
ಯಲ್ಲಾಪುರ, ಮಾ 15 : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ತಾಲೂಕಿನ ನಂದೋಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಅಣಲಗಾರ ಕ್ರಾಸ್ ಬಳಿ ನಂದೋಳ್ಳಿ – ಅಣಲಗಾರ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಿದರು.

ನಂತರ ಕಾರಕುಂಕಿ ಕ್ರಾಸ್ ಬಳಿಯಲ್ಲಿ ಕಾರಕುಂಕಿ ತೆರಳುವ ರಸ್ತೆ ನೂತನ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನರಸಿಂಹ ಕೋಣೆಮನೆ, ಚಂದಗುಳಿ ಗ್ರಾಮಪಂಚಾಯತ ಸದಸ್ಯರಾದ ಆರ್.ಎಸ್.ಭಟ್, ತಾಲೂಕಾ ಪಂಚಾಯತ ಮಾಜಿ ಸದಸ್ಯರಾದ ನಾಗರಾಜ ಕವಡಿಕೇರೆ, ಪ್ರಮುಖರಾದ ಟಿ.ಆರ್.ಹೆಗಡೆ, ಟಿ.ವಿ.ಭಾಗ್ವತ್, ಗಣಪತಿ ಮುದ್ದೇಪಾಲ, ಸೇರಿದಂತೆ ಗ್ರಾಮಪಂಚಾಯತ ಸದಸ್ಯರು, ಪಕ್ಷದ ವಿವಿಧಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Prathidvani Yellapura
