾಳಿ, ಜಯದೊಡಿಗ್ಯಾ ಹಾಗೂ ಅಧಿಕ ಇಳುವರಿ ಭತ್ತದ ತಳಿಗಳಾದ ಇಂಟಾನ್, ಅಭಿಲಾಷ ಬೀಜಗಳ ಬಿತ್ತನೆಯನ್ನು ಸುಮಾರು 278 ಹೆ. ಕ್ಷೇತ್ರದಲ್ಲಿ ಮಾಡಿರುತ್ತಾರೆ. ಸುಮಾರು 30 ಹೆ. ಕ್ಷೇತ್ರದಲ್ಲಿ ಮುಸುಕಿನ ಜೋಳದ ಬಿತ್ತನೆಯಾಗಿದ್ದು. ಈವರೆಗೂ ಮುಂಗಾರು ದುರ್ಬಲವಾಗಿದ್ದು ಹತ್ತಿ ಬೆಳೆಯುವ ರೈತರು ಭುಮಿ ಸಿದ್ಧತೆ ಮಾಡಿಕೊಂಡು ಬಿತ್ತನೆಗೆ ಕಾಯುತ್ತಿದ್ದಾರೆ.


ಕೃಷಿ ಇಲಾಖೆ ರೈತರಿಗೆ ಸಹಾಯಧನದಲ್ಲಿ ಅಧಿಕ ಇಳುವರಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡುತ್ತಿದ್ದು ಪ್ರಸಕ್ತ ವರ್ಷ ಈಗಾಗಲೆ ಸುಮಾರು 235 ಕ್ವಿಂಟಾಲ್ ಗಳಷ್ಟು ಅಭಿಲಾಷ, ಇಂಟಾನ್, ಆರ್.ಎನ್.ಅರ.-15098 , ಬಿ.ಪಿ.ಟಿ-5204 ತಳಿಗಳ ಬೀಜಗಳನ್ನು ದಾಸ್ತಾನು ಮಾಡಿ ರೈತರಿಗೆ ಇಲ್ಲಿಯವರೆಗೆ ಸುಮಾರು 92.25 ಕ್ವಿಂಟಾಲ್ ಭತ್ತ ಹಾಗೂ 1.50 ಕ್ವಿಂಟಾಲ್ ಮುಸುಕಿನ ಜೋಳದ ಬೀಜಗಳ ವಿತರಣೆ ಮಾಡಲಾಗಿರುತ್ತದೆ. ತಾಲೂಕಿನಲ್ಲಿ ಯೂರಿಯಾ 111 ಟನ್ , ಡಿ.ಎ.ಪಿ. ,181 ಟನ್ . ಪೊಟ್ಯಾಶ್ 62 ಟನ್ ಹಾಗೂ ಸಂಯುಕ್ತ ಗೊಬ್ಬರಗಳು- ಟನ್‌ಗಳ ಸಾಕಷ್ಟು ದಾಸ್ತಾನು ಇರುತ್ತದೆ.


ಈವರೆಗೆ ತಾಲೂಕಿನಲ್ಲಿ 281-1 ಮಿ.ಮಿ. ಗಳಷ್ಟು ವಾಡಿಕೆ ಮಳೆಯಾಗಬೇಕಿದ್ದು ಈವರೆಗೆ ಕೇವಲ 105.80 ಮಿ.ಮಿ. ಮಳೆಯಾಗಿರುತ್ತದೆ. 175 ಮಿ.ಮಿ. ಗಳಷ್ಟು ಮಳೆಯ ಕೊರತೆಯಾಗಿದ್ದು ಶೇ 62 ರಷ್ಟು ಮಳೆ ಕೊರತೆಯಾಗಿರುತ್ತದೆ. ರೈತರು ಬಿತ್ತನೆ ಮಾಡಿದ ಕ್ಷೇತ್ರದಲ್ಲಿ ತೇವಾಂಶ ಕೊರತೆಯಿಂದ ಸರಿಯಾಗಿ ಬೀಜಗಳು ಮೊಳಕೆಯೊಡೆಯದೆ ಹಾಗೂ ಹುಟ್ಟಿದ ಸಸಿಗಳಿಗೆ ತೇವಾಂಶವದ ಕೊರತೆಯಾಗಿ ರೈತರು ಬೆಳೆ ಒಣಗುವ ಆತಂಕ ಎದುರಿಸುತ್ತಿದ್ದಾರೆ.

ಫೇಬ್ರುವರಿ ಮಾರ್ಚ ತಿಂಗಳಲ್ಲಿ ನಾಟಿ ಮಾಡಿದ ಕಬ್ಬಿನ ಬೆಳೆ ಸುಮಾರು 9೦ ದಿನಗಳ ಬೆಳೆಯಿದ್ದು ಎಲ್ಲೆಲ್ಲಿ ಮಳೆಯಾಶ್ರಿತ ಕಬ್ಬಿನ ಬೆಳೆಯಿದೆಯೋ ಅಲ್ಲೆಲ್ಲಾ ತೀವ್ರ ಮಳೆಯ ಕೊರತೆಯಿಂದ ಕಬ್ಬಿನ ಗದ್ದೆಗಳು ಒಣಗಲಾರಂಭಿಸಿವೆ.  ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆಯ ಮಾದ್ಯಮ ಪ್ರಕಟಣೆ ಇನ್ನೂ ಎರಡು ವಾರಗಳವರೆಗೆ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದ್ದು ಮಳೆಯಾಗುವ ನಿರೀಕ್ಷೆ ಕಡಿಮೆ ಎಂದು ವರದಿ ಮಾಡಿ ಎಚ್ಚರಿಸಿದ್ದಾರೆ.

ಈಗಾಗಲೇ ಬಿತ್ತನೆ ಮಾಡಿದ ರೈತರು ನೀರಿನ ಲಭ್ಯತೆಯಿದ್ದಲ್ಲಿ ಒಂದೆರೆಡು ಸುರಕ್ಷಾ ನೀರನ್ನು ನೀಡುವುದು ಅನಿವಾರ‍್ಯ ಹಾಗೂ ಭೂಮಿ ಸಿದ್ಧತೆ ಮಾಡಿಕೊಂಡ ರೈತರು ಮಳೆ ನೋಡಿಕೊಂಡು ಬಿತ್ತನೆ ಮಾಡಬೇಕಿದೆ.
                                    ನಾಗರಾಜ ನಾಯ್ಕ್
                                       ಸಹಾಯಕ ಕೃಷಿ ನಿರ್ದೇಶಕ
                                          ಯಲ್ಲಾಪುರ, ಉ.ಕ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *