
ಪ್ರತಿಧ್ವನಿ ಯಲ್ಲಾಪುರ : ಯುಗಾದಿ ಸಂಭ್ರಮಾಚರಣೆಯ ಪ್ರಮುಖ ಘಟ್ಟ ಪಂಚಾಂಗ ಪಠಣ- ವೇ.ಪಂ.ಗೋಪಾಲಕೃಷ್ಣ ಭಟ್ ಹಂಡ್ರಮನೆ ಅವರಿಗೆ ಸಮಿತಿ ಅಧ್ಯಕ್ಷ ವಿಶಾಲ್ ವಾಳಂಬಿಯವರಿಂದ ಗೌರವದ ಆಹ್ವಾನ. , ಯುಗಾದಿ ಉತ್ಸವಕ್ಕೆ ರಂಗು ತುಂಬಲು ಸಮಿತಿ ಉಪಾಧ್ಯಕ್ಷ ಮಹೇಶ್ ನಾಯ್ಕ್ ನೇತೃತ್ವದಲ್ಲಿ ರವೀಂದ್ರ ನಗರದಲ್ಲಿ ಕೇಸರಿ ಪತಾಕೆ ಸಂಭ್ರಮ. ವಿಜಯ್ ಮಿರಾಶಿ ನೇತೃತ್ವದಲ್ಲಿ ಯುಗಾದಿ ಉತ್ಸವದ ಯಶಸ್ಸಿಗೆ ವಿಷ್ಣು ಸಮಾಜದಿಂದ 51,000 ಆರ್ಥಿಕ ದೇಣಿಗೆ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ರವೀಂದ್ರ ನಗರದಲ್ಲಿ ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಉಪಾಧ್ಯಕ್ಷರಲ್ಲಿ ಓರ್ವರಾದ ಮಹೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಸ್ಥಳೀಯ ಯುವಕರ ತಂಡ ನಗರ ಸೌಂದರ್ಯಕ್ಕೆ ಕೇಸರಿ ಪತಾಕೆ ಕಟ್ಟಲು ಪ್ರಾರಂಭಿಸಿದರು.

ಯುಗಾದಿ ಉತ್ಸವ ಎಂದರೆ ಹತ್ತು ಹಲವು ಖರ್ಚುಗಳ ಉತ್ಸವ ಧಾರ್ಮಿಕ ಆಚರಣೆ ಮತ್ತು ಶ್ರಮಾಧಾನದ ಜೊತೆಯಲ್ಲಿ ಆರ್ಥಿಕ ಕ್ರೂಡೀಕರಣವು ಸಹ ಒಂದು ಪ್ರಮುಖ ಭಾಗವಾಗಿದೆ ಈ ಹಿನ್ನೆಲೆಯಲ್ಲಿ ಯುಗಾದಿ ಉತ್ಸವ ಸಮಿತಿಯ ಕೋರಿಕೆ ಮೇರೆಗೆ ಸಾಮಾಜಿಕ ಕಾರ್ಯಕರ್ತ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಅವರು ಉತ್ತರ ಭಾರತದಿಂದ ವ್ಯಾಪಾರಕ್ಕಾಗಿ ಯಲ್ಲಾಪುರ ಬಂದು ನೆಲೆಸಿರುವ ವಿಷ್ಣು ಸಮಾಜದ ವ್ಯಾಪಾರಸ್ಥರಿಂದ ಸಮಿತಿಗೆ 51,000 ಮೊತ್ತದ ಹಣವನ್ನು ದೇಣಿಗೆ ರೂಪದಲ್ಲಿ ಕೊಡಿಸಿದರು.

ಯುಗಾದಿ ಉತ್ಸವದ ಪ್ರಮುಖ ವಿಷಯ ಪವಿತ್ರವಾದ ಪಂಚಾಂಗ ಪಠಣ ಇಂತಹ ಮಹತ್ಕಾರ್ಯ ಹಲವು ವರ್ಷಗಳಿಂದ ನೆರವೇರಿಸುತ್ತಾ ಬಂದಿರುವ ಹಿರಿಯರು ವೇದಮೂರ್ತಿ ಗೋಪಾಲಕೃಷ್ಣ ಭಟ್ ಹಂಡ್ರಮನೆ ಅವರನ್ನು ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ವಿಶಾಲ್ ವಾಳಂಬಿ ಮತ್ತು ಸಮಿತಿ ಪ್ರಮುಖ ಸಿದ್ದು ನಂದೊಳ್ಳಿ ಮಠ ಅವರು ಭೇಟಿಯಾಗಿ ನಮಸ್ಕರಿಸಿ ಪಂಚಾಂಗ ಪಠಣದಂತ ಪವಿತ್ರಕಾರ್ಯವನ್ನು ನೆರವೇರಿಸಿಕೊಡುವಂತೆ ಯಲ್ಲಾಪುರದ ಸಮಸ್ತ ಹಿಂದು ಕುಟುಂಬಗಳ ಪರವಾಗಿ ಗೌರವಯುತವಾಗಿ ಆಹ್ವಾನಿಸಲಾಯಿತು.
ಉತ್ಸವದ ಯಶ್ಸಿಗೆ ಹೆಚ್ಚಿನ ಧನ ಸಹಾಯ ನೀಡಲಿಚ್ಚಿಸುವ ಹಿಂದು ಕುಲಕೋಟಿ ಬಂಧುಗಳು ಸಂಘಟಕರ‌್ನು ಸಂಪರ್ಕಿಸಿ ದೇಣಿಗೆ ನೀಡಬಹುದಾಗಿದೆ.






Prathidvani Yellapura