
ಯಲ್ಲಾಪುರ : ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಹೋಳಿ ಹಬ್ಬದ ರಂಗಿನಾಟ ಎಲ್ಲೆಡೆ ಸಂಭ್ರಮ ತಂದಿತ್ತು. ಮುಂಜಾನೆಯಿಂದಲೆ ಪ್ರತಿ ಗಲ್ಲಿಯಲ್ಲು ಪುಡಿ ಬಣ್ಣದಾಟ ಪ್ರಾರಂಭವಾಗಿ ಮಕ್ಕಳು ಯುವಕ ಯುವತಿಯರು ಬಣ್ಣದಾಟವಾಡಿ ಸಂತಸಗೊಂಡರು..

ಮುಂದಿನ ವರ್ಷ ಗ್ರಾಮದೇವಿ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಹೋಳಿ ಹಬ್ಬದಾಚರಣೆ ನಡೆಯುವುದಿಲ್ಲವಾದ್ದರಿಂದ ಈ ವರ್ಷದ ಹೋಳಿ ಮಹತ್ವ ಪಡೆದಿತ್ತು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸಾಮಾನ್ಯರಂತೆ ಹಮ್ಮು ಬಿಮ್ಮು ಇಲ್ಲದಂತೆ ಎಲ್ಲರೊಂದಿಗೆ ಬೆರೆತು ಹೋಳಿ ಹಬ್ಬ ಆಚರಿಸಿದರು. ಬಣ್ಣಹಚ್ಚಿ ಹಚ್ಚಿಸಿಕೊಂಡು ಹಾಡಿಗೆ ಹೆಜ್ಜೆಹಾಕಿ ಕುಣಿದು ಕುಪ್ಪಳಿಸಿದರು.

ಪಟ್ಟಣದ ರವೀಂದ್ರ ನಗರ, ತಿಲಕ್ ಚೌಕ್, ಉದ್ಯಮನಗರ, ಕಾಳಮ್ಮ ನಗರದಲ್ಲಿ ರೈನ್ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಿನಲ್ಲಿ ಎಲ್ಲೆಡೆ ಸಂತಸದಲ್ಲಿ ನಡೆದ ಹೋಳಿ ಸಂಭ್ರಮ ಅತ್ಯಂತ ಶಾಂತಿಯುತವಾಗಿ ನಡೆಯಿತು.
Prathidvani Yellapura