


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಕೃಷಿ ಕ್ಷೇತ್ರದಲ್ಲಿ ನಂಬಿಕೆ ಮತ್ತು ವಿಶ್ವಾಸದೊಂದಿಗೆ ತಾಲೂಕಿನ ರೈತಾಪಿ ವರ್ಗ ನಮ್ಮ ಸಂಸ್ಥೆಯ ಮೇಲೆ ಭರವಸೆ ಇಟ್ಟು ಕಳೆದ 25 ವರ್ಷಗಳಿಂದ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಇಂದು ರಜತ ಸಂಭ್ರಮದ ಹೊಸಿಲಿಗೆ ಬಂದಿದೆ. ಏ. 20 ರ ರವಿವಾರ ಸಂಪೂರ್ಣ ಒಂದು ದಿನ ರಜತ ಸಂಭ್ರಮದ ಕಾರ್ಯಕ್ರಮಕ್ಕೆ ಮೀಸಲಿರಿಸಿದೆ ಎಂದು ಮಲೆನಾಡು ಕೃಷಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಅವರು ಪಟ್ಟಣದ ಅಡಿಕೆ ಭವನದಲ್ಲಿ ಕರೆಯಲಾದ ಸುದ್ಧಿಗೋಷ್ಠಿಯಲ್ಲಿ ಮ.ಕೃ.ಅ.ಸೇ. ಸ.ಸಂ.ನಿಯಮಿತದ 25 ರ ರಜತ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಏ.20 ರ ರವಿವಾರ ರಜತ ಸಂಭ್ರಮದ ಕಾರ್ಯಕ್ರಮವನ್ನು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು ಸಂಸದರು, ಶಾಸಕರು ಹಾಗೂ ಇನ್ನಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಮದ್ಯಾಹ್ನ ಸಂಗೀತ ಕಾರ್ಯಕ್ರಮ, ಸಹಕಾರಿ ವಿಚಾರಗೋಷ್ಠಿ, ಗೌರವ ಸನ್ಮಾನ, ಸಮಾರೋಪ ಸಮಾರಂಭ ನಡೆಯಲಿದ್ದು ಸಂಜೆ 7ಘಂಟೆಗೆ ದಕ್ಷಯಜ್ಞ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಂ.ಜಿ ಭಟ್ಟ ಶೀಗೇಪಾಲ, ಆಡಳಿತ ಮಂಡಳಿ ನಿರ್ದೇಶಕರಾದ ಎಂ.ಆರ್ ಹೆಗಡೆ ತಾರೇಹಳ್ಳಿ, ಜಿ.ಆರ್ ಹೆಗಡೆ ಬೆದೆಹಕ್ಲು, ಎಂ.ಪಿ ಹೆಗಡೆ ಚವತ್ತಿ, ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಪಿ ಹೆಗಡೆ ಉಪಸ್ಥಿತರಿದ್ದರು.





Prathidvani Yellapura