Breaking News

ಯಲ್ಲಾಪುರದಲ್ಲಿ ರಂಗೇರಿಸಿದ “ಬೇಡರ ವೇಷ”ದ ಪ್ರದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ: ಪಟ್ಟಣದಲ್ಲಿ ಶುಕ್ರವಾರ ಸಂಜೆಯ ವೇಳೆ ಎಲ್ಲೆಲ್ಲು ತಮಟೆಯದೆ ಸದ್ದು ಬೇಡರ ವೇಷದಾರಿಗಳ ಕುಣಿತದ ಸೊಬಗು ಎಲ್ಲೆಡೆ ಹರಡಿತ್ತು.


ಹೋಳಿ ಹಬ್ಬದ ಹಿನ್ನಲೆಯಲ್ಲಿ ಬೇಡರ ವೇಷದ ಕುಣಿತ ಮಹತ್ವ ಪಡೆದಿದ್ದು ಶಿರಸಿ ಭಾಗದಲ್ಲಿ ಜನ ಜನಿತವಾದ ಕಲೆಯನ್ನು ಕಳೆದ ಕೆಲ ವರ್ಷಗಳಿಂದ ಯಲ್ಲಾಪುರದಲ್ಲೂ ನಡೆಸಿಕೊಂಡು ಬರಲಾಗುತ್ತಿದೆ.

ಬೇಡರ ವೇಷದಲ್ಲಿ ಮಿಂಚಿದ ರವೀಂದ್ರ ನಗರದ ಪ್ರಶಾಂತ್ ಜೋಗಳೇಕರ , ಅಂಬೇಡ್ಕರ್ ನಗರದ ಅಕ್ಷಯ್ ಪದ್ಮನಾಬ್ ರೇವಣ್ಕರ್ ಮತ್ತು ರವೀಂದ್ರ ನಗರದ ತನಯ್ ಮಹೇಶ್ ನಾಯ್ಕ್

ಸಂಜೆ 6 ಘಂಟೆಯಿಂದ ಪ್ರಾರಂಭವಾದ ಬೇಡರ ವೇಷದ ಕುಣಿತ ರವೀಂದ್ರ ನಗರದ ಪ್ರಶಾಂತ ಡಿ ಜೋಗಳೇಕರ ಹಾಗೂ ತನಯ ಮಹೇಶ್ ನಾಯ್ಕ ಮತ್ತು ಅಂಬೇಡ್ಕರ್ ನಗರದ ಅಕ್ಷಯ ಪದ್ಮನಾಭ ರೇವಣಕರ ಬೇಡರ ವೇಷಧಾರಿಗಳಾಗಿ ತಮ್ಮ ರೋಷಾವೇಶದ ನೃತ್ಯದೊಂದಿಗೆ ಜನಮನ ಸೆಳೆದರು.

ಅಂಬೇಡ್ಕರ್ ನಗರದ ಬೇಡರ ವೇಷ ಉದ್ಘಾಟಿಸಿದ ಉದ್ಯಮಿ ಬಾಲಕೃಷ್ಣ ನಾಯಕ್, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ರೇವಣ್ಕರ್,


ಅಂಬೇಡ್ಕರ್ ನಗರದ ಬೇಡರ ವೇಷದ ಪ್ರದರ್ಶನಕ್ಕೆ ಉದ್ಯಮಿ ಬಾಲಕೃಷ್ಣ ನಾಯಕ್, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ರೇವಣಕರ್ , ಪ್ರಶಾಂತ ಸಬಾಹಿತ, ಪದ್ಮನಾಭ ರೇವಣಕರ ತಮಟೆ ಬಾರಿಸಿ ಚಾಲನೆ ನೀಡಿದರು.

ರವೀಂದ್ರ ನಗರದ ಬೇಡರವೇಷ ಉದ್ಘಾಟಿಸಿದ ಪಟ್ಟಣ ಪಂಚಾಯತ್ ಸದಸ್ಯ ಸೋಮೇಶ್ವರ ನಾಯ್ಕ್ ಮತ್ತು ಸ್ಥಳೀಯ ಪ್ರಮುಖ ಪ್ರಭಾಕರ್ ಸಾಣೆ

ರವೀಂದ್ರ ನಗರದ ಬೇಡರ ವೇಷದ ಪ್ರದರ್ಶನಕ್ಕೆ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ್, ಪ್ರಭಾಕರ ಸಾಣೆ ಚಾಲನೆ ನೀಡಿದರು.

ಪೊಲೀಸ್ ವೃತ್ತದಲ್ಲಿ ಬೇಡರವೇಷದ ಕುಣಿತದ ಸೊಬಗು ಕಾಣಲು ಸೇರಿದ್ದ ಜನಸ್ತೋಮ


ಎರಡುವಕಡೆಗಳಿಂದ ಮೆರವಣಿಗೆ ಮೂಲಕ ಸಾಗಿ ಬಂದ ಬೇಡರವೇಷ ಪೊಲೀಸ್ ವೃತ್ತದಲ್ಲಿ ಜಮಾವಣೆಗೊಂಡಿತು ಸಾಗರೋಪಾದಿಯಲ್ಲಿ ನೆರೆದಿದ್ದ ಜನಜಾತ್ರೆಯಲ್ಲಿ ಮೂವರು ಬೇಡರವೇಷದಾರಿಗಳ ರೋಷಾವೇಷದ ನೃತ್ಯದ ಸೊಬಗು ಅದ್ಬುತವಾಗಿತ್ತು.

ಮೈ ನವಿರೇಳಿಸಿದ ತಮಟೆ ಸದ್ದು ಮೈ ಚಳಿ ಬಿಟ್ಟು ಎಲ್ಲೆಡೆ ಸದ್ದು ಮಾಡಿದ ತಮಟೆಗಳು

ಬೇಡರ ವೇಷದ ಕುಣಿತಗಾರರ ಹೆಜ್ಜೆಗೆ ಸರಿಯಾದ ತಮಟೆ ಸದ್ದು ಸಾಥ್ ಕೊಡುವುದರೊಂದಿಗೆ ಕುಣಿತಕ್ಕೆ ಮತ್ತಷ್ಟು ಮೆರುಗು ತಂದಿತ್ತು. ಎಲ್ಲಾ ಯುವಕರು ಹಿರಿಯರು ತಾಳಬದ್ದವಾಗಿ ತಟ್ಟಿದ ತಮಟೆ ಸದ್ದು ಎಲ್ಲರ ಹೃದಯ ಗೆದ್ದಿತು.


ವರ್ಷದಿಂದ ವರ್ಷಕ್ಕೆ ಜನಮನಬಗೆಲ್ಲುತ್ತಿರುವ ಬೇಡರವೇಷಕ್ಕೆ ನೆರೆದಿರುವ ಸಹಸ್ರಾರು ಜನಜಂಗುಳಿಯೆ ಸಾಕ್ಷಿಯಾಗಿದೆ.
ಘನಶಾಮ ರೇವಣಕರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *