Breaking News

ಯುಗಾದಿ ಉತ್ಸವಕ್ಕೆ ಕೆಸರಿಮಯವಾಗುತ್ತಿದೆ ಯಲ್ಲಾಪುರ. ಪ್ರತಿ ಮನೆಯ ಮೇಲೆ ಹಾರಲಿ ಭಗವಾಧ್ವಜ

ಪ್ರತಿಧ್ವನಿ ಯಲ್ಲಾಪುರ :

ಯುಗಾದಿ ಹಿಂದುತ್ವದ ಭಾವಬುನಾದಿ
ಆತ್ಮೀಯ ಹಿಂದು ಬಂಧುಗಳೆ ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬ ಬರುತ್ತಲಿದ್ದು ಪ್ರತಿ ಹಿಂದುಗಳ ಮನೆಯ ಮೇಲೆ ಭಗವಾಧ್ವಜ ಹಾರಿಸಬೇಕು.
ಧ್ವಜವನ್ನು ತಂದು ಯಾರೋ ಕೊಡುತ್ತಾರೆ ಎಂದು ನಿರ್ಲಕ್ಷಿಸದೆ ನಿಮ್ಮ ಸ್ವಂತ ಹಣದಲ್ಲಿ ಕೇಸರಿ ಧ್ವಜ ತಂದು ಯುಗಾದಿ ಹಬ್ಬದ ದಿನ ಮುಂಜಾನೆ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ಮುಂದಿನ ಏಳೇಳು ಜನುಮವು ಇದೇ ಪವಿತ್ರ ಭಾರತ ನೆಲದಲ್ಲಿ ಅದುಸಹ ಹಿಂದು ಧರ್ಮದಲ್ಲೆ ಹುಟ್ಟುವಂತೆ ಕೋರಿ ಮನೆಯ ಮುಂಬಾಗದಲ್ಲಿ ಮುಂದಿನ ಒಂದು ವರ್ಷಗಳ ಕಾಲ ಹಾರುತ್ತಿರುವಂತೆ ಕಟ್ಟಬೇಕೆಂದು ಪ್ರತಿಧ್ವನಿ ಕಳಕಳಿಯಾಗಿದೆ.

ಯುಗಾದಿ ಉತ್ಸವಕ್ಕಾಗಿ ಯಲ್ಲಾಪುರ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದು ಎಲ್ಲೆಲ್ಲು ಕೇಸರಿ ಕೇಸರಿ ಕೇಸರಿಮಯವಾಗಿದೆ. ಕೆಲವುಕಡೆಗಳಲ್ಲಿ ಮತ್ತು ಪತಾಕೆ ಕಟ್ಟುವ ಕೆಲಸ ಸಾಗುತ್ತಿದೆ ನಾಳೆ ಬೈಕ್ ರ‍್ಯಾಲಿ ಇರುವ ಹಿನ್ನೆಲೆಯಲ್ಲಿ ರಾತ್ರಿ ಕೂಡ ಸಿಂಗಾರ ಮಾಡುವ ಯೋಜಬೆ ಹಾಕಿಕೊಂಡಿದ್ದಾರೆ.

ಯಲ್ಲಾಪುರದಲ್ಲಿ ಕೇಸರಿ ಪತಾಕೆ,ಬಂಟಿಂಗ್ಸ್ ಗೆ ಹೆಸರುವಾಸಿಯಾದ ಶಂಕರ ಬದ್ದಿ ಒಡೆತನದ ಬದ್ದಿ ಫ್ಯಾಷನ್ ಸೆಂಟರ್ ನಲ್ಲಿ ಕೇಸರಿ ಪತಾಕೆ,ಧ್ವಜ,ಬಂಟಿಂಗ್ಸ್ ದೊರೆಯುತ್ತಿದ್ದು ರಿಯಾಯಿತಿ ದರದಲ್ಲಿ ಧರ್ಮ ಕಾರ್ಯದೊಂದಿದೆ ನ್ಯಾಯವಾದ ವ್ಯಾಪಾರವನ್ನು ಮಾಡುತ್ತಿದ್ದು ಪ್ರತಿ ಮನೆಯ ಮೇಲೆ ಪ್ರತಿ ಹಿಂದುಗಳು ಯುಗಾದಿ ಹೊಸವರ್ಷದ ಹಿನ್ನೆಲೆಯಲ್ಲಿ ತಪ್ಪದೆ ಕೇಸರಿ ಧ್ವಜ ಕಟ್ಟಿ ಸಂಭ್ರಮಿಸಲು ಇಲ್ಲಿ ಭೇಟಿ ನೀಡಿ ಕೊಂಡುಕೊಳ್ಳಿ ಎಂದು ಪ್ರತಿಧ್ವನಿ ಕೋರುತ್ತದೆ.

ಯುಗಾದಿ ಸಂಭ್ರಮಕ್ಕೆ ಅನೇಕ ಮಹನಿಯರು ದೇಣಿಗೆ ನೀಡುತ್ತಿದ್ದು ಉತ್ಸವದಲ್ಲಿ ಚಂಡೆ ವಾದನದ ತಂಡದ ಪ್ರಾಯೋಜಕತ್ವಕ್ಕೆ ಲಿಂಗದಬೈಲ್ ಉದ್ಯಮಿ ಪ್ರಕಾಶ್ ಹೆಗಡೆ ಅವರಲ್ಲಿ ಸಮಿತಿ ಪ್ರಮುಖರು ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸೋಮವಾರ 50,001-00 ( ಐವತ್ತು ಸಾವಿರದ ಒಂದು ರುಪಾಯಿಗಳು) ನೀಡಿದ್ದಾರೆ. ದೇಣಿಗೆಯನ್ನು ಸಮಿತಿ ಅಧ್ಯಕ್ಷ ವಿಶಾಲ್ ವಾಳಂಬಿ ನೇತೃತ್ವದಲ್ಲಿ ಪ್ರಮುಖರಾದ ಸತೀಶ್ ಶಿವಾನಂದ ನಾಯ್ಕ್, ಕಾಳಮ್ಮನಗರ ರಾಮು, ಗಜಾನನ ಭಟ್ ಸ್ವೀಕರಿಸಿ ಸಮಸ್ತ ಯಲ್ಲಾಪುರ ತಾಲೂಕಿನ ಹಿಂದು ಕುಟುಂಬಗಳ ಪರವಾಗಿ ಕೃತಜ್ಞತೆ ಸಲ್ಲಿಸಿದರು.

 

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ನಾಡುಕಂಡ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರ ಜನುಮ ದಿನಕ್ಕೆ ಶುಭ ಕೋರಿದ ಅತ್ಯಾಪ್ತ  ಬಾಬು ಸಿದ್ದಿ ಮತ್ತು ತಂಡ.

ಪ್ರತಿಧ್ವನಿ ಯಲ್ಲಾಪುರ : ನಾಡಿನ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಹಾಲಿ ಆಡಳಿತ …

Leave a Reply

Your email address will not be published. Required fields are marked *