
ಪ್ರತಿಧ್ವನಿ ಯಲ್ಲಾಪುರ : ಬೇಸಿಗೆಯ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬಿಸಿಲ ಹೊಡೆತಕ್ಕೆ ಜನ ಹೈರಾಣಾಗಿ ಹೋಗಿದ್ದಾರೆ. ಬಾಯಾರಿಕೆ ನೀಗಿಸಲು ಎಳನೀರು ಮತ್ತು ಕಲ್ಲಂಗಡಿ ಹಣ್ಣಿಗೆ ಮೊರೆಹೋಗಿದ್ದಾರೆ.

ಹಿಂದೆ ಒಮ್ಮೆ 50 ರುಪಾಯಿಗೆ ಜಿಗಿದ ಎಳನೀರು ದರ ವಾಪಸ್ ಬರಲೇ ಇಲ್ಲ ಇದೀಗ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಸರಬರಾಜಾಗದೆ ದೂರದ ಮಂಡ್ಯ ಮದ್ದೂರಿನಿಂದ ಸಪ್ಲೆ ಬರುತ್ತಿದೆ. ಆ ಕಾರಣದಿಂದ ಸಾರಿಗೆ ವೆಚ್ಚ ಹೆಚ್ಚಾಗುತ್ತಿರುವುದು ವ್ಯಾಪಾರಸ್ಥರು ಗ್ರಾಹಕರಿಗೆ ಕಡಿಮೆ ಹಣಕದಕೆ ನೀಡಲು ಸಾದ್ಯವಾಗುವುದಿಲ್ಲ.

ಸದ್ಯಕ್ಕೆ ಕಲ್ಲಂಗಡಿ ಹಣ್ಣು ಕೆ.ಜಿ.ಗೆ 30 ರುಪಾಯಿ ಇದ್ದು ಪೂರೈಕೆ ಸರಿ ಇದ್ದು ದಾಹ ತಣಿಸಿಕೊಳ್ಳಲು ಅತಿ ಹೆಚ್ಚು ಗ್ರಾಹಕರು ಕೊಂಡುಕೊಳ್ಳುವುದು ಸಾಮಾನ್ಯವಾಗಿದೆ.
ಒಟ್ಟಿನಲ್ಲಿ ಬಿಸಿಲ ಬಿಸಿಗೆ ನೆಲವೆಲ್ಲಾ ಸುಡುತಿದ್ದು ಮನೆಯೊಳಗೆ ಇರುವುದು ಸಹ ಕಷ್ಟವಾಗುತ್ತಿದೆ ಇಂತಹ ಸಂದರ್ಭದಲ್ಲಿ ತಣ್ಣಗಿರುವ ಎಲ್ಲಾ ಮಾರ್ಗಗಳನ್ನು ಜನರು ಹುಡುಕುತಿದ್ದು ಮಳೆಗಾಲ ಸಮೀಪಿಸುತ್ತಿದ್ದು ಬೇಗನೆ ಮಳೆಹನಿ ಬೀಳಲಿ ಎನ್ನುತ್ತಿದ್ದಾರೆ.







Prathidvani Yellapura