Breaking News

ಯಲ್ಲಾಪುರ ಮಕ್ಕಳ ಸ್ಕೇಟಿಂಗ್ ಪ್ರತಿಭೆಗೆ ದಕ್ಕಿದ ಬಂಗಾರದ ಪದಕ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಯಲ್ಲಾಪುರ : ಬೆಂಗಳೂರಿನ ಚನ್ನಮ್ಮನ ಕೆರೆ ಓಳಾಂಗಣ ಕ್ರಿಡಾಗಂಣದಲ್ಲಿ ನಡೆದ ಕರ್ನಾಟಕ ಪ್ರಿಮಿಯರ್ ಲೀಗ್ ಕ್ವಾಡ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್‌ನ ವಿದ್ಯಾರ್ಥಿಗಳು ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ,
ಜುಲೈ 14 ರಿಂದ ಪ್ರಾರಂಭವಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ವಾಡ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಬ್ಲಾಕ್ ಪ್ಯಾಂಥರ್ಸ್ ಹಾಗು ವೆಸ್ಟ್ರನ್ ಬುಲ್ಸ ತಂಡದ ನಡುವೆ ನಡೆದ ಪೈನಲ್ ಪಂದ್ಯದಲ್ಲಿ 4-2 ಅಂತರದಿಂದ ಜಯಿಸಿ ವೆಸ್ಟ್ರನ್ ಬುಲ್ಸ ತಂಡದ ಆಟಗಾರರು ಬಂಗಾರದ ಪದಕವನ್ನು ಪಡೆದು ಕೊಂಡರು.


ಕರ್ನಾಟಕದ ವಿವಿಧ ಊರುಗಳಿಂದ 220 ಕ್ಕೂ ಹೆಚ್ಚು ಸ್ಕೆಟಿಂಗ ಪಟುಗಳು ಬಾಗವಹಿಸಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ ನ ಆಟಗಾರರಾದ ವಿಶ್ವದರ್ಶನ ಪ್ರೌಢಶಾಲೆಯ ತಪನ್ ಲಕ್ಷ್ಮೀಕಾಂತ ಭಟ್ಟ, ಪುಷ್ಕರ್ ಪ್ರಕಾಶ್ ಶೇಟ್ , ಕಿರಣ ಮಂಜುನಾಥರಾವ್ , ಹಾಗು ದೀಯಾ ಸುರೇಶ ಶೇಟ್ ಹಾಗೂ ಮದರ್ ಥೇರೆಸಾ ಆಂಗ್ಲ ಮಾಧ್ಯಮ ಶಾಲೆಯ ಸೇಜಲ್ ಸತೀಶ ನಾಯ್ಕ ಪೈನಲ್ ಪಂದ್ಯದಲ್ಲಿ ಆಟವಾಡಿ ಕ್ಲಬ್‌ನ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ ಎಂದು ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ ನ ಆಧ್ಯಕ್ಷರಾದ ಪ್ರಕಾಶ ಶೇಟ್ ತಿಳಿಸಿದ್ದಾರೆ.

ಕರ್ನಾಟಕ ರೊಲರ್ ಸ್ಕೆಟಿಂಗ್ ಕ್ಲಬ್ ನ ತರಬೇತುದಾರರಾದ ದೀಲಿಪ್ ಹಣಬರ್


ಕರೊನಾ ಲಾಕ್‌ಡೌನ್ ಸಂಧರ್ಬದಲ್ಲಿ ಕರ್ನಾಟಕ ರೊಲರ್ ಸ್ಕೆಟಿಂಗ್ ಕ್ಲಬ್ ನ ತರಬೇತುದಾರರಾದ ದೀಲಿಪ್ ಹಣಬರ್ , ಅಜೇಯ ಗಾವಡಾ, ಸಚಿನ ಗಾವಡಾ ಅವರಿಂದ ತರಬೇತಿ ಪಡೆದ ಯಲ್ಲಾಪುರದ ಅನೇಕ ಮಕ್ಕಳು ಕಳೆದ ಎರಡು ವರ್ಷ ಗಳಿಂದ ಚಂಡಿಗಡ್ ಹಾಗೂ ಪಂಜಾಬ್ ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇದೀಗ ಬಂಗಾರದ ಪದಕ ಪಡೆದುಕೊಂಡಿರುವುದು ಯಲ್ಲಾಪುರಕ್ಕೆ ಹೆಮ್ಮೆಯ ವಿಷಯವಾಗಿದೆ. ತರಬೇತುದಾರ ದೀಲಿಪ್ ಹಣಬರ್ ಹಾಗೂ ಪದಕ ವಿಜೇತ ಕ್ರೀಡಾಪಟುಗಳಿಗೆ ಪೋಷಕರು, ಊರನಾಗರೀಕರು , ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಅಭಿನಂದಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *