Breaking News

ಅಸಹಾಯಕ ತಾಯಿಯ ಕರುಳಿನ ಕೂಗು –  ನನ್ನ ಮಗನ ಚಿಕಿತ್ಸೆಗೆ ನೆರವು ನೀಡಿ -ಬದುಕಿಸಿ..🙏

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವಿನಾಯಕನಗರ ( ಚೌಡೇಶ್ವರಿ ದೇವಸ್ಥಾನ ಅಂಕೋಲೆಕರ್ ಕಾಂಪೌಂಡ್) ನಿವಾಸಿ ಮಿತೇಶ್ ವಿ ಭಟ್ (24) ಎಂಬ ಯುವಕನಿಗೆ ವಿಚಿತ್ರ ಕಾಯಿಲೆಯೊಂದು ದೇಹ ಹೊಕ್ಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದು ಆರ್ಥಿಕವಾಗಿ ಅತ್ಯಂತ ದುರ್ಬಲರಾದ ಕುಟುಂಬಕ್ಕೆ ಸಹೃಧಯ ನಾಗರಿಕರ ಕೈಲಾದ ಸಹಾಯವನ್ನು ಯುವಕನ ಅಸಹಾಯಕ ತಾಯಿ ಪ್ರಭಾವತಿ ಎಂಬುವರು ಮನವಿ ಮಾಡಿದ್ದಾರೆ.


ಯುವಕನ ತಾಯಿ ಪ್ರಭಾವತಿಯವರ ಮನವಿ.
ಆತ್ಮೀಯರೆ
ನನ್ನ ಹೆಸರು ಪ್ರಭಾವತಿ ವಿಶ್ವೇಶ್ವರ ಭಟ್ಟ 48 ವರ್ಷ, ಪಿಯುಸಿ ವರೆಗೆ ವಿದ್ಯಾಭ್ಯಾಸ, ಜೀವನೋಪಾಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ. ನನ್ನ ತವರುಮನೆ ಯಲ್ಲಾಪುರ ತಾಲೂಕಿನ ಹೊನ್ನಗದ್ದೆ (ಮನೆತನದ ಹೆಸರು ದುಂಡಿ ಗದ್ದೆ) 20 ಗುಂಟೆ ಜಮೀನು ಸಹ ಹೊಂದಿದ್ದೆವು. ನನ್ನ ಪತಿ
ವಿಶ್ವೇಶ್ವರ ಗಣಪತಿ ಭಟ್ಟ, ಊರು : ಹಡಿನಬಾಳ, ತಾ: ಹೊನ್ನಾವರ, ಅವರು ಯಲ್ಲಾಪುರದಲ್ಲಿ ಎಲೆಕ್ಟ್ರಿಕಲ್ ಸರ್ವೀಸ್ ಅಂಗಡಿ ನಡೆಸುತ್ತಿದ್ದರು. ಶುಗರ್ ಹಾಗೂ ಕಿಡ್ನಿ ಸ್ಟೋನ್‌ನಿಂದ ಕಿಡ್ನಿ ವೈಫಲ್ಯದಿಂದ ಮರಣ ಹೊಂದಿದ್ದಾರೆ. ಅವರ ಕುಡಿಯುವ ಚಟದಿಂದಾಗಿ ಸಂಸಾರದ ಜವಾಬ್ದಾರಿ ನಿರ್ವಹಿಸುತ್ತಿರಲಿಲ್ಲ. ಇವರು ಮಾಡಿದ ಸಾಲಕ್ಕಾಗಿ ತಂದೆಯ ಜಮೀನು ಮಾರಾಟ ಮಾಡಬೇಕಾಯಿತು.


ಇಂತಹ ಸಂದಿಗ್ದತೆಯಲ್ಲಿ
ಮಗ ಮಿತೇಶ ವಿಶ್ವೇಶ್ವರ ಭಟ್ಟನಿಗೆ
Anti HMGCR Immune mediated necrotizing Myositis ಎಂಬ ವಿಚಿತ್ರ ಕಾಯಿಲೆ ಬಂದಿದ್ದು ಪ್ರತಿಬಾನ್ವಿತ ಇಂಜಿನಿಯರ್ ವಿದ್ಯಾರ್ಥಿ ಬಾಳಿಗೆ ಭಗವಂತ ಬರ ಸಿಡಿಲು ಬಡಿದಿದ್ದಾನೆ. ಇದು ಅತ್ಯಂತ ಅಪರೂಪದ ಕಾಯಿಲೆ . ಅವನ ರೋಗ ನಿರೋಧಕ ಸಕ್ತಿ ಅವನ ದೇಹದ ಮುಖ್ಯಭಾಗಗಳಲ್ಲಿನ ಸ್ನಾಯು ಶಕ್ತಿಯನ್ನು ಹಾಳು ಮಾಡುತ್ತದೆ. ಇದರಿಂದಾಗಿ ಪ್ರಥಮವಾಗಿ ದೇಹದಲ್ಲಿ ನಿಶ್ಯಕ್ತಿ, ಕೈಕಾಲುಗಳಲ್ಲಿನ ಚಲನೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತದೆ, ಆಹಾರ ನುಂಗಲು ತೊಂದರೆ, ಉಸಿರಾಟಕ್ಕೆ ತೊಂದರೆಯಾಗಿ ಅಪಾಯ ಹಂತದಲಿದ್ದಾನೆ.
ಸುಮಾರು 9 ತಿಂಗಳಿನಿಂದ ಚಿಕಿತ್ಸೆ ನಡೆಯುತ್ತಿದೆ. ತಿಂಗಳಿಗೆ ಸುಮಾರು 2,50,000 ಖರ್ಚಾಗುತ್ತಿದೆ.
ಮನೆಯಲ್ಲಿ ವಯಸ್ಸಾದ ತಾಯಿ ಹಾಗೂ ಮಗ ಮಾತ್ರವಿರುವುದು.ಮಗನಿಗೆ ಕಷ್ಟಪಟ್ಟು ಹೊಟ್ಟೆಬಟ್ಟೆ ಕಟ್ಟಿ ವಿದ್ಯಾಭ್ಯಾಸ ಕೊಡಿಸಿದ್ದು ಅವನು ನನ್ನ ಬದುಕಿನ ಏಕೈಕ ಆಸರೆಯಾಗಿದ್ದಾನೆ. ಅವನು ಗುಣಮುಖನಾಗುವ ಸಾಧ್ಯತೆಗಳಿವೆ. ವೈದ್ಯರ ಪ್ರಕಾರ ಅವನನ್ನು ಉಳಿಸಲು CART-T –Cell theropy ಎಂಬ ಅತ್ಯಾಧುನಿಕ ಚಿಕಿತ್ಸೆಯ ಅಗತ್ಯವಿದೆ.
ಚಿಕಿತ್ಸೆಯ ಅಂದಾಜು ವೆಚ್ಛ ಸುಮಾರು 50 ಲಕ್ಷ ಎಂದಿದ್ದಾರೆ. ಒಬ್ಬ ಸಾಮಾನ್ಯ ಮಧ್ಯಮ ವರ್ಗದ ತಾಯಿಯಾಗಿ ಅಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುವುದು ನನ್ನಿಂದ ಅಸಾಧ್ಯವಾಗಿದೆ.
ಆದರೆ ನನ್ನ ಮಗ, ಅಮ್ಮಾ ಈ ರೋಗವನ್ನು ಗೆಲ್ಲುತ್ತೇನೆ ಎಂದು ಭರವಸೆಯಿಂದ ಹೋರಾಡುತ್ತಿದ್ದಾನೆ. ನಾನು ಜೀವನದಲ್ಲಿ ಸೋತು ಹೋಗಿದ್ದೇನೆ. ಚಿಕಿತ್ಸೆ ನಮ್ಮಂತಹ ಬಡವರ ಕೈಗೆಟುಕುವಂತಿಲ್ಲ. ಮಗನನ್ನು ಉಳಿಸಿಕೊಳ್ಳಬೇಕೆಂಬ ಹಂಬಲದಿಂದ ಒರ್ವ ತಾಯಿಯಾಗಿ ಒಬ್ಬಂಟಿಯಾಗಿ ಹೋರಾಡುತ್ತಿದ್ದು ಈ ಮನವಿಯನ್ನು ತುಂಬಾ ಭಾರವಾದ ಹೃದಯದಿಂದ ಮಾಡುತ್ತಿದ್ದೇನೆ. ಮಗನ ಚಿಕಿತ್ಸೆಗಾಗಿ ತಮ್ಮ ಕೈಲಾದ ಸಹಾಯಕ್ಕೆ ಬೇಡುತ್ತಿದ್ದೇನೆ.

ಹಣದ ಸಹಾಯ ಮಾಡುವವರು ಈ ಕೆಳಗಿನ ಸ್ಕ್ಯಾನರ್ ಗೆ ಆತನ ತಾಯಿ ಪ್ರಭಾವತಿಯವರ ಖಾತೆಗೆ ಜಮಾ ಮಾಡಬಹುದಾಗಿದೆ.

ಹಣದ ಸಹಾಯ ಮಾಡಲು ಈ ಕೆಳಗಿನ ಬ್ಯಾಂಕ್ ಖಾತೆಗು ಜಮಾ ಮಾಡಬಹುದಾಗಿದೆ.

ಅಕೌಂಟ್ details.
Name – Prabhavati Vishweshwar Bhat
No – 44990747127
IFSC – SBIN0001315
Bank and Branch – SBI, Yellapura
Gapy no – 9482648361

ಸಂಪರ್ಕಿಸಲು : 9482648361 ಪ್ರಭಾವತಿ ಯುವಕನ ತಾಯಿ

7406411298 – ಮಿತೇಶ್ ವಿಶ್ವೇಶ್ವರ ಭಟ್, ಅನಾರೋಗ್ಯದಲ್ಲಿರುವ ಯುವಕ

ಮನೆಯ ವಿಳಾಸ : ನೂತನ ನಗರ, ಯಲ್ಲಾಪುರ, ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಹತ್ತಿರ
ಪ್ರಸ್ತುತ ಮಗ ಇರುವ ವಿಳಾಸ : ಬಯಪ್ಪನಹಳ್ಳಿ, ಸದಾನಂದ ನಗರ, 7th main, ನಂ : , 163, 4th cross, NGEF lay out, Bangalore

ವಿ.ಸೂ – ಸಹಾಯ ಮಾಡುವವರು ಅನುಮಾನಗಳಿದ್ದರೆ ದೂರವಾಣಿ ಮೂಲಕ ಸಂಪರ್ಕಿಸಿ ಸಹಾಯ ಮಾಡಬಹುದಾಗಿದೆ

ಮಿಲಾಪ್ ಆ್ಯಪ್ ಎಂಬ ಸಾಮಾಜಿಕ ಜಾಲತಾಣದ ದೇಣಿಗೆ ಸಂಗ್ರಹಿಸುವ ಪ್ಲಾಟ್ ಫಾರಂನಲ್ಲಿಯು ಈ ತಾಯಿಯು ಮಗನ ಚಿಕಿತ್ಸೆಗೆ ಮನವಿ ಮಾಡಿದ್ದು ದೇಶಾದ್ಯಂತ ಸ್ಪಂದನೆ ವ್ಯಕ್ತವಾಗುತ್ತಿದೆ ಹಣದ ಸಹಾಯ ಮಾಡುವವರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪರೀಕ್ಷಿಸಬಹುದು.

https://m-lp.co/mitesh-6?utm_medium=whatsapp_status_message&utm_source=app

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ನಾಡುಕಂಡ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರ ಜನುಮ ದಿನಕ್ಕೆ ಶುಭ ಕೋರಿದ ಅತ್ಯಾಪ್ತ  ಬಾಬು ಸಿದ್ದಿ ಮತ್ತು ತಂಡ.

ಪ್ರತಿಧ್ವನಿ ಯಲ್ಲಾಪುರ : ನಾಡಿನ ಹಿರಿಯ ಮತ್ತು ಶ್ರೇಷ್ಠ ರಾಜಕಾರಣಿ ಹಳಿಯಾಳ ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಹಾಲಿ ಆಡಳಿತ …

Leave a Reply

Your email address will not be published. Required fields are marked *