


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕೋಟೆ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರಾಧಾ-ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು.

ಪಟ್ಟಣ ವ್ಯಾಪ್ತಿಯ ಪುಟಾಣಿಗಳು ಮುದ್ದಾದ ರಾಧೆ ಹಾಗೂ ಕೃಷ್ಣ ವೇಷ ತೊಟ್ಟು ಸ್ಪರ್ಧೆಯಲ್ಲಿ ಪಾಲ್ಗೊಂಡು ನೋಡುಗರನ್ನು ರಂಜಿಸಿದರು.

ಮಾಸ್ಟರ್ ಆರ್ಟ್ಸ್ ಮಾಲೀಕ ಮಹೇಶ್ ಆಲ್ಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸುರಭಿ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟಣಕರ, ಕಾರ್ಯದರ್ಶಿ ಮಾಲಾ ಬಾಲೆಹೊಸೂರು, ಲಕ್ಷ್ಮೀ ಮರಾಠಿ ಉಪಸ್ಥಿತರಿದ್ದರು.

ಪವಿತ್ರ ಪ್ರಾರ್ಥಿಸಿದರು. ಡಿಂಪಲ್ ಅಲಗೇರಿ ಸ್ವಾಗತಿಸಿದರು. ಸ್ಮಿತಾ ಥೋರಸ್ಕರ ಕಾರ್ಯಕ್ರಮ ನಿರ್ವಹಿಸಿದರು. ಸಾಕ್ಷಿ ಮುರ್ಕುಂಬಿ ವಂದಿಸಿದರು.
Prathidvani Yellapura