
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಪಟ್ಟಣದ ಶಾರದಾಗಲ್ಲಿ ಅಂಬೇಡ್ಕರ್ ಭವನದಲ್ಲಿ ಹರಳಯ್ಯ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾವ್ ಅವರ ಜಯಂತಿಯನ್ನು ಭಕ್ತಿ-ಭಾವಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಲೋಕೇಶ್ ಪಾಟಣಕರ್ ಹಾಗೂ ಯಲ್ಲಾಪುರದ ನಿವೃತ್ತ ತಹಶೀಲ್ದಾರ್ ತುಳಸಿ ಪಾಲೇಕರ್ ಅವರಿಗೆ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಅಂ.ಸೇ.ಸಂ ಅಧ್ಯಕ್ಷ ಲೋಕೇಶ್ ಪಾಟಣಕರ್, ಉಪಾಧ್ಯಕ್ಷ ಅನಿಲ್ ಮರಾಠೆ, ಕಾರ್ಯದರ್ಶಿ ಸಂತೋಷ್ ಪಾಟಣಕರ್ ಶಿಕ್ಷಕ ಡಾ. ನವೀನ್ ಕುಮಾರ , ನಿವೃತ್ತ ತಹಶೀಲ್ದಾರ್ ತುಳಸಿ ಪಾಲೇಕರ್ ಹಾಗೂ ವರಮಹಾಲಕ್ಷ್ಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪುಷ್ಪಾಂಜಲಿ ಸ್ವಾಗತಿಸಿದರು. ಸ್ಮಿತಾ ಮೊರಸ್ಕರ್ ಕಾರ್ಯಕ್ರಮ ನಿರ್ವಹಿಸಿದರು ಮತ್ತು ವಂದಿಸಿದರು.



