

ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ: ಭೂಮಿಯ ಮೇಲೆ ಪ್ರತಿಯೊಂದು ಜೀವಿಗು ಜೀವಿಸುವ ಹಕ್ಕಿದೆ ಎಷ್ಟರ ಮಟ್ಟಿಗೆ ಎಂದರೆ ತನ್ನದು ಎಂಬ ಪ್ರಾಣವನ್ನು ಸಹ ತಾನು ತೆಗೆದುಕೊಳ್ಳಲು ಹಕ್ಕಿರುವುದಿಲ್ಲ ಅದು ಕಾನೂನಿನನ್ವಯ ಅಪರಾಧ ಆಗಲಿದೆ. ಇಂತಹದರ ನಡುವೆಯು ಮನುಷ್ಯ ಆತ್ಮಹತ್ಯೆ ಯಂತಹ ಕೃತ್ಯಕ್ಕೆ ಕೈ ಹಾಕುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ.
ಆತ್ಮಹತ್ಯೆಗೆ ಇಂತಹದೆ ನಿಖರ ಕಾರಣಗಳಿರುತ್ತವೆ ಎನ್ನಲು ಸಾದ್ಯವಿಲ್ಲ ಮಾನವ ದೇವರು ಕೊಟ್ಟಿರುವ ಅಮೂಲ್ಯವಾದ ಜೀವವನ್ನು ಇಷ್ಟೊಂದು ಸುಲಭವಾಗಿ ತೆಗೆದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ.

ಯಲ್ಲಾಪುರ ಸುಸಂಸ್ಕೃತ ಮತ್ತು ಪ್ರಜ್ಙಾವಂತರ ನೆಲವಾಗಿದೆ ಇಂತಹ ನೆಲದಲ್ಲು ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದ ಪ್ರಕರಣಗಳ ಸಂಖ್ಯೆ ಪ್ರಸ್ತುತ ವರ್ಷದಲ್ಲಿ ಏರಿಕೆಯಾಗುತ್ತಿದೆ
ಯಲ್ಲಾಪುರ ತಾಲೂಕಿನಲ್ಲಿ 2020 ರಲ್ಲಿ 51, 2021 ರಲ್ಲಿ 42 , 2022 ರಲ್ಲಿ 37, ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಈ ಅಂಕೆ ಸಂಖ್ಯೆಗಳನ್ನು ಗಮನಿಸಿದರೆ ಜನರು ನಿದಾನವಾಗಿ ಮರಳಿ ಜೀವನ ಮೌಲ್ಯ ಮಾನಸಿಕ ದೃಡತೆಯೆಡೆಗೆ ಸಾಗುತ್ತಿರುವಂತೆ ತೋರುತ್ತದೆ. ಆದರೆ 2023 ರ ಪ್ರಸ್ತುತ ವರ್ಷದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ತಹಬದಿಗೆ ಬರುತ್ತಿದ್ದ ಪ್ರಕರಣಗಳ ಸಂಖ್ಯೆ ಕೇವಲ ಆರು ತಿಂಗಳ ಇಂದಿನ ದಿನಾಂಕದ ವರೆಗೆ 29 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿರುವುದು ಆಘಾತಕಾರಿಯಾಗಿದೆ.
ಭಗವಂತ ನೀಡಿದ ಬದುಕಿಗೆ ತಾವೆ ಕೊಳ್ಳಿ ಇಟ್ಟುಕೊಳ್ಳುವುದು ಎಷ್ಟು ಸಮಂಜಸ ಎಂಬುದು ಪ್ರಾಜ್ಞರ ಅಭಿಪ್ರಾಯವಾಗಿದೆ.

ದೇಹದ ಆರೋಗ್ಯದಷ್ಟೆ ಮಾನಸಿಕ ಆರೋಗ್ಯ ಕೂಡ ಅತಿ ಮುಖ್ಯವಾದುದಾಗಿದೆ. ಬೆಳೆಯುತ್ತಿರುವ ನಾಗರಿಕತೆ ಭರಾಟೆಯಲ್ಲಿ ಮನುಷ್ಯ ಒತ್ತಡದ ಬದುಕಿಗೆ ಒಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಆಗದಿದ್ದಾಗ ಒತ್ತಡದ ಬದುಕನ್ನು ಸಹಿಸಲಾಗದೆ ಆತ್ಮಹತ್ಯೆ ಯಂತಹ ಪ್ರಕರಣಗಳ ಕಡೆಗೆ ವಾಲುತ್ತಿದ್ದಾನೆ. ಭಾರತೀಯ ಪರಂಪರೆಯ ಯೋಗ,ಧ್ಯಾನ ಮಾನಸಿಕ ದೃಡತೆಗೆ ದಾರಿ ಮಾಡಲಿದೆ. ಇದನ್ನು ಒಂದು ಧರ್ಮದ ನೆಲೆಗಟ್ಟಿನಲ್ಲಿ ನೋಡದೆ ಒಂದು ಮಾನಸಿಕ ವ್ಯಾಯಾಮವೆಂದು ಭಾವಿಸಿ ಶಾಲೆಗಳಲ್ಲಿ ಕೆಲ ಸಮಯ ಸಾಮೂಹಿಕವಾಗಿ ಅಳವಡಿಸಿದರೆ ಉತ್ತಮ ಪಲಿತಾಂಶ ಬರಲಿದೆ. ದುಶ್ಚಟಗಳು ಮತ್ತು ಮೊಬೈಲ್ ಗೀಳು ಸಹ ಒತ್ತಡಕ್ಕೆ ದಾರಿಯಾಗಲಿದ್ದು ಎಲ್ಲವು ಇತಿ ಮಿತಿಯಾಗಿರಬೇಕಿದೆ. ಮನುಷ್ಯನ ಜೀವನ ಪದ್ದತಿ ಯಲ್ಲಿ ತೃಪ್ತಿ ಎಂಬುದು ಮರಿಚಿಕೆಯಾಗುತ್ತಿದ್ದು ಮೊದಲು ಇದ್ದುದರಲ್ಲಿ ತೃಪ್ತಭಾವ ಬರಬೇಕಿದೆ ಇಲ್ಲವಾದಲ್ಲಿ ಇಂತಹ ಆತ್ಮಹತ್ಯೆ ಯಂತಹ ಕೃತ್ಯಗಳಿಗೆ ಬಲಿಯಾಗಬೇಕಾಗಲಿದೆ. ಬದಲಿಸಿಕೊಂಡರೆ ಬದುಕಿನ ಶೈಲಿ ಉತ್ತಮ .

Prathidvani Yellapura