Breaking News

ಯಲ್ಲಾಪುರದಲ್ಲಿ ಸಂಭ್ರಮ ಶನಿವಾರ ಹೆಸರಿನಲ್ಲಿ “ಬ್ಯಾಗ್ ರಹಿತ ದಿನ” ಆಚರಿಸಿದ ವಿವಿಧ ಶಾಲೆಗಳ ಮಕ್ಕಳು

ಹೋಲಿ ರೋಜರಿ ಶಾಲೆ ಮಕ್ಕಳ ಸಂಭ್ರಮ ಶನಿವಾರ ಆಚರಣೆ ಬ್ಯಾಗ್ ರಹಿತ ದಿನ 6 ಇಲಾಖೆಗಳಿಗೆ ಭೇಟಿ. 1 ) ಪೊಲೀಸ್ ಇಲಾಖೆ 2 ) ಸಾರಿಗೆ ಇಲಾಖೆ 3 ) ಕಂದಾಯ ಇಲಾಖೆ 4 ) ಆರೋಗ್ಯ ಇಲಾಖೆ 5 ) ಗ್ರಂಥಾಲಯ 6 ) ಅಂಚೆ‌ಇಲಾಖೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ಸರ್ಕಾರದ ನಿರ್ಧೇಶನದಂತೆ ಶಿಕ್ಷಣ ಇಲಾಖೆಯ ಆದೇಶದಂತೆ ರಾಜ್ಯದಾದ್ಯಂತ ಪ್ರಾಥಮಿಕ ಹಾಗು ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗೆ ಒತ್ತು ನೀಡುವ ಸಲುವಾಗಿ ಸಂಭ್ರಮದ ಶನಿವಾರ ಹೆಸರಿನಲ್ಲಿ ” ಬ್ಯಾಗ್ ರಹಿತ ದಿನ” ವಾಗಿ ತಿಂಗಳ ಮೂರನೆ ಶನಿವಾರ ಆಚರಿಸುತ್ತಿದ್ದು ಯಲ್ಲಾಪುರದ ಶಾಲೆಗಳಲ್ಲಿ ಸಂಭ್ರಮದ ಶನಿವಾರ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಪ್ರತಿ ತಿಂಗಳ ಮೂರನೆ ಶನಿವಾರ ಶಿಕ್ಷಣ ಇಲಾಖೆ ವಿಷಯ ಒಂದನ್ನು ನೀಡಿ ಬ್ಯಾಗ್ ರಹಿತ ಶಾಲಾದಿನ ಆಚರಿಸುವಂತೆ ಸೂಚಿಸಿದೆ ಈ ಪ್ರಕ್ರಿಯೆಯ ಮೊದಲ ಶನಿವಾರ ವಿದ್ಯಾರ್ಥಿಗಳಿಗೆ ” ನನ್ನ ಆರೋಗ್ಯ ನನ್ನ ಕೈಯಲ್ಲಿ ” ಎಂಬ ವಿಷಯ ನೀಡಿದ್ದು ಇದಕ್ಕೆ ಪೂರಕವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ.

ಸುದ್ದಿಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.


ಈ ಹಿನ್ನೆಲೆಯಲ್ಲಿ ಪಟ್ಟಣದ ಹೋಲಿ ರೋಜರಿ ಪ್ರೌಡಶಾಲೆ 150 ವಿದ್ಯಾರ್ಥಿಗಳನ್ನು 6 ತಂಡಗಳಾಗಿ ವಿಂಗಡಿಸಿ ಪಟ್ಟಣದ ಆಡಳಿತ ಸೌಧ, ಪೊಲೀಸ್ ಠಾಣೆ, ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಗ್ರಂಥಾಲಯ, ಅಂಚೆ ಕಚೇರಿ 6 ಕಡೆಗಳಿಗೆ 25 ವಿದ್ಯಾರ್ಥಿಗಳ ಗಪು ಮಾಡಿ ಭೇಟಿ ಮಾಡಿಸಿ ಅಲ್ಲಿನ ಎಲ್ಲಾ ವಿಚಾರಗಳನ್ನು ಮನದಟ್ಟಾಗುವಂತೆ ವಿವರಿಸಿದರು.

ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಸಂಭ್ರಮ ಶನಿವಾರ ದ ಪ್ರಯುಕ್ತ ಬ್ಯಾಗ್ ರಹಿತ ದಿನವನ್ನು ಮಳೆಗಾಲವಾದ್ದರಿಂದ ಶಾಲೆಯ ಒಳಭಾಗದಲ್ಲಿ ಮಕ್ಕಳ ಸಂತೆ ಪಠ್ಯೇತರ ಕುರಿತ ವಿಷಯಗಳ ಬಗ್ಗೆ ಮಕ್ಕಳಿಗೆ ಅರಿವು‌ಮೂಡಿಸಿದರು


ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ವೈಟಿಎಸ್ಎಸ್ ನಲ್ಲಿ ಬ್ಯಾಗ್ ರಹಿತ ದಿನ ವನ್ನು ಮಕ್ಕಳ ಸಂತೆಯಾಗಿ ಮಾರ್ಪಡಿಸಿ ಶಿಕ್ಷಕರು ಮಕ್ಕಳ ಸಂತೆಯಲ್ಲಿ ಕೊಳ್ಳುವ ಗ್ರಾಹಕರಾಗಿ ಪಾಲ್ಗೊಂಡು ವ್ಯಾಪಾರ ವಹಿಚಾಟಿನ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.

ಸುದ್ದಿಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


ಒಟ್ಟಿನಲ್ಲಿ ಸದಾ ಹೆಗಲಮೇಲೆ ಬಾರಿ ತೂಕದ ಬ್ಯಾಗ್ ಹೊರುವ ದೇಹಕ್ಕೆ ಶನಿವಾರ ರಿಲ್ಯಾಕ್ಸ್ ಇತ್ತು ಮತ್ತು ತಮ್ಮ ಸುತ್ತಮುತ್ತಲಿನ ವ್ಯವಸ್ಥೆಯಲ್ಲಿ ತಿಳಿದುಕೊಳ್ಳಬಹುದಾದ ಸಂಗತಿಗಳನ್ನು ತಿಳಿದಂತಾಯಿತು.
ಈ ಸಂದರ್ಭದಲ್ಲಿ ಆಯಾ ಇಲಾಖೆಯ ಮುಖ್ಯಸ್ಥರು ಸಿಬ್ಬಂದಿಗಳು ವಿದ್ಯಾರ್ಥಿಗಳ ಜೊತೆಯಲ್ಲಿ ಸಂವಾದ ನಡೆಸಿ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ವಿದ್ಯಾರ್ಥಿಗಳ ಜೊತೆಯಲ್ಲಿ ಶಿಕ್ಷಕರು ಭಾಗಿಯಾಗಿ ಮಾರ್ಗದರ್ಶನ ಮಾಡಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *