




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ವಿಶ್ವ ಹಿಂದು ಪರಿಷತ್ ವತಿಯಿಂದ ಶ್ರೀರಾಮ ಮಂದಿರ ಯಾತ್ರೆ ಆಯೋಜಿಸಿದ್ದು ರಾಮಲಲ್ಲನ ದರ್ಶನ ವ್ಯವಸ್ಥೆ ಕಲ್ಲಿಸುತ್ತಿದ್ದು ಇಂದು ಯಲ್ಲಾಪುರದ ಗ್ರಾಮದೇವಿ ಸಾನಿದ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಾಲ್ಲೂಕಿನ 14 ಮಂದಿ ರಾಮಭಕ್ತರನ್ನು ಬೀಳ್ಕೊಡಲಾಯಿತು.

ನೆಲದ ಶಕ್ತಿ ದೇವಿಯರಿಗೆ ಪೂಜೆ ಸಲ್ಲಿಸಿ ಅಯೋದ್ಯೆ ಕಡೆಗೆ ಪ್ರಯಾಣ ಬೆಳಸಿದರು.

ಯಲ್ಲಾಪುರ ಪಟ್ಟಣದ ಹೆಸರಾಂತ ಕೆತ್ತನೆ ಶಿಲ್ಪಿ ಸಂತೋಷ ಬಿಕ್ಕು ಗುಡಿಗಾರ, ವ್ಯಾಪಾರಸ್ಥ ಹನುಮಂತ ಎಸ್ ಶಿಂಗನಳ್ಳಿ , ಪತ್ರಕರ್ತ ಕೇಬಲ್ ನಾಗೇಶ್, ಕೇಶವ ದುರ್ಗಾ ಗಾಂವ್ಕರ್, ಅಕ್ಷಯ್ ಅಶೋಕ ಕಿತ್ತೂರ್, ಆಕಾಶ ಮಲ್ಲೇಶ ಅನಿಗೊಳ, ಯಾದವ ತುಕಾರಾಮ ಮರಾಠೆ, ಸುರೇಂದ್ರ ಮುರ್ಕುಂಬಿ ಸೇರಿದಂತೆ 8 ಮಂದಿ ಹಾಗು ಗ್ರಾಮೀಣ ಭಾಗದ ರಾಮಕೃಷ್ಣ ಗಣಪೂಮನೆ, ಉಮಾಮಹೇಶ್ವರ ಮೆಣಸುಮನೆ, ವಿ.ಪಿ.ಹೆಬ್ಬಾರ್ ಮಲವಳ್ಳಿ, ರಾಜಾರಾಮ ಗಾಂವ್ಕರ್, ರಾಮಚಂದ್ರ ಗಣಪುಮನೆ , ರಾಮಚಂದ್ರ ಸೇರಿದಂತೆ 6 ಮಂದಿ ಗ್ರಾಮೀಣ ಭಾಗದ ರಾಮಭಕ್ತರು ಅಯೋದ್ಯೆಗೆ ಪಯಣ ಬೆಳೆಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ ಏಕಾನ್, ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ, ನಾಗರಿಕ ವೇದಿಕೆ ಅಧ್ಯಕ್ಷ ರಾಮುನಾಯ್ಕ್, ಪ್ರಮುಖರಾದ ಅನಂತ ಗಾಂವ್ಕರ್, ಗಜಾನನ ನಾಯ್ಕ್ ತಳ್ಳಿಗೆರೆ, ಸಿದ್ದಾರ್ಥ ನಂದೊಳ್ಳಿ ಮಠ, ಪಟ್ಟಣ ಪಂಚಾಯತ್ ಸದಸ್ಯ ಆಧಿತ್ಯ ಗುಡಿಗಾರ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಅಯೋಧ್ಯೆ ಯಾತ್ರೆ ಹೊರಟ ರಾಮ ಭಕ್ತರನ್ನು ಅವರವರ ಕುಟುಂಬದ ಸದಸ್ಯರು,ಸ್ನೇಹಿತರು ಮತ್ತು ಸಾರ್ವಜನಿಕ ಭಕ್ತ ಜನ ಬಂಧು ಬಗಿನಿಯರು ಜಯಘೊಷದೊಂದಿಗೆ ಬೀಳ್ಕೊಟ್ಟರು.



Prathidvani Yellapura