
ಪ್ರತಿಧ್ವನಿ,ಯಲ್ಲಾಪುರ-ಯಲ್ಲಾಪುರದಲ್ಲಿ ಬಿಜೆಪಿ ಬೃಹತ್ ಎಸ್.ಟಿ.ಸಮಾವೇಶ ಆಯೋಜನೆ.
ದೇಶದ ಜನರು ಮೂರು ವಿಭಾಗಕ್ಕೆ ಖುಣಿಯಾಗಬೇಕಿರುವುದು ನಮ್ಮ ಧರ್ಮವಾಗಿದೆ ದೇಶ ಕಾಯುವ ಯೋಧ, ಅನ್ನ ನೀಡುವ ರೈತ, ದೇಶ ಕಟ್ಟುವ ಕಾರ್ಮಿಕರಿಗೆ ನಮಿಸಬೇಕಿದೆ. ದೇಶದ ನಾಯಕ ನರೇಂದ್ರಮೋದಿ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬಡವರು,ದಲಿತರು ಹಾಗು ವಿಶೇಷವಾಗಿ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಏಳಿಗೆಗೆ ಶ್ರಮಿಸಿ ಹೊಸ ಯೋಜನೆಗಳ ಅನುಷ್ಟಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ ಬಿಜೆಪಿ ಭವಿಷ್ಯದ ಭರವಸೆಯಾಗಿದೆ. ಕ್ಷೇತ್ರದ ಏಳಿಗೆಗೆ ಕಂಕಣ ಬದ್ದನಾಗಿ ಬರಪೀಡಿತ ಪ್ರದೇಶಗಳಿಗೆ ನೀರುಣಿಸಿ, ರೈತರ ಬಾಳು ಹಸನಾಗಿಸುವ ಪ್ರಯತ್ನ ಯಶಸ್ವಿಯಾಗಿದ್ದು ಇನ್ನಷ್ಟು ಅಭಿವೃದ್ಧಿ ಯೋಜನೆ ಆಗಬೇಕಿದೆ. ಈ ನಿಟ್ಟಿನಲ್ಲಿ ಚುನಾವಣ ಪೂರ್ವ ತಯಾರಿ ಪ್ರಾರಂಭವಾಗಿದ್ದು ನನ್ನ ಕ್ಷೇತ್ರದ ಜನರ ಮುಂದೆ ನನ್ನ ಅಭಿವೃದ್ಧಿ ಜೋಳಿಗೆ ಹಿಡಿದು ಆಶಿರ್ವಾದ ಬೇಡುತ್ತೇನೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಅವರು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎಸ್.ಟಿ ಸಮುದಾಯಗಳ ಬೃಹತ್ ಸಮಾವೇಶ ಉದ್ಘಾಟಿಸಿ ಭಾರತಮಾತೆ, ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ ಉಪಾದ್ಯರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ರಾಜ್ಯಾದ್ಯಂತ ಸಮುದಾಯಗಳ ಸಮಾವೇಶ ಆಯೋಜಿಸಿ ತಮ್ಮ ಪಕ್ಷದ ಭವಿಷ್ಯದ ಯೋಜನೆಗಳು ಮತ್ತು ಸಮುದಾಯಕ್ಕೆ ತಮ್ಮ ಪಕ್ಷದಿಂದ ಮಾಡಿರುವ ಅನುಕೂಲಗಳ ಕುರಿತು ಜನತೆಗೆ ತಿಳಿಸುವ ಉದ್ದೇಶವಿದ್ದು ಸಭೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆಗಮಿಸಬೇಕಿತ್ತು ಕಾರಣಾಂತರಗಳಿಂದ ಸಭೆಗೆ ಗೈರಾದರು.
ಭಾರತೀಯ ಜನತಾ ಪಕ್ಷದ ಅಡಿಯಲ್ಲಿ ಎಸ್.ಟಿ.ಸಮುದಾಯಗಳ ಉನ್ನತೀಕರಣಕ್ಕೆ ಕೈಗೊಳ್ಳಲಾದ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ರಾಜ್ಯ ಎಸ್.ಟಿ ಮೋರ್ಚಾ ಪ್ರಧಾನಕಾರ್ಯದರ್ಶಿ ನರಸಿಂಹ ನಾಯಕ್, ಉಪಾಧ್ಯಕ್ಷ ಸಿ.ಪಿ.ಪಾಟೀಲ್ , ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್.ಟಿ.ಪಾಟೀಲ್, ಜಿಲ್ಲಾ ರೈತ ಮೋರ್ಚಾ ಪ್ರಮುಖ ಮಹೇಶ್ ಹೊಸಕೊಪ್ಪ ಮಾತನಾಡಿದರು.
ರೇಖಾಭಟ್ ಅವರ ವಂದೇಮಾತರಂ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂತೋಷ್ ತಳವಾರ್ ಸ್ವಾಗತಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ ಪ್ರಾಸ್ತಾವಿಕ ನುಡಿದರು. ನರಸೂರಿನ ದುರ್ಗಾಪರಮೇಶ್ವರಿ ಭಜನಾ ತಂಡ ಸ್ವಾಗತ ಗೀತೆ ಹಾಡಿದರು. ಉಮೇಶ್ ಬಂಕಾಪುರ ನಿರೂಪಿಸಿದರು. ಯಲ್ಲಾಪುರ ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್ ವಂದಿಸಿದರು. ಸಭೆಗೆ ಸುಮಾರು 5000 ಕ್ಕಿಂತ ಅಧಿಕ ಮಂದಿ ಭಾಗವಹಿಸಿದ್ದರು. ಎಲ್ಲರಿಗು ಮದ್ಯಹ್ನ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಚುನಾವಣೆಗು ಪೂರ್ವ ವಿರೋಧಿಗಳಿಗೆ ಹೆಬ್ಬಾರ್ ತನ್ನೊಂದಿಗಿರುವ ಎಸ್.ಟಿ ಸಮುದಾಯದ ಬಲವನ್ನು ಸಮಾವೇಶದ ಮೂಲಕ ತೋರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಯಲ್ಲಾಪುರ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್, ಮುಂಡಗೋಡು ಮಂಡಲಾಧ್ಯಕ್ಷ ನಾಗಭೂಷಣ್ ಹಾವಣಗಿ, ಯುವ ಮುಖಂಡ ವಿವೇಕ್ ಹೆಬ್ಬಾರ್, ಶ್ರೀಕಾಂತ್ ಶೆಟ್ರು, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುನಂದದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣ್ಕರ್, ಪ್ರಮುಖರಾದ ವಿಜಯ್ ಮಿರಾಶಿ, ಸುಜಾತಾ ಸಿದ್ದಿ, ವೀಣಾ ಸಿದ್ದಿ, ಎಲ್.ಟಿ.ಪಾಟೀಲ್, ರವಿಗೌಡ ಪಾಟೀಲ್, ರೇಖಾ ಹೆಗಡೆ ,ಉಷಾ ಹೆಗಡೆ, ಗುಡ್ಡಪ್ಪ ಕಾತೂರ್, ಉಮೇಶ್ ಬಿಜಾಪುರ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಹೆಬ್ಬಾರ್ ಜನಪರ ನಾಯಕ ಬಡವರ ದುರ್ಬಲರ ಕಷ್ಟಗಳನ್ನು ಸಮಾದಾನದಿಂದ ಆಲಿಸಿ ಕೈಲಾದ ಸಹಾಯ ಮಾಡಿ ಬಗೆಹರಿಸುವ ಮನಸ್ಸಿನ ವ್ಯಕ್ತಿ ಎಂಬುದನ್ನು ಕಾರ್ಯಕ್ರಮದ ವೇದಿಕೆಯಲ್ಲಿ ತಾಳ್ಮೆಯಿಂದ ಜನರ ಕಷ್ಟಗಳನ್ನು ಆಲಿಸಿದರು
ಎಸ್.ಟಿ ಮೋರ್ಚಾ ಬೃಹತ್ ಸಮಾವೇಶದಲ್ಲಿ ನೂರಾರು ಸಂಖ್ಯೆಯ ನಾಗರಿಕರು ವಿಶೇಷವಾಗಿ ಮಹಿಳೆಯರು ಸಚಿವರಿಗೆ ವಿವಿಧ ಸಮಸ್ಯೆಗಳ ಕುರಿತು ಮನವಿಪತ್ರ ಸಲ್ಲಿಸಿದರು. ಈ ವೇಳೆ ಸಚಿವ ಹೆಬ್ಬಾರ್ ಕೊಂಚವು ಬೇಸರಿಸಿಕೊಳ್ಳದೆ ಮಂದಹಾಸ ಬೀರುತ್ತ ಅವರ ಸಮಸ್ಯೆ ಆಲಿಸಿ ತಮ್ಮ ಕಾರ್ಯದರ್ಶಿ ಬಳಿ ಅವರ ಮಾಹಿತಿಯನ್ನು ನೀಡಿ ಬಗೆಹರಿಸುವ ಕುರಿತು ಸೂಚನೆ ನೀಡುತ್ತಿದ್ದರು. ಸಮಸ್ಯೆ ಹೊತ್ತು ತಂದ ಜನರು ನಗುಮೊಗದಲ್ಲಿತೆರಳುವುದು ಸಾಮಾನ್ಯವಾಗಿತ್ತು.

Prathidvani Yellapura