

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ -ಯಲ್ಲಾಪುರ ಮತ್ತು ಹಳಿಯಾಳ ತಾಲೂಕಿನ ಗಡಿ ಪ್ರದೇಶವಾದ ತಾಟವಾಳ ಸಮೀಪ ರಾಜ್ಯ ಹೆದ್ದಾರಿಗೆ ಸೇತುವೆ ನಿರ್ಮಾಣ ಹಂತದಲ್ಲಿದ್ದು ಸರ್ವಜನಿಕ ಸೇವೆಗೆ ಸೆಪ್ಟೆಂಬರ್ ತಿಂಗಳಲ್ಲಿ ದೊರೆಯಬೇಕಿದೆ.

ತಾಟವಾಳ ಸಮೀಪ ಯಲ್ಲಾಪುರ ಹಳಿಯಾಳ ಬೆಸೆಯುವ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ತಟ್ಟಿಹಳ್ಳ ಡ್ಯಾಂನಿಂದ ಹೆಚ್ಚಾದ ನೀರನ್ನು ಹೊರಬಿಟ್ಟರೆ ಮಳೆಗಾಲದಲ್ಲಿ ಸೇತುವೆ ತುಂಬಿ ಹರಿಯುತ್ತದೆ. ಕಳೆದೆರಡು ವರ್ಷದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಸೇತುವೆ ತುಂಬಿಹರಿದಿದ್ದು ಮೇಲ್ಬಾಗದ ತಡೆಗೋಡೆ ಮುರಿದು ಬಿದ್ದಿತ್ತು ಆದರೆ ಗಟ್ಟಿಮುಟ್ಟಾದ ಬ್ರಿಟಿಷ್ ಕಾಲದ ಸೇತುವೆ ಕೊಂಚವು ಅಲುಗದೆ ಗಟ್ಟಿಯಾಗಿ ನಿಂತಿತ್ತು. ಅದರು ತಜ್ಞರ ಅಭಿಪ್ರಾಯದಂತೆ ಹಳೆಯ ಸೇತುವೆ ಪಕ್ಕದಲ್ಲಿಯೆ ಮತ್ತೊಂದು ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.

ಸೇತುವೆ ನಿರ್ಮಾಣ ಕಾರ್ಯ ಕುಮುಟ ಮೂಲದ ಜಿ.ಜೆ.ನಾಯ್ಕ್ ಕನ್ಸ್ಟ್ರಕ್ಷನ್ಸ್ ಕಡೆಯಿಂದ ನಿರ್ವಹಿಸಲಾಗುತ್ತಿದೆ 7 ಕೋಟಿ 21 ಲಕ್ಷದ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯು 2022 ರ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಿದ್ದು 2023 ರ ಸೆಪ್ಟೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಕರಾರಿದೆ.
ಸೇತುವೆ 82 ಮೀಟರ್ ಉದ್ದವಿದ್ದು ಐದು ಪಿಲ್ಲರ್ ನಿರ್ಮಾಣಗೊಳ್ಳುತ್ತಿದೆ. ಪ್ರಸ್ತುತ ಮಳೆಗಾಲ ಪ್ರಾರಂಭವಾಗುವ ಮುನ್ನ ಸೇತುವೆ ಸಂಪೂರ್ಣ ಆಗಬೇಕಿದೆ. ಪಕ್ಕದಲ್ಲೆ ಇರುವ ಬ್ರಿಟಿಷ್ ಕಾಲದ ಸೇತುವೆ ನಿರ್ಮಾಣ ಅಷ್ಟೊಂದು ಗಟ್ಟಿಮುಟ್ಟಾಗಿದ್ದು ಪ್ರವಾಹ ಸಂದರ್ಭದಲ್ಲಿ ಕೊಂಚ ಡ್ಯಾಮೇಜ್ ಆಗಿದ್ದು ಮುನ್ನೆಚ್ಚರಿಕೆಯಾಗಿ ನೂತನ ಸೇತುವೆ ಕಟ್ಟಲಾಗುತ್ತಿದೆ.

ಒಟ್ಟಿನಲ್ಲಿ ಬೆಲ್ಲ,ಸುಣ್ಣ,ಮರಳು ಬಳಸಿ ಗಾರೆಮಾಡಿ ಗಜ ಗಾತ್ರದಲ್ಲಿ ಕಟ್ಟಿದ್ದ ಸೇತುವೆ ಉತ್ತಮ ಗುಣಮಟ್ಟ ಹೊಂದಿದ್ದು ಮಳೆಗಾಲಕ್ಕು ಮುನ್ನ ನೂತನ ಸೇತುವೆಯು ಸಾರ್ವಜನಿಕ ಸೇವೆಗೆ ದೊರೆತಲ್ಲಿ ಜನತೆಗೆ ಅನುಕೂಲ ಆಗಲಿದೆ ಎಂಬುದು ಹಲವು ನಾಗರಿಕರ ಅಭಿಪ್ರಾಯವಾಗಿದೆ.





Prathidvani Yellapura