Breaking News

ರಾಷ್ಟ್ರಭಕ್ತ ಸಂಘಟನೆಯಿಂದ ಯಲ್ಲಾಪುರದಲ್ಲಿ ಸಾಂಸ್ಕೃತಿಕ ಸ್ವಾತಂತ್ರ್ಯೋತ್ಸವ ಸಂಭ್ರಮ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಯಲ್ಲಾಪುರ : ಭಾರತ ಮಾತೆಯನ್ನು ಪೂಜಿಸುವ ಪ್ರತಿ ಭಾರತೀಯನ ಮನೆಯ ಹಬ್ಬ ಸ್ವಾತಂತ್ರ ಉತ್ಸವ. ಇಂತಹ ಸಂಭ್ರಮವನ್ನು ನಮಗಿತ್ತವರು ತ್ಯಾಗ ಬಲಿದಾನದೊಂದಿಗೆ ಹೋರಾಡಿ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸಿದ ಹೋರಾಟಗಾರರು. ಅವರನ್ನು ಸದಾ ಸ್ಮರಿಸುವ ಗೌರವಿಸುವ ಚರಿತ್ರೆಗಳನ್ನು ಭವಿಷ್ಯದ ಪೀಳಿಗೆಗೆ ಹೇಳುವ ಕಾರ್ಯ ನಮ್ಮಿಂದಾಗಬೇಕಿದೆ. ಶಿಕ್ಷಣ, ಉದ್ಯೋಗ, ವ್ಯಾಪಾರ ವಹಿವಾಟು ಎಲ್ಲವೂ ಇದ್ದದ್ದೇ. ಆದರೆ ದೇಶ ಪ್ರೇಮ, ರಾಷ್ಟçಭಕ್ತಿಯನ್ನು ಮನೆಯ ಹಿರಿಯರು ಹೇಳಿಕೊಡಬೇಕಿದೆ. ಅದಕ್ಕಾಗಿ ಎಲ್ಲವನ್ನೂ ನಾವು ಪಾಲಿಸಬೇಕಿದೆ ಶಫಿ ಶೇಖ್ ಮತ್ತು ಬಳಗದವರ ಕಾರ್ಯ ಶ್ಲಾಘನೀಯ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.


ಅವರು ಪಟ್ಟಣದ ಗಾಂಧಿಕುಟೀರದಲ್ಲಿ ಯಲ್ಲಾಪುರದ ರಾಷ್ಟಭಕ್ತ ಸಂಘಟನೆ ಹಮ್ಮಿಕೊಂಡ 76 ನೇ ಸ್ವಾತಂತ್ರೊತ್ಸವ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ರಾಷ್ಟ್ರಭಕ್ತ ಸಂಘಟನೆಯ ಕಾರ್ಯ ಉತ್ತಮವಾಗಿದ್ದು ಶಫಿ ಶೇಖ್ ಅವರ ಸ್ನೇಹ ಬಳಗ ನಿರಂತರವಾಗಿ ಕಾಯ್ದುಕೊಂಡು ಪ್ರತಿವರ್ಷ ವಿಶೇಷ ಕಾರ್ಯಕ್ರಮಗಳೊಂದಿಗೆ ರಾಷ್ಟಭಕ್ತಿಯನ್ನು ಬಿತ್ತುವ ಕಾರ್ಯವಾಗಬೇಕಿದೆ ಎಂದು ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ಹೇಳಿದರು.

ಬೇರೆಲ್ಲಾ ಹಬ್ಬಗಳಿಗಿಂತಲೂ ಅತ್ಯಂತ ಶ್ರೇಷ್ಠ ಮತ್ತು ಈ ನೆಲದ ಉಸಿರನ್ನು ಸೇವಿಸುವ ಪ್ರತಿಯೊಬ್ಬ ಪ್ರಜೆಯೂ ಆಚರಿಸಲೇಬೇಕಾದ ಸ್ವಾತಂತ್ರೋತ್ಸವ ಸಂಭ್ರಮ ಇನ್ನಷ್ಟು ವಿಜೃಂಬಣೆಯಿದ ನಡೆಯಬೇಕಿದೆ. ಈ ಕಾರ್ಯಗೈಯುತ್ತಿರುವ ರಾಷ್ಟ ಭಕ್ತ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಪ.ಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ್, ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ, ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್ ಶೇಖ ಹೇಳಿದರು.


ವೇದಿಕೆಯಲ್ಲಿ ನಿವೃತ್ತ ಯೋಧರಾದ ಮೋಹನ್ ನಾಯ್ಕ, ಮಂಜುನಾಥ ನಾಯ್ಕ, ತುಳಸೀದಾಸ ನಾಯ್ಕ, ಪ್ರವೀಣ ಆರ್ ಫಾಯ್ದೆ, ಪ್ರಭಾಕರ ನಾಯ್ಕ, ಪವಿತ್ರನ್ ನಾಯರ್, ಮನೋಜ ಪಾಟೀಲ, ಸುಬ್ರಹ್ಮಣ್ಯ ಭಟ್ಟ ಇವರುಗಳನ್ನು ಗೌರವಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.


ನಂತರ ತಾಲೂಕಿನ ಪ್ರತಿಭಾನ್ವಿತ ಗಾಯಕ-ಗಾಯಕಿಯರನ್ನೊಳಗೊಂಡ ಶಫಿ ಎಂ ಶೇಖ್ ನೇತೃತ್ವದ ಸೂಫಿಯಾನ್ ಮೆಲೋಡೀಸ್ ಎಂಬ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಧಾನಿಶ್ ಶೇಖ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪತ್ರಕರ್ತ ಕೇಬಲ್ ನಾಗೇಶ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿದ ಯಲ್ಲಾಪುರ ಕಾಳಮ್ಮ ನಗರ ಕೆಲವು  ನಿವಾಸಿಗಳಿಗೆ ವಿದ್ಯುತ್ ನೀಡದ ಸಮಸ್ಯೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಮುರಾರ್ಜಿ ವಸತಿ ಶಾಲೆ …

Leave a Reply

Your email address will not be published. Required fields are marked *